ಸಾಲದ ಕಂತು ಸಕಾಲಕ್ಕೆ ಮರುಪಾವತಿಸಿ: ಡಾ.ರಾಜಕುಮಾರ್

| Published : Sep 16 2025, 12:03 AM IST

ಸಾಲದ ಕಂತು ಸಕಾಲಕ್ಕೆ ಮರುಪಾವತಿಸಿ: ಡಾ.ರಾಜಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಸಹಕಾರಿ ಕ್ಷೇತ್ರದಲ್ಲಿ ಸಾಲ ವಸೂಲಾತಿಯಲ್ಲೂ ಮುಂಚೂಣಿಯಲ್ಲಿದೆ. ಆದ್ದರಿಂದ ಸದಸ್ಯರು ಪಡೆದ ಸಾಲಗಳ ಕಂತುಗಳನ್ನು ಸಕಾಲದಲ್ಲಿ ಮರು ಪಾವತಿಸಬೇಕು. ಆ ಮೂಲಕ ಸೊಸೈಟಿ ಏಳ್ಗೆಗಾಗಿ ಸಹಕರಿಸಬೇಕು ಎಂದು ಅಧ್ಯಕ್ಷ ಡಾ. ಎಚ್.ಪಿ. ರಾಜಕುಮಾರ್ ಹೇಳಿದ್ದಾರೆ.

- ಹೊನ್ನಾಳಿ ಅರ್ಬನ್ ಸೊಸೈಟಿ 26ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಸಹಕಾರಿ ಕ್ಷೇತ್ರದಲ್ಲಿ ಸಾಲ ವಸೂಲಾತಿಯಲ್ಲೂ ಮುಂಚೂಣಿಯಲ್ಲಿದೆ. ಆದ್ದರಿಂದ ಸದಸ್ಯರು ಪಡೆದ ಸಾಲಗಳ ಕಂತುಗಳನ್ನು ಸಕಾಲದಲ್ಲಿ ಮರು ಪಾವತಿಸಬೇಕು. ಆ ಮೂಲಕ ಸೊಸೈಟಿ ಏಳ್ಗೆಗಾಗಿ ಸಹಕರಿಸಬೇಕು ಎಂದು ಅಧ್ಯಕ್ಷ ಡಾ. ಎಚ್.ಪಿ. ರಾಜಕುಮಾರ್ ಹೇಳಿದರು.

ಪಟ್ಟಣದ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 26ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2024-25ನೇ ಸಾಲಿಗೆ ₹1.11 ಕೋಟಿ ನಿವ್ವಳ ಲಾಭ ಗಳಿಸಿದೆ. ಶೇ.12ರಷ್ಟು ಷೇರು ಡಿವಿಡೆಂಡ್‌ ಘೋಷಣೆ ಮೂಲಕ ಸದಸ್ಯರ ಹಿತಕಾಯುವ ಕೆಲಸವನ್ನು ಮಾಡುತ್ತಿದೆ ಎಂದರು.

ಸೊಸೈಟಿಯು 1999ನೇ ಸಾಲಿನಲ್ಲಿ ಆರಂಭಗೊಂಡಿದ್ದು, ಇದೀಗ 26 ವಸಂತಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದೆ. ಸರ್ವ ಸದಸ್ಯರ ಸಹಕಾರದಿಂದ, ಪಾರದರ್ಶಕ ಆಡಳಿತ ವ್ಯವಸ್ಥೆ ಹಾಗೂ ಸೊಸೈಟಿ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಇದರ ಪರಿಣಾಮ ಹೊನ್ನಾಳಿ, ಸಾಸ್ವೆಹಳ್ಳಿ, ನ್ಯಾಮತಿಯಲ್ಲಿ ಒಟ್ಟು 3 ಶಾಖೆಗಳನ್ನು ಹೊಂದಿದೆ. ನ್ಯಾಮತಿಯಲ್ಲಿ ಬೆಳ್ಳಿಹಬ್ಬದ ಬೃಹತ್ ಕಟ್ಟಡ ನಿರ್ಮಾಣ ಭರದಿಂದ ಸಾಗಿದೆ ಎಂದು ತಿಳಿಸಿದರು.

