ರೇಣುಕಾಚಾರ್ಯರ ಜಯಂತಿ ಕೇವಲ ಜಾತಿಗೆ ಸೀಮಿತವಾಗದಿರಲಿ

| Published : Mar 05 2024, 01:35 AM IST

ರೇಣುಕಾಚಾರ್ಯರ ಜಯಂತಿ ಕೇವಲ ಜಾತಿಗೆ ಸೀಮಿತವಾಗದಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಆದಿ ಜ.ರೇಣುಕಾಚಾರ್ಯರ ಜಯಂತಿ ಕೇವಲ ಜಂಗಮ ಜಾತಿಗೆ ಸೀಮಿತವಾಗಿರದೇ ಈ ಜಯಂತಿಯು ಸರ್ವ ಜನಾಂಗವನ್ನೊಳಗೊಂಡ ಜಯಂತಿಯಾಗಿ ಆಚರಿಸಿದಾಗ ಮಾತ್ರ ಇದಕ್ಕೆ ಅರ್ಥಪೂರ್ಣ ಜಯಂತಿಯಾಗುತ್ತದೆ.

ಯಲಬುರ್ಗಾ: ತಾಲೂಕಿನ ಕಲ್ಲೂರ ಗ್ರಾಮದ ವೀರಮಹೇಶ್ವರ ಜಂಗಮ ಕ್ಷೇಮಾಭಿವೃದ್ದಿ ಸಂಘದಿಂದ ಜ.ರೇಣುಕಾಚಾರ್ಯರ ಜಯಂತ್ಯುತ್ಸವ ನಿಮಿತ್ತ ಸೋಮವಾರ ಬೆಳಗ್ಗೆ ಜಂಗಮ ವಟುಗಳಿಗೆ ಶಿವದೀಕ್ಷೆ ಹಾಗೂ ಭಾವಚಿತ್ರ ಮೆರವಣಿಗೆ, ಕುಂಭ ಮೇಳ ಕಾರ್ಯಕ್ರಮಗಳು ಜರುಗಿದವು.ಬಳಿಕ ಕುಕನೂರು ಅನ್ನದಾನೇಶ್ವರ ಮಠದ ಮಹಾದೇವಯ್ಯ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಆದಿ ಜ.ರೇಣುಕಾಚಾರ್ಯರ ಜಯಂತಿ ಕೇವಲ ಜಂಗಮ ಜಾತಿಗೆ ಸೀಮಿತವಾಗಿರದೇ ಈ ಜಯಂತಿಯು ಸರ್ವ ಜನಾಂಗವನ್ನೊಳಗೊಂಡ ಜಯಂತಿಯಾಗಿ ಆಚರಿಸಿದಾಗ ಮಾತ್ರ ಇದಕ್ಕೆ ಅರ್ಥಪೂರ್ಣ ಜಯಂತಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗದಗನ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರ ಆಶೀರ್ವಚನ ನೀಡಿದರು.ಶಿವದೀಕ್ಷಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಲಬುರ್ಗಾ ಶ್ರೀಧರ ಮುರುಡಿ ಬಸವಲಿಂಗೇಶ್ವರ ಶ್ರೀಗಳು ವಹಿಸಿದ್ದರು. ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ ತಿಪ್ಪೇರುದ್ರಸ್ವಾಮಿ ಮಾತನಾಡಿದರು. ಯಲಬುರ್ಗಾ ಹಿರೇಮಠದ ಸಿದ್ದರಾಮೇಶ್ವರ ಶ್ರೀಗಳು, ಮಂಗಳೂರು ಸಿದ್ದಲಿಂಗ ಶ್ರೀಗಳು, ಕನಕಗಿರಿ ಚನ್ನಮಲ್ಲ ಶ್ರೀಗಳು, ರಾಜೂರನ ಅಭಿನವ ಪಂಚಾಕ್ಷರ ಶ್ರೀಗಳು, ಕಲ್ಲೂರ ವೀರಯ್ಯಜ್ಜನವರು ವಹಿಸಿದ್ದರು.ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಅಧ್ಯಕ್ಷ ವಿರೂಪಾಕ್ಷಸ್ವಾಮಿ ಸಂಗಾಪುರ ಹಿರೇಮಠ, ಸಮಾಜದ ಮುಖಂಡರಾದ ಎಸ್.ಬಿ. ಹಿರೇಮಠ ಗಂಗಾವತಿ, ಶಾಂತಮಲ್ಲಯ್ಯ, ಗ್ರಾಪಂ ಅಧ್ಯಕ್ಷ ನಾಗಯ್ಯ ಗುರುಮಠ, ಮಲ್ಲಯ್ಯ ಗುರುಮಠ, ಕಲ್ಲಯ್ಯ ಜಾರಗಡ್ಡಿಮಠ, ವರದಯ್ಯ ಹೊಸ್ಮನಿ, ಶಿವಲಿಂಗಯ್ಯ ಶಂಕ್ರಿ ಹಿರೇಮಠ, ಶರಣಯ್ಯ ಹೊಸ್ಮನಿ, ಡಾ.ಕಲ್ಲಯ್ಯ ಹಿರೇಮಠ, ವೀರೇಶ ಹೊಸ್ಮನಿ, ಪ್ರಭಯ್ಯ ಶಾಸ್ತ್ರೀ, ಕಲ್ಲಯ್ಯ ಹಿರೇಗೌಡ್ರ ಮತ್ತಿತರರು ಇದ್ದರು.