ಸಾರಾಂಶ
ನಾನು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು, ಜನರಿಗೆ ಜಮೀನು ಅಥವಾ ಮನೆಗಳಲ್ಲಾಗಲಿ ಹಾವುಗಳನ್ನು ಕಂಡರೆ ಕೊಲ್ಲದೆ ತಕ್ಷಣ ನನಗೆ ಮಾಹಿತಿ ನೀಡಿದರೆ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುತ್ತೇನೆ. ಯಾವುದೇ ಸಂಭಾವನೆ ಪಡೆಯುವುದಿಲ್ಲ.
ಹಲಗೂರು: ಸಮೀಪದ ಡಿ.ಹಲಸಹಳ್ಳಿ ನೀಲಗಿರಿ ತೋಪಿನಲ್ಲಿ ಪ್ರತ್ಯಕ್ಷಗೊಂಡ ಹೆಬ್ಬಾವನ್ನು ರಕ್ಷಿಸಿ ಶಿಂಷಾ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಗ್ರಾಮದ ನಾಗರಾಜು ಅಲಿಯಾಸ್ ರಾಮಾಚಾರಿ ಜಮೀನಿಗೆ ಹೋಗಿದ್ದಾಗ ಹೆಬ್ಬಾವನ್ನು ಕಂಡು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಯವರಿಗೆ ಮಾಹಿತಿ ನೀಡಿದ್ದಾರೆ. ಅವರು ಉರಗ ತಜ್ಞ ಜಗದೀಶ್ ಅವರಿಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿ, ತಕ್ಷಣ ಸ್ಥಳಕ್ಕೆ ಬಂದು ಹೆಬ್ಬಾವನ್ನು ಹಿಡಿದು ಶಿಂಷಾ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಉರಗ ತಜ್ಞ ಜಗದೀಶ್ ಅಲಿಯಾಸ್ ಗಿಡ್ಡಪ್ಪ ಮಾತನಾಡಿ, ನಾನು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು, ಜನರಿಗೆ ಜಮೀನು ಅಥವಾ ಮನೆಗಳಲ್ಲಾಗಲಿ ಹಾವುಗಳನ್ನು ಕಂಡರೆ ಕೊಲ್ಲದೆ ತಕ್ಷಣ ನನಗೆ ಮಾಹಿತಿ ನೀಡಿದರೆ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುತ್ತೇನೆ. ಯಾವುದೇ ಸಂಭಾವನೆ ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.