ಸಾರಾಂಶ
ಮಲೇಬೆನ್ನೂರು ಪಟ್ಟಣದ ಪುರಸಭೆ, ನಾಡ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ೭೬ನೇ ಗಣರಾಜ್ಯೋತ್ಸವ ವೇಳೆ ರಾಷ್ಟ್ರಧ್ವಜಾರೋಹಣ ಮಾಡಲಾಯಿತು. ಪುರಸಭಾ ವ್ಯಾಪ್ತಿಯಲ್ಲಿ ಸಾಧಕರನ್ನು ಗೌರವಿಸಲಾಯಿತು.
- ಧ್ವಜಾರೋಹಣ, ಸಾಧಕರಿಗೆ ಸನ್ಮಾನ, ಸಿಹಿ ವಿತರಣೆ - - - ಮಲೇಬೆನ್ನೂರು: ಪಟ್ಟಣದ ಪುರಸಭೆ, ನಾಡ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ೭೬ನೇ ಗಣರಾಜ್ಯೋತ್ಸವ ವೇಳೆ ರಾಷ್ಟ್ರಧ್ವಜಾರೋಹಣ ಮಾಡಲಾಯಿತು. ಪುರಸಭಾ ವ್ಯಾಪ್ತಿಯಲ್ಲಿ ಸಾಧಕರನ್ನು ಗೌರವಿಸಲಾಯಿತು. ಪುರಸಭಾ ಅಧ್ಯಕ್ಷ ಹನುಮಂತಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರೆ, ನಾಡ ಕಚೇರಿ ಆವರಣದಲ್ಲಿ ಉಪ ತಹಸೀಲ್ದಾರ್ ಆರ್.ರವಿ ಧ್ವಜಾರೋಹಣ ಮಾಡಿದರು. ಮುಖ್ಯಾಧಿಕಾರಿ ಭಜಕ್ಕನವರ್ ಹಾಗೂ ಪುರಸಭಾ ಸದಸ್ಯರು, ಗ್ರಾಮಾಡಳಿತ ಅಧಿಕಾರಿಗಳು. ಅಭಿಮಾನಿಗಳು ಇದ್ದರು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಕುಂಬಳೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಪ್ರಾಚಾರ್ಯ ಹನುಮಂತಯ್ಯ ಧ್ವಜಾರೋಹಣ ಮಾಡಿದರು. ಉಪನ್ಯಾಸಕ ತೆಲಿಗಿ ಮಂಜುನಾಥ್ ಉಪನ್ಯಾಸ ನೀಡಿ, ದಾಸ್ಯದ ಸಂಕೋಲೆಯಿಂದ ಪಾರಾದ ಭಾರತವನ್ನು ನನ್ನ ಭಾರತ ಎನ್ನುವ ಬದಲು ಗಣರಾಜ್ಯದ ಭಾರತ ಎಂದು ಹೆಮ್ಮೆಯಿಂದ ಕರೆಯಬೇಕಿದೆ ಎಂದರು.ವಿದ್ಯಾರ್ಥಿಗಳಾದ ಪವನ್, ಸ್ಪಂದನಾ, ಚಂದ್ರಕಲಾ, ಹನುಮಂಥ, ಅರ್ಚನಾ ದೇಶದ ಬಗ್ಗೆ ಭಾಷಣ ಮಾಡಿದರು. ಸಿಡಿಸಿ ಸದಸ್ಯ ಸದಾನಂದ, ಎನ್.ಕಲ್ಲೇಶ್, ಎಂ.ಪರಮೇಶ್ವರಪ್ಪ, ಮಾಜಿ ಸದಸ್ಯ ವೈ. ಶ್ರೀನಿವಾಸ್, ಮುಖ್ಯ ಶಿಕ್ಷಕ ಎ.ಗೋವಿಂದಪ್ಪ ಬೋಧಕರಾದ ನಾಗವೇಣಿ, ಮಂಜುನಾಥ್ ಮತ್ತಿತರು ಮಾತನಾಡಿದರು. ಮಕ್ಕಳು ದೇಶದ ಮಹಾತ್ಮರ ವೇಷತೊಟ್ಟು ಗಮನ ಸೆಳೆದರು.
* ಚನ್ನಗಿರಿ ಪುರಸಭೆಯಲ್ಲಿ ಗಣರಾಜ್ಯೋತ್ಸವಚನ್ನಗಿರಿ ಪುರಸಭಾ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಭಾನುವಾರ ಆಚರಿಸಲಾಯಿತು. ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಧ್ವಜಸ್ತಂಭದ ಬಳಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಲಾಯಿತು. ಗಣರಾಜ್ಯೋತ್ಸವ ಕುರಿತಂತೆ ಕಂದಾಯ ಅಧಿಕಾರಿ ಮಂಜುನಾಥ್, ಸದಸ್ಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಕಚೇರಿ ವ್ಯವಸ್ಥಾಪಕ ಆರಾಧ್ಯ, ಲೆಕ್ಕಾಧಿಕಾರಿ ಪ್ರೇಮಲೀಲಾ, ಮಂಜುನಾಥ್, ಕಚೇರಿ ಸಿಬ್ಬಂದಿ, ಪುರಸಭಾ ಸದಸ್ಯರು ಹಾಜರಿದ್ದರು.- - --೨೪-ಎಂಬಿಆರ್೧: ಪುರಸಭೆ ಗಣ ರಾಜ್ಯೋತ್ಸವದಲ್ಲಿ ಸಾಧಕರನ್ನು ಗೌರವಿಸಲಾಯಿತು.