ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ತೊಂದರೆ ತಪ್ಪಿಸಲು ಮನವಿ

| Published : Nov 25 2024, 01:02 AM IST

ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ತೊಂದರೆ ತಪ್ಪಿಸಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ತಾಲೂಕಿನಲ್ಲಿನ ಸರ್ಕಾರಿ ಕಚೇರಿಗಳಲ್ಲಿನ ಸರ್ವರ್ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್‌ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ತಾಲೂಕಿನಲ್ಲಿನ ಸರ್ಕಾರಿ ಕಚೇರಿಗಳಲ್ಲಿನ ಸರ್ವರ್ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್‌ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನಾದ್ಯಂತ ಸರ್ಕಾರದಿಂದ ನೀಡುತ್ತಿರುವ ಅನೇಕ ಸೌಲಭ್ಯಗಳನ್ನು ಪಡೆಯಲು ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಅಧಿಕವಾಗಿದೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿ, ನಾಡ ಕಚೇರಿ, ತಹಸೀಲ್ದಾರ್‌ ಕಚೇರಿ, ರೇಷನ್ ಅಂಗಡಿಗಳಿಗೆ, ರೇಷನ್ ಕಾರ್ಡ್‌ ತಿದ್ದುಪಡಿ, ರೇಷನ್ ಕಾರ್ಡ್‌ ಹೆಸರು ಸೇರ್ಪಡೆ, ಹೊಸ ರೇಷನ್ ಕಾರ್ಡ್‌ ಅರ್ಜಿ ಹಾಕಲು, ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಅರ್ಜಿಗಳಿಗೆ, ಬಸ್‌ಪಾಸ್ ಸೌಲಭ್ಯಕ್ಕಾಗಲಿ, ಆಧಾರ ಕಾರ್ಡ್‌ ತಿದ್ದುಪಡಿಗಳಿಗಾಗಲಿ, ಉಪನೋಂದಣಾಧಿಕಾರಿಗಳ ಕಚೇರಿ, ಆನ್‌ಲೈನ್ ಸೆಂಟರ್, ಲೇಬರ್ ಆಫೀಸ್, ಕೃಷಿ ಇಲಾಖೆ ಮುಂತಾದ ಕಡೆಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ತೊಂದರೆ ಎದುರಿಸುವಂತಾಗಿದೆ. ಇದರಿಂದ ಬಡವರು, ಸಾರ್ವಜನಿಕರು, ಕೂಲಿ ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಅರ್ಜಿ ಹಾಕುವ ಕೆಲಸಕ್ಕೆ ಓಡಾಡುವಂತಾಗಿದೆ. ಇದರಿಂದ ಅವರ ದುಡಿಮೆಯೂ ಹಾಳು, ಕೆಲಸವೂ ಆಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗನೆ ಸರ್ವರ್ ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ, ತಿರಕಪ್ಪ ಅಣ್ಣೀರ, ಮಲ್ಲಪ್ಪ ಬಡಪ್ಪನವರ, ಪರಶುರಾಮ ಕುರುವತ್ತಿ, ಲಿಂಗರಾಜ ತಾವರಗೊಂದಿ, ಕರೆಗೌಡ ಕುಂಟಗೌಡ್ರು ಮತ್ತಿತರರು ಉಪಸ್ಥಿತರಿದ್ದರು.