‘ಅಹಿತಕರ ಘಟನೆ ವಿಡಿಯೋ ಮುನ್ನ ಪೊಲೀಸರಿಗೆ ತಿಳಿಸಿರಿ’

| Published : Apr 23 2025, 02:03 AM IST

‘ಅಹಿತಕರ ಘಟನೆ ವಿಡಿಯೋ ಮುನ್ನ ಪೊಲೀಸರಿಗೆ ತಿಳಿಸಿರಿ’
Share this Article
  • FB
  • TW
  • Linkdin
  • Email

ಸಾರಾಂಶ

ಅಹಿತಕರ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಥವಾ ಪೋಸ್ಟ್‌ಗಳನ್ನು ಹಾಕುವ ಮುನ್ನ ಪೊಲೀಸರಿಗೆ ದೂರು ನೀಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಹಿತಕರ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಥವಾ ಪೋಸ್ಟ್‌ಗಳನ್ನು ಹಾಕುವ ಮುನ್ನ ಪೊಲೀಸರಿಗೆ ದೂರು ನೀಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮನವಿ ಮಾಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಅಹಿತಕರ ರೀತಿಯ ಘಟನೆಗಳು ನಡೆದರೆ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಆದರೆ ಕೆಲವು ರೋಡ್ ರೇಜ್‌ ಸೇರಿದಂತೆ ಇತರೆ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಜನರಿಗೆ ಸ್ವತಂತ್ರವಿದೆ. ಆದಾಗ್ಯೂ ಯಾವುದೇ ಘಟನೆ ಕಂಡು ಬಂದಲ್ಲಿ ಮೊದಲು ಪೊಲೀಸರಿಗೆ ಮಾಹಿತಿ ನೀಡದರೆ ಕಾನೂನು ಕ್ರಮ ಜರುಗಿಸಲು ಅನುಕೂಲವಾಗುತ್ತದೆ. ದೂರು ನೀಡಲು ವಿಳಂಬವಾದರೆ ಕಾನೂನು ಪ್ರಕ್ರಿಯೆ ಸಹ ತಡವಾಗುತ್ತದೆ. ಅಹಿತಕರ ಘಟನೆಗಳ ಬಗ್ಗೆ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡುವಂತೆ ಹೇಳಿದರು.