ಸಾರಾಂಶ
ಸಾವಳಗಿ: ಜಮಖಂಡಿ ತಾಲೂಕಿನ ತೊದಲಬಾಗಿಯಲ್ಲಿ ನೂತನ ಬಸ್ ತಂಗುದಾನ ನಿರ್ಮಿಸಬೇಕು ಎಂದು ಸಿದ್ದಪ್ಪ ಹೆಗ್ಗೊಂಡ ನೇತೃತ್ವದಲ್ಲಿ ಶಾಸಕರ ಗೃಹ ಕಚೇರಿ, ತಹಸೀಲ್ದಾರ್ ಮತ್ತು ತಾಲೂಕು ಅಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ.

ಸುಮಾರು ₹ 7 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ತೊದಲಬಾಗಿಯಲ್ಲಿ ಇದುವರೆಗೂ ಒಂದೂ ಬಸ್ ತಂಗುದಾನವಿಲ್ಲ. ಸೋಮವಾರ ದೊಡ್ಡ ಸಂತೆ ನಡೆಯುವುದರಿಂದ ಸುತ್ತಮುತ್ತಲಿನ ಹಳ್ಳಿಗಳಿಂದ ಸಾಕಷ್ಟು ಜನ ಬರುತ್ತಾರೆ. ಪ್ರಯಾಣಿಕರು ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲದಂತಾಗಿದೆ. ಬಸ್‌ಗಾಗಿ ದಾರಿ ಕಾಯುತ್ತ ಬಿಸಿಲಿನ ಝಳಕ್ಕೆ ಪ್ರಯಾಣಿಕರು, ಶಾಲಾ ಮಕ್ಕಳು, ವೃದ್ಧರು ಹೈರಾಣಾಗುತ್ತಿದ್ದಾರೆ.ಬಸ್ ತಂಗುದಾನ ನಿರ್ಮಾಣವಾದರೆ ಶಾಲಾ ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ನೆರಳಿನ ಆಸರೆ ಆಗುತ್ತದೆ. ಕುಳಿತುಕೊಳ್ಳಲು ಅನುಕೂಲವಾಗುತ್ತದೆ. ಆದಷ್ಟು ಬೇಗ ತೊದಲಬಾಗಿಯಲ್ಲಿ ಬಸ್ ನಿಲ್ದಾಣದ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))