ಸೊಸೈಟಿಯ ಎಲ್ಲ ಮೂರು ಶಾಖೆಗಳೂ ಗಣಕೀಕರಣಗೊಂಡಿವೆ. 2024-25ನೇ ಸಾಲಿನಲ್ಲಿ ಒಟ್ಟಾರೆಯಾಗಿ ₹167 ಕೋಟಿ ವ್ಯವಹಾರ ಮಾಡುವ ಮೂಲಕ ಸಾಧನೆ ಮಾಡಿ, ಜನರಿಂದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೊಸೈಟಿ ಆರಂಭಗೊಂಡಾಗ 1600 ಸದಸ್ಯರು ಇದ್ದರು. ₹17 ಲಕ್ಷ ಷೇರು ಬಂಡವಾಳ ಹೊಂದಲಾಗಿತ್ತು. ಆದರೆ, ಇಂದು 3372 ಸದಸ್ಯರನ್ನು ಹೊಂದಿ ₹3.62 ಕೋಟಿ ಷೇರು ಬಂಡವಾಳ ಹೊಂದಿದೆ. ಠೇವಣಿ ಹಣ ₹21.64 ಕೋಟಿ ಇದೆ. 31-3-2025ಕ್ಕೆ ಸಂಘದ ದುಡಿಯುವ ಬಂಡವಾಳ ₹34.32 ಕೋಟಿ ಇದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಆಡಳಿತ ಸಲಹೆಗಾರರಾದ ಕುಮಾರ್, ಸಿಇಒ ಎಚ್.ಪಿ. ದಿನೇಶ್, ಸೊಸೈಟಿ ಉಪಾಧ್ಯಕ್ಷ ಎಚ್.ವೀರೇಶ್, ನಿರ್ದೇಶಕರಾದ ಎಚ್.ಎಂ. ಅರುಣ್‌ಕುಮಾರ್, ಜಿ.ಆರ್. ಪ್ರಕಾಶ್, ಎಚ್.ಕೆ. ರೂಪ, ಎನ್.ಜಯರಾವ್, ಎಚ್.ಎಂ.ಶಿವಮೂರ್ತಿ, ಬಿ.ಎಚ್.ಉಮೇಶ್, ಡಾ.ಬಿ.ಎಚ್, ರಾಜಾನಾಯ್ಕ್, ಎಚ್.ಬಿ.ಮೋಹನ್, ಸಿ.ಕೆ.ರವಿಕುಮಾರ್, ಕೆ.ಆರ್.ನಾಗರಾಜ್, ಎನ್.ಪ್ರಸಾದ್, ಎನ್.ಎನ್.ನಾಗರತ್ನ, ಡಿ.ಎನ್.ಶಾಂತಲಾ, ಶಾಖಾ ವ್ಯವಸ್ಥಾಪಕರಾದ ಆರ್.ಎಚ್.ರಂಗನಾಥ್, ಎಚ್.ಚಂದ್ರಶೇಖರ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

- - -

(ಕೋಟ್‌) ಸದಸ್ಯತ್ವ ಪಡೆದವರು ಆಕಸ್ಮಿಕವಾಗಿ ನಿಧನರಾದಲ್ಲಿ ಸೊಸೈಟಿ ವತಿಯಿಂದ ₹5 ಸಾವಿರ ಕೊಡಲಾಗುತ್ತಿದೆ. ಗುಂಪು ವಿಮಾ ವ್ಯಾಪ್ತಿಗೆ ಬರುವ ಸದಸ್ಯರಿಗೆ ಯಾವುದೇ ಅಫಘಾತದಿಂದ ಮರಣ ಹೊಂದಿದರೆ ₹1 ಲಕ್ಷ ಹಣವನ್ನು ವಾರಸುದಾರರಿಗೆ ನೀಡಲಾಗುತ್ತಿದೆ.

- ಡಾ. ಎಚ್‌.ಪಿ. ರಾಜಕುಮಾರ್‌, ಅಧ್ಯಕ್ಷ.

- - -

-15ಎಚ್.ಎಲ್.ಐ1:

ವಾರ್ಷಿಕ ಮಹಾಸಭೆಯನ್ನು ಸೊಸೈಟಿ ಅಧ್ಯಕ್ಷ ಡಾ. ಎಚ್.ಬಿ.ರಾಜಕುಮಾರ್ ಉದ್ಘಾಟಿಸಿ ಮಾತನಾಡಿದರು.