ಸಮಾನತೆ ಮೌಲ್ಯ ಮೊದಲು ಕೊಟ್ಟವರು ರೇಣುಕಾಚಾರ್ಯರು

| Published : Mar 20 2025, 01:16 AM IST

ಸಮಾನತೆ ಮೌಲ್ಯ ಮೊದಲು ಕೊಟ್ಟವರು ರೇಣುಕಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಲಗಿಯ ಯಾದವಾಡದಲ್ಲಿ ನಡೆದ ರೇಣುಕಾಚಾರ್ಯರ ಜಯಂತಿ ಉತ್ಸವ ಸಮಾರಂಭವನ್ನು ಸವದತ್ತಿ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ವೀರಶೈವ ಧರ್ಮ ಪರಂಪರೆಯಲ್ಲಿ ಅಷ್ಟಾವರ್ಣ, ಪಂಚಾಚಾರ, ಷಟಸ್ಥಲಗಳು ಇವು ಮೂರು ಚಿಂತನೆಗಳ ಮೌಲ್ಯಗಳ ಪ್ರತಿಪಾದನೆಯಿಂದ ಎಲ್ಲಾ ಸಮಾಜದ ಜನರಿಗೆ ಉಪಯೋಗವಾಗುವ ಸಮಾನತೆ ಮೌಲ್ಯಗಳನ್ನು ಸಮಾಜಕ್ಕೆ ಕೊಟ್ಟವರು ಜಗದ್ಗುರು ಶ್ರೀ ರೇಣುಕಾಚಾರ್ಯರು ಎಂದು ಸವದತ್ತಿ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದ ರೇಣುಕಾಚಾರ್ಯರ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಧರ್ಮ ಪರಂಪರೆಗೆ ಬಹಳ ಹೆಸರುಗಳು ಇವೆ. ಶಾಶ್ವತ ಮಾನವೀಯ ಮೌಲ್ಯಗಳನ್ನು ಯಾವ ಧರ್ಮ ಒಳಗೊಂಡಿರುತ್ತದೆಯೋ ಅದಕ್ಕೆ ಸನಾತನ ಧರ್ಮ ಎನ್ನುತ್ತಾರೆ. ಜೀವನದ ಮೌಲ್ಯಗಳನ್ನು ವೀರಶೈವ ಧರ್ಮ ಒಳಗೊಂಡಿದೆ ಎಂದರು.

ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರಾಘರಾಜೇಂದ್ರ ಶಿವಾಚಾರ್ಯರು ಮಾತನಾಡಿ, ಸಮಾಜದ ಕೆಲಸವೆ ಬೇರೆ, ಧರ್ಮದ ಕೆಲಸವೆ ಬೇರೆ. ಜಾತಿಯು ಕತ್ರಿಯ ಕೆಲಸ ಮಾಡುತ್ತದೆ. ಧರ್ಮ ಸೂಜಿಯ ಕೆಲಸ ಮಾಡುತ್ತದೆ. ಜಾತಿಯು ನಮ್ಮನ್ನು ಹಲವಾರು ತುಂಡುಗಳನ್ನಾಗಿ ಮಾಡುತ್ತದೆ. ಧರ್ಮವು ಸೂಜಿಯಂತೆ ಎಲ್ಲರನ್ನು ಒಂದು ಮಾಡುವ ಕೆಲಸ ಮಾಡುತ್ತದೆ. ನಾವೆಲ್ಲರೂ ಧರ್ಮವಂತರಾಗಬೇಕು ಅನ್ನುವ ಉಪದೇಶವನ್ನು ನೀಡಿದವರು ಶ್ರೀಮದ ಜಗದ್ಗುರು ರೇಣುಕಾಚಾರ್ಯರು. ನಮ್ಮ ಮಕ್ಕಳಿಗೆ ಮುಸ್ಲಿಮರ ಧರ್ಮಗ್ರಂಥ ಕುರಾನ, ಕ್ರಿಶ್ಚಿಯನರ ಧರ್ಮಗ್ರಂಥ ಬೈಬಲ್‌ ಅಂತ ಗೊತ್ತು ಆದರೆ ನಮ್ಮ ವೀರಶೈವ ಧರ್ಮಗ್ರಂಥ ಸಿದ್ದಾಂತ ಶಿಖಾಮನಿ ಅಂತ ಗೊತ್ತಿಲ್ಲ. ಸಿದ್ದಾಂತ ಶಿಖಾಮನಿ ಗ್ರಂಥದ ಬಗ್ಗೆ ಪ್ರತಿಯೋಬ್ಬರು ತಿಳಿದುಕೊಂಡು ತಮ್ಮ ತಮ್ಮ ಮಕ್ಕಳಲ್ಲಿ ಗ್ರಂಥ ಮತ್ತು ಧರ್ಮದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಮ್ಮ ತಾಯಿಂದರು ಮಾಡಬೇಕು ಎಂದರು.

ಸಮಾರಂಭದ ವೇದಿಕೆಯಲ್ಲಿ ಶ್ರೀ ಬಸವಲಿಂಗ ಶ್ರೀಗಳು, ಚೌಕಿಮಠದ ಶ್ರೀಗಳು, ಯಾದವಾಡ ಮತ್ತು ವಿವಿಧ ಗ್ರಾಮದ ಜಂಗಮಸಮಾಜದ ಕುಟುಂಬದವರು ಮತ್ತು ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು. ಇದಕ್ಕೂ ಮುಂಚೆ ಶರಣ ಮಾತೆಯರಿಂದ ಪವಿತ್ರ ಉದಕ ಕುಂಭ ಮತ್ತು ಮುತ್ತೈದೆಯರ ಆರತಿ ಮತ್ತು ವಾದ್ಯಮೇಳಗಳೊಂದಿಗೆ ರೇಣುಕಾಚಾರ್ಯರ ಮೂರ್ತಿ ಭವ್ಯ ಮೆವಣಿಗೆಯು ಯಾದವಾಡದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಸಮಾರಂಭ ನಡೆಯುವ ಗ್ರಾಮದೇವತೆ ಶ್ರೀ ಹೊನ್ನಮ್ಮದೇವಿ ದೇವಸ್ಥಾನದವರೆಗೆ ಸಂಭ್ರಮದಿಂದ ಜರುಗಿತು.