ಸಾರಾಂಶ
ಗಂಡೂರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಬೆಳಕೋಟಾ ಗ್ರಾಮಸ್ಥರಿಗೆ ಪುನರ್ವಸತಿ ಕೇಂದ್ರದಲ್ಲಿ ನಿವೇಶನದ ಹಕ್ಕು ಪತ್ರ ನೀಡಲಡಿ ಎಂದು ಬೆಳಕೋಟಾ ಗ್ರಾಮಸ್ಥರು ಜಿಲ್ಲಾ ಅಧಿಕಾರಿಗಳಿಗೆ ಮನವಿ ನೀಡಿದ್ದರು.
ಕನ್ನಡಪ್ರಭ ವಾರ್ತೆ ಕಮಲಾಪುರ
ಗಂಡೂರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಬೆಳಕೋಟಾ ಗ್ರಾಮಸ್ಥರಿಗೆ ಪುನರ್ವಸತಿ ಕೇಂದ್ರದಲ್ಲಿ ನಿವೇಶನದ ಹಕ್ಕು ಪತ್ರ ನೀಡಲಡಿ ಎಂದು ಬುಧವಾರ ಬೆಳಕೋಟಾ ಗ್ರಾಮಸ್ಥರು ಜಿಲ್ಲಾ ಅಧಿಕಾರಿಗಳಿಗೆ ಮನವಿ ನೀಡಿದ್ದರು.ಈ ಹಿಂದೆ ಗ್ರಾಮಸ್ಥರು ಸುಮಾರು 1997ರಿಂದ 98ರಲ್ಲಿ ಗಂಡೋರಿ ಯೋಜನೆಯಲ್ಲಿ ಮುಳುಗಡೆ ಬಂದಿರುತ್ತದೆ. ಅದರಲ್ಲಿ ಹೆಚ್ಚುವರಿ 245 ಮನೆಗಳು ಹಕ್ಕು ಪತ್ರ ನೀಡಬೇಕಾಗಿತ್ತು ನೀಡದೇ ಇರುವುದರಿಂದ ಈ ಹಿಂದೆ ಸತತವಾಗಿ ಮೂರು ನಾಲ್ಕು ಗ್ರಾಮಸ್ಥರು ಹಾಗೂ ಮನೆ ಕಳೆದುಕೊಂಡ ಮನೆಯ ಮಾಲೀಕರು ಸೆರಿ ಸಾಕಷ್ಟು ಬಾರಿ ವಿಭಾಗ ಮಹಾಗಾಂವ ಕಛರೀಗೆ 245 ಮನೆಗಳು ಪ್ರಸ್ತಾವನೆ ಸಲ್ಲಿಸಲಾಗಿದೆ ಆದರೆ ಇದರಲ್ಲಿ ಬರಿ 7 ಮನೆ ನಿಗದಿತ ಪರಿಹಾರ ಕಲ್ಪಿಸಲಾಗಿದೆ ಆದರೆ ಇನ್ನುಳಿದ 239 ಫಲಾನುಭವಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಅಧಿಕಾರಿ ಅವರಿಗೆ ಮನವಿ ನಿಡಿದರು.
ಮುಖಂಡರಾದ ಸಂತೋಷ ಶಾಖಾ, ಶರಣು ಗೌರೆ, ಗಿರೆಪ್ಪಾ ಶಾಖಾ, ಸುಭಾಷ್ ಓಕಳಿ, ಪವನ ಬೆಳಕೋಟಾ, ಸೌದ ಕದಂಬ, ಆರಿಫ್ ಪಟೇಲ್, ವಿಶ್ವನಾಥ ಕೂಡ್ಲಿ, ಮತ್ತಿತರ ಇದರು