ಚಿಕ್ಕಮಗಳೂರುಶಿವಮೊಗ್ಗದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಿರುವ ಹೆಚ್ಚುವರಿ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಮೂಲ ಸೌಕರ್ಯ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆ ವಿಧಾನಪರಿಷತ್ತು ಸದಸ್ಯ ಧನಂಜಯ್ ಸರ್ಜಿ ನೇತೃತ್ವದಲ್ಲಿ ಶಿವಮೊಗ್ಗ-ಭದ್ರಾವತಿ ಕೈಗಾರಿಕಾ ಸಂಘದ ನಿಯೋಗ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಸಲ್ಲಿಸಿತು.

ಧನಂಜಯ್ ಸರ್ಜಿ ನೇತೃತ್ವದ ನಿಯೋಗದಿಂದ ಸಚಿವ ಕೆ.ಜೆ. ಜಾಜ್‌ಗೆ ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶಿವಮೊಗ್ಗದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಿರುವ ಹೆಚ್ಚುವರಿ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಮೂಲ ಸೌಕರ್ಯ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆ ವಿಧಾನಪರಿಷತ್ತು ಸದಸ್ಯ ಧನಂಜಯ್ ಸರ್ಜಿ ನೇತೃತ್ವದಲ್ಲಿ ಶಿವಮೊಗ್ಗ-ಭದ್ರಾವತಿ ಕೈಗಾರಿಕಾ ಸಂಘದ ನಿಯೋಗ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಸಲ್ಲಿಸಿತು.ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 120ಕ್ಕೂ ಹೆಚ್ಚು ಉತ್ಪಾದನಾ ಹಾಗೂ ಪೂರಕ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ಕುಟುಂಬಗಳಿಗೆ ನೇರ ಹಾಗೂ ಪರೋಕ್ಷ ಉದ್ಯೋಗ ಕಲ್ಪಿಸಿವೆ. ಕೈಗಾರಿಕೆಗಳು ದೇಶೀಯ ಮಾರುಕಟ್ಟೆ ಜತೆಗೆ ಸುಮಾರು 37 ರಾಷ್ಟ್ರಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು, ಶಿವಮೊಗ್ಗ ಜಿಲ್ಲೆ ಕೈಗಾರಿಕಾ ಹಾಗೂ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ ಎಂದು ಧನಂಜಯ್ ಸರ್ಜಿ ಎಂದರು.ಕೈಗಾರಿಕೆಗಳ ವಿಸ್ತರಣೆ ಹಾಗೂ ಹೊಸ ಕೈಗಾರಿಕೆಗಳ ಸ್ಥಾಪನೆಯಿಂದ ವಿದ್ಯುತ್ ಬೇಡಿಕೆ ನಿರಂತರ ಹೆಚ್ಚುತ್ತಿದೆ. ಪ್ರಸ್ತುತ ತುರ್ತಾಗಿ ಹೆಚ್ಚುವರಿ 15 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದ್ದು, 2030ರ ವೇಳೆಗೆ ಬೇಡಿಕೆ ಸುಮಾರು 47 ಮೆಗಾವ್ಯಾಟ್‌ಗೆ ಏರಿಕೆ ನಿರೀಕ್ಷೆಯಿದೆ.ಈ ಹಿನ್ನೆಲೆಯಲ್ಲಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ವಿದ್ಯುತ್ ಸಾಮರ್ಥ್ಯ ಹೆಚ್ಚಿಸುವುದು, 110/11 ಕೆ.ವಿ. ವಿದ್ಯುತ್ ಮೂಲಸೌಕರ್ಯ ಬಲವರ್ಧನೆ ಹಾಗೂ ಸಮರ್ಪಕ ವಿದ್ಯುತ್ ಹಂಚಿಕೆಗೆ ಆದ್ಯತೆ ನೀಡಲು ಸಚಿವರಿಗೆ ಮನವಿ ಮಾಡಲಾಯಿತು.ಮನವಿಗೆ ಸಚಿವ ಕೆ.ಜೆ. ಜಾರ್ಜ್ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿ ಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಆಯನೂರು ಸಂತೋಷ್, ಕಾರ್ಯದರ್ಶಿ ರಾಜೇಶ್ ಎಸ್‌ಎಸ್‌ಟಿ, ಖಜಾಂಚಿ ದಿನೇಶ್ ಎಚ್.ಎಲ್., ರಾಮಚಾರ್ ಜೋಯ್ಸ್ ಉಪಸ್ಥಿತರಿದ್ದರು.