ಅರಣ್ಯ ವ್ಯಾಪ್ತಿಯಿಂದ ಪಟ್ಟಣಕ್ಕೆ ಬಂದಿದ್ದ ಚುಕ್ಕೆ ಜಿಂಕೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿ ಮರಳಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಮಡಿಕೇರಿ: ಅರಣ್ಯ ವ್ಯಾಪ್ತಿಯಿಂದ ಪಟ್ಟಣಕ್ಕೆ ಬಂದಿದ್ದ ಚುಕ್ಕೆ ಜಿಂಕೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿ ಮರಳಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ವಿರಾಜಪೇಟೆ - ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ಸಿರಿನೀಟಿ ಹಾಲ್ ಸಮೀಪ ಚುಕ್ಕೆ ಜಿಂಕೆ ಕಾಣಿಸಿಕೊಂಡಿದ್ದು ಮಾಹಿತಿ ತಿಳಿದ ಕೂಡಲೇ ಕಾರ್ಯಪ್ರವರ್ತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಸುರಕ್ಷಿತವಾಗಿ ರಕ್ಷಣೆ ಮಾಡಿ ಬಳಿಕ ಮಾಕುಟ್ಟ ಮೀಸಲು ಅರಣ್ಯಕ್ಕೆ ಮರಳಿ ಬಿಟ್ಟಿದ್ದಾರೆ.

ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತಾ ಚೌಹಾಣ್ ಹಾಗೂ ವಿರಾಜಪೇಟೆ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಹಸೀನ್ ಭಾನು ದಾವಡಿ ಅವರ ಮಾರ್ಗದರ್ಶನದಲ್ಲಿ, ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಮ್ ಕೆ ವಿ ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಘವ ಪಿಜೆ, ಶ್ರೀನಿವಾಸ್, ಲೋಕೇಶ್, ಗಸ್ತು ಅರಣ್ಯಪಾಲಕ ನಂದೀಶ ಏ ಎಸ್ ಸೇರಿದಂತೆ ವಿರಾಜಪೇಟೆ ವಿಭಾಗದ ಆರ್ ಆರ್ ಟಿ ಸಿಬ್ಬಂದಿ ಹಾಗೂ ಇ ಟಿ ಎಫ್ ಆನೆ ಕಾರ್ಯಪಡೆ ಚುಕ್ಕೆ ಜಿಂಕೆ ಸಂರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.