ಬೈಕ್‌ ವ್ಹೀಲಿಂಗ್ ಹಾವಳಿ ತಡೆಗಟ್ಟುವಂತೆ ರಾಷ್ಟ್ರ ರಕ್ಷಣಾ ಸೇನೆ ಮನವಿ

| Published : Oct 06 2023, 01:14 AM IST

ಬೈಕ್‌ ವ್ಹೀಲಿಂಗ್ ಹಾವಳಿ ತಡೆಗಟ್ಟುವಂತೆ ರಾಷ್ಟ್ರ ರಕ್ಷಣಾ ಸೇನೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರ ಪ್ರದೇಶಗಳು ಮತ್ತು ಸುತ್ತಮುತ್ತ ಬೈಕ್‌ ವ್ಹೀಲಿಂಗ್ ಹಾವಳಿ ಹೆಚ್ಚಾಗಿದ್ದು, ಇದನ್ನು ಸಂಪೂರ್ಣ ಮಟ್ಟ ಹಾಕುವಂತೆ ರಾಷ್ಟ್ರ ರಕ್ಷಣಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು
ಕನ್ನಡಪ್ರಭ ವಾರ್ತೆ ಹಾಸನ ಸಾರ್ವಜನಿಕ ರಸ್ತೆಗಳಲ್ಲಿ ಬೈಕ್‌ ವ್ಹೀಲಿಂಗ್‌ನಿಂದ ಅಮಾಯಕರ ಜೀವಹಾನಿ ನಗರ ಪ್ರದೇಶಗಳು ಮತ್ತು ಸುತ್ತಮುತ್ತ ಬೈಕ್‌ ವ್ಹೀಲಿಂಗ್ ಹಾವಳಿ ಹೆಚ್ಚಾಗಿದ್ದು, ಇದನ್ನು ಸಂಪೂರ್ಣ ಮಟ್ಟ ಹಾಕುವಂತೆ ರಾಷ್ಟ್ರ ರಕ್ಷಣಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ರಾಜ್ಯದ ವಿವಿಧೆಡೆ ಅಪ್ರಾಪ್ತರು ಸೇರಿ ಯುವಕರು ಸಾರ್ವಜನಿಕ ರಸ್ತೆಗಳಲ್ಲಿ ಬೈಕ್‌ ವ್ಹೀಲಿಂಗ್ ಶೋಕಿಯಿಂದ ಬಹಳಷ್ಟು ಜನರ ಪ್ರಾಣಹಾನಿ ಮತ್ತು ತೀವ್ರ ಗಾಯಗಳಾಗಿರುವುದು ನಮ್ಮ ಕಣ್ಣ ಮುಂದೆ ಕಾಣುತ್ತಿದೆ. ಎಷ್ಟೆ ಎಚ್ಚರಿಕೆ ಕೊಟ್ಟರೂ ಪದೇ ಪದೇ ಈ ಘಟನೆ ಉಲ್ಬಣಿಸುತ್ತಿರುವುದು ಪೊಲೀಸ್ ಇಲಾಖೆಯ ಭಯವಿಲ್ಲದಂತಾಗಿದೆ. ಬೈಕ್‌ ವ್ಹೀಲಿಂಗ್ ಮಾಡುತ್ತಿರುವುದು ಸಾರ್ವಜನಿಕರಿಗೆ, ಯಾವುದೆ ಸಂಘಸಂಸ್ಥೆಯ ಸದಸ್ಯರುಗಳಿಗೆ ಕಂಡರೆ, ಅಲ್ಲೇ ವಿಡಿಯೋ ತೆಗೆದು ಸಾಕ್ಷಿ ಇಟ್ಟಕೊಂಡು ಸಾರ್ವಜನಿಕರೆದುರೆ ಅವರಿಗೆ ಗೂಸಾ ಕೊಟ್ಟು, ಕೈ ಕಾಲು ಮುರಿದು ಪೊಲೀಸರಿಗೆ ಒಪ್ಪಿಸಿದಾಗ ಸಾರ್ವಜನಿಕರ ವಿರುದ್ಧ ಯಾವುದೆ ಕ್ರಮ ತೆಗೆದುಕೊಳ್ಳಬಾರದೆಂದು ಮನವಿ ನೀಡಲಾಗುತ್ತಿದೆ. ಪೊಲೀಸ್‌ ಇಲಾಖೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ ವಿಶೇಷ ಕ್ರಮದಡಿ ಅಂಥವರಿಗೆ ಎಚ್ಚರಿಕೆ ಕೊಟ್ಟು ಈ ಬೈಕ್‌ ವ್ಹೀಲಿಂಗ್ ಪಿಡುಗನ್ನ ಸಂಪೂರ್ಣ ಮಟ್ಟಹಾಕಬೇಕು. ಪದೇ ಪದೇ ಈ ಘಟನೆ ಕಂಡರೆ ಸಾರ್ವಜನಿಕರೇ ಶಿಕ್ಷಿಸುವುದು ನೋಡಿದರೇ ಇದು ಪೊಲೀಸ್ ಇಲಾಖೆಯ ನಿಷ್ಕ್ರಿಯತೆಯೆಂದು ನ್ಯಾಯಾಲಯದಲ್ಲಿ ದೂರು ನೀಡಿ ಸಾರ್ವಜನಿಕರ, ಅಮಾಯಕರ ಪ್ರಾಣ ಹಾನಿ ತಪ್ಪಿಸಲು ಹೆಜ್ಜೆ ಇಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇಡೀ ರಾಜ್ಯಾದ್ಯಂತ ನಡೆಯುತ್ತಿರುವುದರಿಂದ ದ್ವಿಚಕ್ರ ವಾಹನ ಚಲಾಯಿಸುವ ಚಾಲಕರಿಂದ ಬಹಳಷ್ಟು ಮಹಿಳೆಯರು, ಯುವತಿಯರಿಗೆ ಇವರುಗಳಿಂದ ಗಾಯಗಳಾಗಿವೆ, ದಯವಿಟ್ಟು ನೀವು ವಿಶೇಷವಾಗಿ ಎಚ್ಚರಿಕೆ ಕೊಟ್ಟು, ಬೈಕ್‌ ವ್ಹೀಲಿಂಗ್‌ ಪಿಡುಗನ್ನ ನಿರ್ಮೂಲನೆ ಮಾಡಲೇಬೇಕೆಂದು ಆಗ್ರಹಿಸಿ ಮನವಿ ನೀಡುತಿದ್ದೇವೆ ಎಂದು ರಾಷ್ಟ್ರ ರಕ್ಷಣಾ ಸಮಿತಿಯ ಸುರೇಶ್‌ ಗೌಡ, ಶ್ರಯಾಂಕ್‌ ಗೌಡ, ಚಂದ್ರಕಾಂತ್‌ ಇತರರು ಉಪಸ್ಥಿತರಿದ್ದರು.