ನರಸಿಂಹರಾಜಪುರತಾಲೂಕಿನ ಮಲ್ಲಂದೂರು ಗ್ರಾಮದಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹೋಗದಂತೆ ಕ್ರಮ ವಹಿಸಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು ಹಾಗೂ ಗ್ರಾಮಸ್ಥರ ಅನುಭವದಲ್ಲಿರುವ ಮನೆ ಹಾಗೂ ಜಾಗವನ್ನು ಸಕ್ರಮ ಗೊಳಿಸಿ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಸೀತೂರು ಗ್ರಾಪಂ ವ್ಯಾಪ್ತಿಯ ಮಲ್ಲಂದೂರು ಗ್ರಾಮದ ಮುಖಂಡ ಎಚ್‌.ಕೆ. ಮಧುಕರ ಹಾಗೂ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಗೆ ಮನವಿ ಪತ್ರ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹೋಗದಂತೆ ಕ್ರಮ ವಹಿಸಿ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು ಹಾಗೂ ಗ್ರಾಮಸ್ಥರ ಅನುಭವದಲ್ಲಿರುವ ಮನೆ ಹಾಗೂ ಜಾಗವನ್ನು ಸಕ್ರಮ ಗೊಳಿಸಿ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಸೀತೂರು ಗ್ರಾಪಂ ವ್ಯಾಪ್ತಿಯ ಮಲ್ಲಂದೂರು ಗ್ರಾಮದ ಮುಖಂಡ ಎಚ್‌.ಕೆ. ಮಧುಕರ ಹಾಗೂ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಗೆ ಮನವಿ ಪತ್ರ ಅರ್ಪಿಸಿದರು.

ಮನವಿಯಲ್ಲಿ, ಬಾಳೆಹೊನ್ನೂರು ಹೋಬಳಿ ಮಲ್ಲಂದೂರಿನಲ್ಲಿ ಸ.ನಂ. 38 ರಲ್ಲಿ 68.26 ಎಕ್ರೆ ಕಾಫಿ ಬಂಜರು ಭೂಮಿ,25 ಎಕ್ರೆ ಗೋಮಾಳ ಹಾಗೂ ಸ.ನಂ 5 ರಲ್ಲಿ 173.19 ಎಕ್ರೆ ಕಾಫಿ ಬಂಜರು ಭೂಮಿ ಹಾಗೂ ಮಂಜೂರಾದ 2 ಎಕರೆ ಸ್ಮಶಾನ ಭೂಮಿ ಸೆಕ್ಷನ್ - 4 ಕ್ಕೆ ಸೇರಿದೆ. ಮುಂದಿನ ದಿನಗಳಲ್ಲಿ ಈ ಜಾಗ ಸೆಕ್ಷನ್-17 ಕ್ಕೆ ( ರಿಜರ್ವ್ ಫಾರೆಸ್ಟ್ ) ಸೇರಬಹುದಾಗಿದೆ. ಆದ್ದರಿಂದ ಈ ಕಂದಾಯ ಭೂಮಿಯನ್ನು ಗ್ರಾಮದ ಅಭಿವೃದ್ಧಿಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ಸೆಕ್ಷನ್-4 ಆಗುವಾಗ ಸರ್ವೆ ತಪ್ಪಾಗಿ ಮಾಡಿದ್ದಾರೆ. ಸೆಕ್ಷನ್- 4 ಆಗಿರುವ ಜಾಗದಲ್ಲಿ ರೈತರು ಕಟ್ಟಿರುವ ಮನೆ, ಸಾಗುವಳಿ ಮಾಡಿರುವ ಜಮೀನು, ಶಾಲಾ ಆಟದ ಮೈದಾನ ಸೇರಿದೆ. ಆದ್ದರಿಂದ ಸೆಕ್ಷನ್- 4 ಆಗಿರುವ ಎಲ್ಲಾ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಬೇಕು. ವಸತಿಗೆ ಆ ಜಾಗದಲ್ಲಿ ಕಟ್ಟಿಕೊಂಡಿರುವ ಮನೆಗೆ ಹಾಗೂ ರೈತರ ಅನುಭವ ಇರುವ ಜಮೀನಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಮನವಿ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಮುಂದಿನ ಕ್ರಮಕ್ಕಾಗಿ ಅಪರ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದು ಗ್ರಾಮದ ಮುಖಂಡ ಎಚ್‌.ಕೆ.ಮಧುಕರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಮನವಿ ನೀಡುವ ಸಂದರ್ಭದಲ್ಲಿ ಮಲ್ಲಂದೂರು ಗ್ರಾಮದ ಮುಖಂಡ ಎಚ್‌.ಕೆ.ಮಧುಕರ, ಗ್ರಾಮಸ್ಥರಾದ ರವಿ ಅರೇಕೊಡಿಗೆ, ರಾಘವೇಂದ್ರ, ದಿನೇಶ್ ಎಂ ಮಲ್ಲಂದೂರು, ವಸಂತಿಯಮ್ಮ, ನಾಗವೇಣಿ, ಚಂದ್ರಾವತಿ, ಅರ್ಚನ ಸೇರಿದಂತೆ 33 ಗ್ರಾಮಸ್ಥರಿದ್ದರು.