ಗಣರಾಜ್ಯೋತ್ಸವ ಪೂರ್ವಭಾವಿ ಸಭೆ

| Published : Jan 21 2024, 01:31 AM IST

ಸಾರಾಂಶ

ಮಹಾಲಿಂಗಪುರ : ಗಣರಾಜ್ಯೋತ್ಸವ ಪ್ರಯುಕ್ತ ಪುರಸಭೆ ವತಿಯಿಂದ ಶಾಲಾ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು. ಸ್ಥಳೀಯ ಪುರಸಭಾ ಸಭಾಭವನದಲ್ಲಿ ಕರೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ,ಎರಡು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜ.25 ರ ಸಂಜೆ ಪುರಸಭಾ ವ್ಯಾಪ್ತಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ದೇಶ ಭಕ್ತಿ ಗೀತೆ ಸ್ಪರ್ಧೆ, ಸ್ವಚ್ಛ ಭಾರತ ರೂಪಕಗಳು ಹಾಗೂ 26 ರ ಬೆಳಿಗ್ಗೆ ಧ್ವಜಾರೋಹಣ ಮತ್ತು ಪಥಸಂಚಲನೆ ಜರುಲಿವೆ ಎಂದರು.

ಮಹಾಲಿಂಗಪುರ : ಗಣರಾಜ್ಯೋತ್ಸವ ಪ್ರಯುಕ್ತ ಪುರಸಭೆ ವತಿಯಿಂದ ಶಾಲಾ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.

ಸ್ಥಳೀಯ ಪುರಸಭಾ ಸಭಾಭವನದಲ್ಲಿ ಕರೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎರಡು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜ.25 ರ ಸಂಜೆ ಪುರಸಭಾ ವ್ಯಾಪ್ತಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ದೇಶ ಭಕ್ತಿ ಗೀತೆ ಸ್ಪರ್ಧೆ, ಸ್ವಚ್ಛ ಭಾರತ ರೂಪಕಗಳು ಹಾಗೂ 26 ರ ಬೆಳಿಗ್ಗೆ ಧ್ವಜಾರೋಹಣ ಮತ್ತು ಪಥಸಂಚಲನೆ ಜರುಲಿವೆ ಎಂದರು.

ಸಿಆರ್ಪಿ ಎಸ್.ಎನ್.ಬ್ಯಾಳಿ ಮಾತನಾಡಿದರು.ಮುಖಂಡರಾದ ಶೇಖರ ಅಂಗಡಿ, ನಾಗೇಶ ನಾಯಕ ಅಧೀಕ್ಷಕ ಎಸ್.ಎನ್.ಪಾಟೀಲ, ಚಿದಾನಂದ ಮಠಪತಿ, ವಿ.ಜಿ.ಕುಲಕಣರ್ಿ, ಹಿರಿಯ ಆರೋಗ್ಯ ನಿರೀಕ್ಷಕ ಎಮ್.ಎಮ್.ಮುಗಳಖೋಡ, ಬಿ.ವೈ.ಮರದಿ, ರವಿ ಹಲಸಪ್ಪಗೋಳ ಮತ್ತು ಪ್ರಾಥಮಿಕ ,ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಇದ್ದರು.