ಜೀವನದ ಉನ್ನತಿಗೆ ಬೆಳಕು ತೋರಿದ ರೇಣುಕಾಚಾರ್ಯರು: ಸಿದ್ದೇಶ್ವರ ಶ್ರೀ

| Published : Mar 25 2024, 12:51 AM IST

ಜೀವನದ ಉನ್ನತಿಗೆ ಬೆಳಕು ತೋರಿದ ರೇಣುಕಾಚಾರ್ಯರು: ಸಿದ್ದೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಕಾಯಕ ಮತ್ತು ದಾಸೋಹದ ಮೂಲಕ ಜೀವನದ ಶ್ರೇಯಸ್ಸಿಗೆ ದಾರಿ ತೋರಿದ ಮೂಲ ಪುರುಷರು ರೇಣುಕಾಚಾರ್ಯರು. ಅವರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಗೂಮಳಪುರ ಮಠದ ಪೀಠಾಧಿಪತಿ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕು ಆಡಳಿತದಿಂದ ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೇಣುಕಾಚಾರ್ಯರರು ಮಾನವ ಕುಲಕ್ಕೆ ಜಯವಾಗಲಿ ಎಂದು ಪ್ರತಿಪಾದನೆ ಮಾಡಿದ್ದಾರೆ. ಮಾನವ ಧರ್ಮ ಸ್ಥಾಪಿಸಿ, ಧರ್ಮದ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ್ದಾರೆ ಎಂದರು.

ತಹಸೀಲ್ದಾರ್ ಉಮಾಕಾಂತ ಹಳ್ಳೆ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳು ಪ್ರತಿಯೊಬ್ಬ ವ್ಯಕ್ತಿಯ ನೈತಿಕ ಮೌಲ್ಯ ಹೆಚ್ಚಿಸಲು ಪೂರಕವಾಗಿವೆ. ನಂಬಿಕೆ, ಶ್ರದ್ಧೆಯಿಂದ ಭಕ್ತಿ ಸಮರ್ಪಿಸಿದರೆ ಸಕಲ ಸಂಕಷ್ಟಗಳ ನಿವಾರಣೆಯಾಗುವುದು ಎಂದು ಹೇಳಿದರು. ವೀರಶೈವ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಆನೆಗುಂದಿ ಮಾತನಾಡಿ, ಯಾವ ಧರ್ಮವು ಮನಕುಲಕ್ಕೆ ಕೆಡಕನ್ನು ಬಯಸುವುದಿಲ್ಲ. ಧರ್ಮದ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಸ್ವಾಮೀಜಿ, ಚರಬಸವೇಶ್ವರ ಗದ್ದುಗೆ ಸಂಸ್ಥಾನದ ವೇದಮೂರ್ತಿ ಬಸವಯ್ಯ ಶರಣರು, ವೀರಶೈವ ಸಮಾಜದ ತಾಲೂಕು ಯುವ ಘಟಕ ಅಧ್ಯಕ್ಷರಾದ ಶಂಭುಲಿಂಗ ಗೋಗಿ, ಶರಣು ಬಿ. ಗದ್ದುಗೆ, ಜಂಗಮ ಸಮಾಜದ ಅಧ್ಯಕ್ಷ ಡಾ. ಎಂ.ಪಿ. ಹಿರೇಮಠ್, ಬಸವರಾಜ್ ಹಿರೇಮಠ, ವೀರಶೈವ ಸಮಾಜದ ಗುಂಡಪ್ಪ ತುಂಬಗಿ, ಡಾ. ಶಿವರಾಜ್ ದೇಶಮುಖ, ಬಸವರಾಜ ಆನೆಗುಂದಿ, ಅರವಿಂದ ಉಪ್ಪಿನ್, ರಾಜು ಆನೆಗುಂದಿ, ಮಲ್ಲಿಕಾರ್ಜುನ ಆಲೂರು, ವಿರೇಶ ಅಂಗಡಿ, ವಿಜಯ ಸ್ಥಾವರ ಮಠ ಇತರರಿದ್ದರು.