ಬಾಳೆಹೊನ್ನೂರುರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ 33ನೇ ವರ್ಷದ ಅನ್ನದಾನ, ದೀಪೋತ್ಸವ ಹಾಗೂ ಅಯ್ಯಪ್ಪ ಉತ್ಸವ ಕಾರ್ಯಕ್ರಮಕ್ಕೆ ಗುರುವಾರ ವಿದ್ಯುಕ್ತ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ 33ನೇ ವರ್ಷದ ಅನ್ನದಾನ, ದೀಪೋತ್ಸವ ಹಾಗೂ ಅಯ್ಯಪ್ಪ ಉತ್ಸವ ಕಾರ್ಯಕ್ರಮಕ್ಕೆ ಗುರುವಾರ ವಿದ್ಯುಕ್ತ ಚಾಲನೆ ದೊರೆಯಿತು.ರೇಣುಕನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಅಂಗವಾಗಿ ಗುರುವಾರ ಬೆಳಿಗ್ಗೆ ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್ ನೇತೃತ್ವದಲ್ಲಿ ಪಟ್ಟಣದ ಭದ್ರಾನದಿಯಿಂದ ಕನ್ನಿಸ್ವಾಮಿಗಳು ಆಗ್ರೋದಕ ತರುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಉಷಾ ಪೂಜೆ, ಶ್ರೀ ಸ್ವಾಮಿ ಅಷ್ಟೋತ್ತರ, ಮಹಾಪೂಜಾ, ಮಂಗಳಾರತಿ ನಡೆಯಿತು. ಅಯ್ಯಪ್ಪಸ್ವಾಮಿ ದೀಪೋತ್ಸವದಲ್ಲಿ ಪ್ರಸನ್ನ ಗಣಪತಿ ಕಲಾತಂಡದ ಕಲಾವಿದರಾದ ಶೃತಿ ಸುನೀಲ್ ಪ್ರಭು, ಪ್ರಕಾಶ್ ಆಚಾರ್ಯ, ಸುಧಾಕರ್, ಲೀಲಾ ರವಿಕುಮಾರ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಸಂಜೆ ರೇಣುಕನಗರದ ಗಣಪತಿ ದೇವಸ್ಥಾನದಿಂದ ಹೊರಟ ಉತ್ಸವ ರಾಜಬೀದಿ ಕೊಪ್ಪಲು ಚೌಡೇಶ್ವರಿ ದೇವಸ್ಥಾನ, ಎನ್.ಆರ್.ಪುರ ರಸ್ತೆ ಕೆರೆ ಚೌಡೇಶ್ವರಿ ದೇವಸ್ಥಾನದ ಮೂಲಕ ಸಾಗಿ ಸಮಾಪ್ತಿಗೊಂಡಿತು. ನೂರಾರು ಮಾಲಾಧಾರಿಗಳು, ಭಕ್ತರು ಪಾಲ್ಗೊಂಡಿದ್ದರು. ಅಯ್ಯಪ್ಪಸ್ವಾಮಿ ಉತ್ಸವದಲ್ಲಿ ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಡಿ. ಮಹೇಂದ್ರ, ಗೌರವಾಧ್ಯಕ್ಷ ಎಂ.ಆರ್.ರವೀಂದ್ರ, ಪ್ರಧಾನ ಕಾರ್ಯದರ್ಶಿ ರವೀಂದ್ರಾಚಾರ್, ಖಜಾಂಚಿ ಬಿ.ಜಗದೀಶ್ಚಂದ್ರ, ಉಪಾಧ್ಯಕ್ಷ ನಾಗರಾಜ್ ದುರ್ಗಾಂಭ, ಸಹದೇವ್ ಸಾಗರ್, ರವಿ, ಸಹ ಕಾರ್ಯದರ್ಶಿ ಚೇತನ್ ಆಚಾರ್ಯ, ರಾಕೇಶ್, ರಮೇಶ್ ಕೋಟಿ, ಸಹ ಖಜಾಂಚಿ ಸಂದೀಪ್ ಶೆಟ್ಟಿ, ಸಂಚಾಲಕ ಎಚ್.ಆರ್.ಆನಂದ್, ಪ್ರಭಾಕರ್ ಪ್ರಣಸ್ವಿ, ಸುರೇಂದ್ರ ಕಿಣಿ, ಪ್ರಕಾಶ್ ಬನ್ನೂರು, ನಟರಾಜ್, ಮದನ್, ಮಂಜುನಾಥ್ ಮತ್ತಿತರರು ಹಾಜರಿದ್ದರು.೦೧ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ 33ನೇ ವರ್ಷದ ಅನ್ನದಾನ, ದೀಪೋತ್ಸವ ಹಾಗೂ ಅಯ್ಯಪ್ಪ ಉತ್ಸವ ಕಾರ್ಯಕ್ರಮಕ್ಕೆ ಗುರುವಾರ ವಿದ್ಯುಕ್ತ ಚಾಲನೆ ದೊರೆಯಿತು. ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ಸಮಿತಿಯ ಅಧ್ಯಕ್ಷ ಆರ್.ಡಿ.ಮಹೇಂದ್ರ ಮತ್ತಿತರರು ಹಾಜರಿದ್ದರು.