ಬೈಲಹೊಂಗಲ-ಸವದತ್ತಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮನವಿ

| Published : Nov 16 2024, 12:34 AM IST

ಸಾರಾಂಶ

ಬೈಲಹೊಂಗಲ-ಬೆಳವಡಿ-ಸವದತ್ತಿ ರೈಲ್ವೆ ಮಾರ್ಗವನ್ನು ಬೆಳಗಾವಿ-ಧಾರವಾಡ ಮಾರ್ಗಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಬೈಲಹೊಂಗಲ: ಬೈಲಹೊಂಗಲ-ಬೆಳವಡಿ-ಸವದತ್ತಿ ರೈಲ್ವೆ ಮಾರ್ಗವನ್ನು ಬೆಳಗಾವಿ-ಧಾರವಾಡ ಮಾರ್ಗಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ಸೋಗಲ ಸೋಮೇಶ್ವರ ದೇವಸ್ಥಾನ, ಸವದತ್ತಿ ಯಲ್ಲಮ್ಮ ದೇವರ ದರ್ಶನಕ್ಕೆ ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳ ಲಕ್ಷಾಂತರ ಜನತೆ ಆಗಮಿಸುತ್ತಾರೆ. ಕಿತ್ತೂರು ರಾಣಿ ಚನ್ನಮ್ಮಾಜಿ ಐಕ್ಯಸ್ಥಳ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಂಗೊಳ್ಳಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಸೈನಿಕ ಶಾಲೆ, ರಾಕ್ ಗಾರ್ಡನ್‌ ಇರುವುದರಿಂದ ಪ್ರವಾಸಿಗರ ವೀಕ್ಷಣೆಯ ಸ್ಥಳವಾಗಿದೆ. ಸಕ್ಕರೆ ಕಾರ್ಖಾನೆಗಳು, ಹತ್ತಿ ಉದ್ಯಮ ಹಾಗೂ ಕೃಷಿ ಧಾನ್ಯಗಳ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಸ್ವಾತಂತ್ರ್ಯ ಸಿಕ್ಕಾಗಿನಿಂದ ರೈಲ್ವೆಯಿಂದ ವಂಚಿತ ಹಾಗೂ ನೀರಾವರಿಯಿಂದ ವಂಚಿತ ಪ್ರದೇಶವಾಗಿದ್ದು, ರೈಲ್ವೆ ಸಂಪರ್ಕದಿಂದ ಈ ಭಾಗದಲ್ಲಿ ಆರ್ಥಿಕ, ಸಾಮಾಜಿಕವಾಗಿ ನ್ಯಾಯ ಒದಗಿಸಿದಂತಾಗುತ್ತದೆ. ಬೈಲಹೊಂಗಲ ಭಾಗದ ಜನರ ಬಹುದಿನದ ಕನಸು ಈಡೇರಿದಂತಾಗುತ್ತದೆ. ಬೆಳಗಾವಿ-ಧಾರವಾಡ ಹೊಸ ಮಾರ್ಗದಲ್ಲಿ ಹಿರೇಬಾಗೇವಾಡಿಯಿಂದ ಬೈಲಹೊಂಗಲ, ಬೆಳವಡಿ ಮೂಲಕ ಸವದತ್ತಿಗೆ ರೈಲ್ವೆ ಮಾರ್ಗ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ಅಮ್ಮಿನಭಾವಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ ಕಡಿ ಇತರರು ಇದ್ದರು.