ಯಲಬುರ್ಗಾ: ಪ್ರತಿಯೊಬ್ಬರೂ ಮಾನವತ್ವದೊಂದಿಗೆ ಬಾಳಬೇಕು ಎನ್ನುವ ಮೂಲಕ ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲೆಂದು ಸಾರಿದ್ದಾರೆ ಎಂದು ಸಂಸ್ಥಾನ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಕಲ್ಲೂರು ಗ್ರಾಮದಲ್ಲಿ ವೀರಮಹೇಶ್ವರ ಜಂಗಮ ಕ್ಷೇಮಾಭಿವೃದ್ದಿ ಸಂಘದಿಂದ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಹಾಗೂ ತಾಲೂಕು ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವೀರಶೈವ ಲಿಂಗಾಯತ ಪರಂಪರೆಗೆ ಆದಿ ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಅಪಾರವಾಗಿದೆ. ಪಂಚಪೀಠಗಳನ್ನು ಸ್ಥಾಪಿಸುವ ಮೂಲಕ ಧರ್ಮ ಪರಂಪರೆಗೆ ಶ್ರಮಿಸಿದ್ದಾರೆ. ರೇಣುಕಾಚಾರ್ಯರ ಜಯಂತಿ ಒಂದೇ ಜಾತಿಗೆ ಸೀಮಿತವಾಗದೆ, ಎಲ್ಲ ವೀರಶೈವ ಸಮಾಜದವರು ಸೇರಿ ಆಚರಿಸಬೇಕು. ಯಲಬುರ್ಗಾದಲ್ಲಿ ರೇಣುಕಾರ್ಚಾರ ಮೂರ್ತಿ ಸ್ಥಾಪನೆ, ಮಂಗಲ ಭವನ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಮಂಜೂರು ಮಾಡಿಸಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಹಳ್ಳಿ, ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಂಪಯ್ಯಸ್ವಾಮಿ ಹಿರೇಮಠ ಮಾತನಾಡಿ, ಜಂಗಮ ಸಮಾಜದವರು ಆಚಾರ, ಸಂಸ್ಕಾರದ ಜತೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದರು. ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿರಕೋಳದ ಗುರುಸಿದ್ದೇಶ್ವರ ಸ್ವಾಮೀಜಿಗಳಿಂದ ಐದು ದಿನಗಳ ಕಾಲ ನಡದುಬಂದ ಆಧ್ಯಾತ್ಮಿಕ ಪ್ರವಚನ, ಜೀವನ ದರ್ಶನ ಪ್ರವಚನ ಮಹಾಮಂಗಲೋತ್ಸವ ನಡೆಯಿತು.

ಈ ಸಂದರ್ಭ ಗಣ್ಯರಾದ ಡಾ. ಅಂದಾನಯ್ಯ ಶ್ಯಾಡ್ಲಗೇರಿಮಠ, ಸಿದ್ದಯ್ಯ ಕಳ್ಳಿಮಠ, ಶರಣಪ್ಪ ಗಾಂಜಿ, ಮಲ್ಲಿಕಾರ್ಜುನ ಜಕ್ಕಲಿ, ಶಿವಣ್ಣ ರಾಯರಡ್ಡಿ, ಶಿವಕುಮಾರ ನಾಗಲಾಪೂರುಮಠ, ಅನಿಲ್ ಆಚಾರ, ವರದಯ್ಯ ಹೊಸಮನಿ, ಕಲ್ಲಯ್ಯ ಜಾರಗಡ್ಡಿಮಠ, ಕಲ್ಲಯ್ಯ ಹಿರೇಮಠ, ಕಲ್ಲಯ್ಯ ಸಂಗನಾಳಮಠ, ಡಾ. ಕೆ.ಜಿ. ಹಿರೇಮಠ, ಬಸವರಾಜ ಮಠದ, ಮಲ್ಲಯ್ಯ ಹಿರೇಮಠ, ಗವಿಸಿದ್ದಯ್ಯ ಹಿರೇಮಠ, ಕಲ್ಲನಗೌಡ ಪಾಟೀಲ್, ಗವಿಸಿದ್ದಯ್ಯ ಹಿರೇಮಠ, ಪ್ರಭಯ್ಯ ಸೊಪ್ಪಿಮಠ, ಡಾ. ನಾಗಯ್ಯ, ಸೋಮಲಿಂಗಯ್ಯ ಹಿರೇಮಠ, ಈಶಯ್ಯ ಶಿರೂರುಮಠ, ವಿರೂಪಾಕ್ಷಯ್ಯ ಪರಯ್ಯನಮಠ, ವಿರೂಪಾಕ್ಷಯ್ಯ ಗಂದಧ, ಮಂಜುನಾಥ ಕಡೇಮನಿ, ದೊಡ್ಡಯ್ಯ ಸಂಗನಾಳಮಠ ಸೇರಿದಂತೆ ಜಂಗಮ ಸಮಾಜದವರು, ಗ್ರಾಮಸ್ಥರು ಭಾಗವಹಿಸಿದ್ದರು.