ಸಾರಾಂಶ
ಕನ್ನಡ ವಿಶ್ವವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು.
ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು.
ಕುಲಪತಿ ಡಾ.ಡಿ.ವಿ ಪರಮಶಿವಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಚರಿತ್ರೆ ಅಧ್ಯಯನ ವಿಭಾಗದ ಡಾ.ಮೋಹನ್ ಕೃಷ್ಣ ರೈ ಮುಖ್ಯ ಭಾಷಣ ಮಾಡಿದರು. ಕೆಎಸ್‌ಆರ್‌ಟಿಸಿ ನೌಕರ ಸುರೇಶಗೆ ಸನ್ಮಾನಿಸಿದರು. ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ್ ಯತಗಲ್ ಇದ್ದರು.ಡಿಸಿ ಕಚೇರಿ:
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಜಿಪಂ ಸಿಇಒ ಅಕ್ರಮ್ ಷಾ, ಎಡಿಸಿ ಇ.ಬಾಲಕೃಷ್ಣಪ್ಪ, ಸಿಬ್ಬಂದಿ ಇದ್ದರು.ತಹಶೀಲ್ದಾರ್ ಕಚೇರಿ:
ಹೊಸಪೇಟೆಯ ತಾಲೂಕು ಆಡಳಿತದಿಂದ ತಹಸೀಲ್ದಾರ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ತಹಸೀಲ್ದಾರ ಎಂ.ಶೃತಿ ಧ್ವಜಾರೋಹಣ ನೆರವೇರಿಸಿದರು.ಭಾರತ ಸೇವಾದಳ:
ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಸೇವಾದಳದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಶುಭಾಶಯ ತಿಳಿಸಿದರು. ಜಿಲ್ಲಾ ಸಂಚಾಲಕ ಪ್ರಕಾಶ್ ಕಾಟಾಪುರ, ಸದಸ್ಯ ಪಾಂಡುರಂಗ ನಿಕ್ಕಮ್, ಮಂಜುಳಾ, ಸತ್ಯನಾರಾಯಣ, ಸರ್ದಾರ್ ಪಟೇಲ್ ಶಾಲೆಯ ಮುಖ್ಯ ಶಿಕ್ಷಕ ಪರಶುರಾಮ್ ಇದ್ದರು. ಮಕ್ಕಳಿಂದ ದೇಶಭಕ್ತಿ ನೃತ್ಯ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪ್ರದಾನಿಸಲಾಯಿತು.ಕಾಂಗ್ರೆಸ್ ಕಚೇರಿ:
ವಿಜಯನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ ನಿಮಿತ್ತ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಉಪಾಧ್ಯಕ್ಷ ಕೆ.ರಮೇಶಕುಮಾರ್, ಸೇವಾದಳ ಸಂಘಟಕ ಬಿ.ಮಾರೆಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಡಿ.ವೆಂಕಟರಮಣ, ನಗರಸಭೆ ಸದಸ್ಯ ಅಸ್ಲಂ ಮಾಳ್ಗಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ತಮ್ಮನ್ನಳಪ್ಪ, ಕಾರ್ಯದರ್ಶಿ ಸಂಗಪ್ಪ, ಮುಖಂಡರಾದ ಗೋವಿಂದಪ್ಪ, ಇಂದುಮತಿ, ಎಂ.ಡಿ.ರಫೀಕ್, ಎಂ.ಶ್ರೀನಿವಾಸ್, ಬಾಣದ ಗಣೇಶ, ತಾರಾ ಬಾಷಾ, ಎಚ್. ಪರಶುರಾಮ, ಚಿತ್ತವಾಡ್ಗೆಪ್ಪ, ವೆಂಕಪ್ಪ ಇದ್ದರು.ಸಂವಿಧಾನ ಸಂರಕ್ಷಣಾ ಸಮಿತಿ:
76ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದಿಂದ ಹೊಸಪೇಟೆಯ ಅಂಬೇಡ್ಕರ್ ವೖತ್ತದ ಬಳಿ ಸಂವಿಧಾನ ಪೀಠಿಕೆ ಓದುವುದರ ಮೂಲಕ ಗಣರಾಜ್ಯೋತ್ಸವ ಆಚರಿಸಲಾಯಿತು. ಮರಡಿ ಜಂಬಯ್ಯ ನಾಯಕ, ಬಣ್ಣದಮನೆ ಸೋಮಶೇಖರ್, ತಾಯಪ್ಪ ನಾಯಕ, ನಿಂಬಗಲ್ ರಾಮಕೃಷ್ಣ, ಸಣ್ಣಮಾರೆಪ್ಪ, ಎನ್. ವೆಂಕಟೇಶ್, ರಾಮಚಂದ್ರಬಾಬು, ಸಂತೋಷ್, ಭಾಸ್ಕರ್ ರೆಡ್ಡಿ, ಮಂಜುನಾಥ್, ಸಣ್ಣ ಈರಪ್ಪ, ಪೀರ್ ಬಾಷಾ, ಶಿವಕುಮಾರ್, ರಾಮಕೃಷ್ಣ, ಹುಲಿಗೆಮ್ಮ, ಜಾಫರ್ ಮೊಸಿನ್ ಇದ್ದರು.ಬಿಜೆಪಿ ಕಚೇರಿ:
ನಗರದ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಎಸ್ಟಿ ಮೋರ್ಚಾ ಸದಸ್ಯ ಕಾಸಟ್ಟಿ ಉಮಾಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಎಸ್. ರಾಘವೇಂದ್ರ, ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರು ದೇವಲಾಪುರ, ಆರ್.ನಾಗರಾಜ್, ಕಾರ್ಯಾಲಯ ಕಾರ್ಯದರ್ಶಿ ಹೊನ್ನೂರಪ್ಪ, ಕವಿತಾ ಬಿ.ಜೆ., ಮಧುರಚೆನ್ನಶಾಸ್ತ್ರಿ, ಗೌಳಿ ಬಸವರಾಜ್, ಅನುರಾಧ, ದೇವರಮನಿ ವೆಂಕಟೇಶ್, ಉಮಾದೇವಿ, ಶ್ರೀನಿವಾಸ್, ಮಹಾದೇವಿ. ಹೊಸೂರಮ್ಮ. ಸಂಧ್ಯಾ ವೆಂಕಟೇಶ್, ತಿರುಮಲೇಶ್ ಇದ್ದರು.ಪಿಡಿಐಟಿ ಕಾಲೇಜ್:
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ.ಯು.ಎಂ. ರೋಹಿತ್, ವೀರಯೋಧರಾದ ಜಿ.ಕೆ. ಗೋಪಾಲ, ಕೆ.ಸರವರ್, ಜಗದೀಶ್, ಶ್ರೀನಿವಾಸ್, ಕೃಷಿ ಕ್ಷೇತ್ರದ ರೈತರಾದ ಬಸಯ್ಯಸ್ವಾಮಿ, ಸಣ್ಣಕ್ಕಿ ಶಿವಕುಮಾರ್, ಭಾರತಿ ಪಾಟೀಲ್, ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಐ.ಎನ್. ಸಂಗನ ಬಸಪ್ಪ, ಬಿ.ಚಂದ್ರಮೌಳಿ, ಅನಿಲ್ ಆರ್. ಜವಳಿ, ಡಾ.ವಿಶ್ವನಾಥ್ ಗೌಡ ಇದ್ದರು.