ಸಾರಾಂಶ
ದಾಬಸ್‍ಪೇಟೆ: ಎರಡನೇ ಹಂತದಲ್ಲಿ ಸಂಸ್ಕರಣೆ ಮಾಡಿದ ವೃಷಭಾವತಿ ನೀರನ್ನು ಮೂರನೇ ಹಂತದಲ್ಲಿಯೂ ಸಂಸ್ಕರಣೆ ಮಾಡಿ ಕೆರೆಗಳಿಗೆ ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ದಾಬಸ್‍ಪೇಟೆ: ಎರಡನೇ ಹಂತದಲ್ಲಿ ಸಂಸ್ಕರಣೆ ಮಾಡಿದ ವೃಷಭಾವತಿ ನೀರನ್ನು ಮೂರನೇ ಹಂತದಲ್ಲಿಯೂ ಸಂಸ್ಕರಣೆ ಮಾಡಿ ಕೆರೆಗಳಿಗೆ ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಸೋಂಪುರ ಹೋಬಳಿಯ ರಾಯರಪಾಳ್ಯ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರವೂ ಈ ಯೋಜನೆಗೆ ಜಾರಿಗೆ ತಂದಾಗ ಮೂರನೇ ಹಂತದ ಸಂಸ್ಕರಣೆಗೆ ಅನುಮೋದನೆ ನೀಡಿದ್ದರೆ ಈಗ ಸರ್ಕಾರಕ್ಕೆ ಒತ್ತಾಯ ಮಾಡುವ ಅನಿವಾರ್ಯತೆ ಇರಲಿಲ್ಲ. ಆದರೆ, ಮೂರನೇ ಹಂತದ ಸಂಸ್ಕರಣ ಮಾಡಿದರೆ ನಮ್ಮ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಆದ್ದರಿಂದ ಮೂರನೇ ಹಂತದ ಸಂಸ್ಕರಣೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು.2ನೇ ಹಂತ ಸಾಕು ಎಂದಿದ್ದು ಬಿಜೆಪಿ:
ಎರಡನೇ ಹಂತದ ಸಂಸ್ಕರಣೆ ಮಾಡುವಾಗ ಬಿಜೆಪಿ ಸರ್ಕಾರ ಮತ್ತು ಆ ಪಕ್ಷದ ನಾಯಕರು ಎಲ್ಲಿ ಹೋಗಿದ್ದರು. ಆಗ ಮಾತನಾಡಲು ಧ್ವನಿ ಇರಲಿಲ್ಲವೇ? ನನಗೂ ನಮ್ಮ ಬದ್ಧತೆ ಇದೆ, ಆರಂಭದಲ್ಲಿಯೇ 3ನೇ ಹಂತದ ಸಂಸ್ಕರಣೆ ಮಾಡಬೇಕೆಂದು ಮನವಿ ಮಾಡಿದ್ದು, ಆರ್ಥಿಕವಾಗಿ ಬಹಳಷ್ಟು ಖರ್ಚು ಆಗಲಿದೆ. ಬಿಜೆಪಿಯವರು ಎರಡನೇ ಹಂತವೇ ಸಾಕು ಎಂದು ನಿರ್ಧರಿಸಿದ್ದಾರೆ. ಅದನ್ನು ನಾವು ಮುಂದುವರಿಸಿದ್ದೇವೆ. ಈ ನೀರು ಆಶುದ್ದ ಎಂದು ಬಿಜೆಪಿ ಪಕ್ಷದ ರಾಜ್ಯ ನಾಯಕರು ಹೇಳಿದರೆ ಅವರೊಂದಿಗೆ ಸಿಎಂ ಭೇಟಿ ಮಾಡಿ ಈ ಯೋಜನೆಯನ್ನು ಸ್ಥಗಿತಗೊಳಿಸುತ್ತೇನೆ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ಕುಡಿಯುವ ನೀರಿನ ಸೇವನೆ ಮಾಡುವುದು ಅಗತ್ಯ. ಜನರ ಜೀವನ ಮತ್ತು ಆರೋಗ್ಯದ ಹಿತ ದೃಷ್ಟಿಯಿಂದ ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸುವ ಸಲುವಾಗಿ ನೆಲಮಂಗಲದ ಜನಪ್ರಿಯ ಶಾಸಕರಾದ ಎನ್.ಶ್ರೀನಿವಾಸ್ ಅವರು ಸರ್ಕಾರದಿಂದ ಅನುದಾನ ತಂದು ಅಗತ್ಯವಿರುವ ಗ್ರಾಮಗಳಲ್ಲಿ ಶುದ್ದನೀರಿನ ಘಟಕಗಳನ್ನು ನಿರ್ಮಿಸಿ ಜನತೆಗೆ ಶುದ್ದ ನೀರು ಒದಗಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡ ಅಗಳಕುಪ್ಪೆ ಗೋವಿಂದರಾಜು, ಎನ್ ಪಿಎ ಸದಸ್ಯ ಅಂಚೆಮನೆ ಪ್ರಕಾಶ್, ಭೂನ್ಯಾಯ ಮಂಡಳಿ ಸದಸ್ಯ ಚಂದ್ರಶೇಖರ್, ಮುಖಂಡರಾದ ಶಿವಕುಮಾರ್, ಸುರೇಶ್, ಯೋಗಾನಂದೀಶ್, ಸಿದ್ದರಾಜು, ಪಾರ್ಥ, ಲಕ್ಕೂರು ಸಿದ್ದರಾಜು, ವೆಂಕಟಾಚಲಯ್ಯ, ಲೋಕೇಶ್, ಚಿಕ್ಕಣ್ಣ, ಹನುಮಂತರಾಯಪ್ಪ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.ಪೋಟೋ 4 :
ಸೋಂಪುರ ಹೋಬಳಿಯ ರಾಯರಪಾಳ್ಯ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಟ್ಟಡ ನಿರ್ಮಾಣಕ್ಕೆ ಶಾಸಕ ಎನ್.ಶ್ರೀನಿವಾಸ್, ಎಂಎಲ್ ಸಿ ರವಿ ಗುದ್ದಲಿಪೂಜೆ ನೆರವೇರಿಸಿದರು. ಅಗಳಕುಪ್ಪೆ ಗೋವಿಂದರಾಜು, ಎನ್ ಪಿಎ ಸದಸ್ಯ ಅಂಚೆಮನೆ ಪ್ರಕಾಶ್ ಇತರರಿದ್ದರು.;Resize=(128,128))
;Resize=(128,128))
;Resize=(128,128))