ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ: ಕಾದಾಡುತ್ತಾ ಹೋಗಿ ಜಮೀನಿನಲ್ಲಿದ್ದ 80 ಅಡಿ ಆಳದ ಬಾವಿಗೆ ಬಿದ್ದಿದ್ದ ಜೋಡಿ ಎತ್ತುಗಳನ್ನು ರಕ್ಷಣೆ ಮಾಡುವಲ್ಲಿ ಆಗ್ನಿ ಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ನೀರಲಗಿ ಗ್ರಾಮದ ಬಸನಗೌಡ ಯಾಳವಾರ ಎಂಬುವರ ಜಮೀನಿನಲ್ಲಿ ನಡೆದಿದೆ. ಗ್ರಾಮದ ರೈತ ಶರಣಪ್ಪ ಮಾದರ ತನ್ನ ಎರಡು ಎತ್ತುಗಳೊಂದಿಗೆ ಮಂಗಳವಾರ ಬಸನಗೌಡ ಯಾಳವಾರರ ಜಮಿನಿನಲ್ಲಿ ಕೆಲಸ ಮಾಡುತ್ತಿದ್ದಾಗ ಎತ್ತುಗಳು ಕಾದಾಟಕ್ಕೆ ಬಿದ್ದಿದ್ದು, ಈ ವೇಳೆ ಆಯತಪ್ಪಿ ಜಮೀನಿನಲ್ಲಿದ್ದ 80 ಆಳದ ಬಾವಿಗೆ ಬಿದ್ದಿವೆ.
ಕನ್ನಡಪ್ರಭ ವಾರ್ತೆ ತಾಳಿಕೋಟೆ: ಕಾದಾಡುತ್ತಾ ಹೋಗಿ ಜಮೀನಿನಲ್ಲಿದ್ದ 80 ಅಡಿ ಆಳದ ಬಾವಿಗೆ ಬಿದ್ದಿದ್ದ ಜೋಡಿ ಎತ್ತುಗಳನ್ನು ರಕ್ಷಣೆ ಮಾಡುವಲ್ಲಿ ಆಗ್ನಿ ಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ನೀರಲಗಿ ಗ್ರಾಮದ ಬಸನಗೌಡ ಯಾಳವಾರ ಎಂಬುವರ ಜಮೀನಿನಲ್ಲಿ ನಡೆದಿದೆ. ಗ್ರಾಮದ ರೈತ ಶರಣಪ್ಪ ಮಾದರ ತನ್ನ ಎರಡು ಎತ್ತುಗಳೊಂದಿಗೆ ಮಂಗಳವಾರ ಬಸನಗೌಡ ಯಾಳವಾರರ ಜಮಿನಿನಲ್ಲಿ ಕೆಲಸ ಮಾಡುತ್ತಿದ್ದಾಗ ಎತ್ತುಗಳು ಕಾದಾಟಕ್ಕೆ ಬಿದ್ದಿದ್ದು, ಈ ವೇಳೆ ಆಯತಪ್ಪಿ ಜಮೀನಿನಲ್ಲಿದ್ದ 80 ಆಳದ ಬಾವಿಗೆ ಬಿದ್ದಿವೆ. ಬಳಿಕ, ಶರಣಪ್ಪ ಮಾದರ ಎತ್ತುಗಳನ್ನು ಗಮನಿಸಿ ತನ್ನ ಸ್ನೇಹಿತರ ಮೂಲಕ ಅಗ್ನಿ ಶಾಮಕ ದಳದ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಹಗ್ಗ ಮತ್ತು ಪೈಪ್‌ಗಳ ಸಹಾಯದಿಂದ ಬಾವಿಗೆ ಬಿದ್ದಿದ್ದ ಜೋಡಿ ಎತ್ತುಗಳನ್ನು ರಕ್ಷಣೆ ಮಾಡಿದ್ದಾರೆ. ಎರಡು ಎತ್ತುಗಳು ಸುರಕ್ಷಿತವಾಗಿದ್ದು, ಅವುಗಳಿಗೆ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಎಚ್.ಎಸ್.ಬುರಾನಗೋಳ, ಠಾಣೆಯ ಪ್ರಭು ಸಣ್ಣಕ್ಕಿ, ವಾಹನ ಚಾಲಕ ಹಣಮಂತ ಮಡಿವಾಳರ, ಜಾಕೀರಹುಸೇನ ನಾಲತವಾಡ, ಹಣಮಂತ್ರಾಯ ಕರಕಳ್ಳಿ, ಶಂಕರಗೌಡ ನರಸಲಗಿ, ಸಿಬ್ಬಂದಿ ಭಾಗವಹಿಸಿದ್ದರು.________