ವಿರಾಜಪೇಟೆ ತಾಲೂಕು ಆಡಳಿತ ವತಿಯಿಂದ ಇಲ್ಲಿನ ಮೈದಾನದಲ್ಲಿ ಹಾಗೂ ಪೊನ್ನಂಪೇಟೆಯ ಜೂನಿಯರ್ ಕಾಲೇಜು ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು.

ವಿರಾಜಪೇಟೆ: ವಿರಾಜಪೇಟೆ ತಾಲೂಕು ಆಡಳಿತ ವತಿಯಿಂದ ಇಲ್ಲಿನ ಮೈದಾನದಲ್ಲಿ ಹಾಗೂ ಪೊನ್ನಂಪೇಟೆಯ ಜೂನಿಯರ್ ಕಾಲೇಜು ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಿ, ರಾಷ್ಟ್ರಧ್ವಜೋರಾಹಣ ಮಾಡಿದರು.

ಇಡೀ ವಿಶ್ವಕ್ಕೆ ಮಾದರಿಯದ ಭಾರತದ ಸಂವಿಧಾನ ಜಾರಿಯಾದ ಈ ದಿನದಂದು ನಾವುಗಳು ಹೆಮ್ಮೆಯಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಪ್ರಾಮುಖ್ಯತೆಯ ದಿನವಾಗಿದೆ. ಈ ಗಣತಂತ್ರ ಹಬ್ಬವನ್ನು ಆಚರಿಸುವ ಮೂಲಕ, ನಾವು ನಮ್ಮ ದೇಶದ ಸಾಂವಿಧಾನಿಕ, ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಅನನ್ಯತೆಯನ್ನು ವಿಶ್ವಾದ್ಯಂತ ಸಾರೋಣ ಎಂದು ಹೇಳಿದರು.

ವಿರಾಜಪೇಟೆ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಜಾನ್ಸನ್, ಪೊನ್ನಂಪೇಟೆ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ವಿರಾಜಪೇಟೆ ಬಗರ್ ಹುಕುಂ ಅಧ್ಯಕ್ಷ ಸಲಾಂ, ಪೊನ್ನಂಪೇಟೆ ಬಗರ್ ಹುಕುಂ ಅಧ್ಯಕ್ಷ ಲಾಲಾ ಅಪ್ಪಣ್ಣ, ಪುರಸಭೆ ಮಾಜಿ ಸದಸ್ಯ ರಾಜೇಶ್ ಪದ್ಮನಾಭ, ಹಿರಿಯರಾದ ಮುಕಳೇರ ಕುಶಾಲಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರೀರ ನವೀನ್, ಗೋಣಿಕೊಪ್ಪ ಗ್ರಾಪಂ ಅಧ್ಯಕ್ಷ ಪ್ರಮೋದ್ ಗಣಪತಿ, ಪೊನ್ನಂಪೇಟೆ ಪಟ್ಟಣ ಪಂ. ಉಪಾಧ್ಯಕ್ಷ ಆಲೀರ ರಶೀದ್, ತಹಸೀಲ್ದಾರ್ ಪ್ರವೀಣ್, ಪೊಲೀಸ್ ಅಧಿಕಾರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.