ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಪಿ.ಬಿ. ರಸ್ತೆಯಲ್ಲಿರುವ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಜೂ.5ರಂದು ನೂತನ ಜಿಎಂಯು ರೀಸರ್ಚ್ ಸೆಂಟರ್, ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಗ್ರಿಕಲ್ಚರಲ್ ಅಂಡ್ ಫುಡ್ ಬಯೋಟೆಕ್ನಾಲಜಿ, ಇಂಟೆಲ್ ಉನ್ನತಿ ಡೇಟಾ ಸೆಂಟ್ರಿಕ್ ಲ್ಯಾಬ್ ಹಾಗೂ ಟ್ಯಾಲಿ ಎಜುಕೇಶನ್ ಸೆಂಟರ್‌ ಉದ್ಘಾಟನಾ ಸಮಾರಂಭವನ್ನು ವಿವಿಯ ನೂತನ ಶೈಕ್ಷಣಿಕ ಕಟ್ಟಡದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿ.ವಿ. ಸಂಶೋಧನಾ ಮತ್ತು ನಾವೀನ್ಯತೆ ಡೀನ್ ಡಾ. ಕೆ.ಎನ್.ಭರತ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಅಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಯು. ಕೃಷ್ಣರಾಜ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್ ವಿಭಾಗದ ಗೌರವ ಪ್ರಾಧ್ಯಾಪಕ ಪ್ರೊ. ಕೆ.ರಾಜಣ್ಣ, ಇಂಟೆಲ್ ಕಾರ್ಪೊರೇಷನ್‌ನ ರಾಷ್ಟ್ರೀಯ ವ್ಯವಹಾರ ವ್ಯವಸ್ಥಾಪಕ ಎಚ್.ಗಿರೀಶ್, ಎಡ್‌ಗೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಗುರುಪ್ರೀತ್ ಸಿಂಗ್, ಟ್ಯಾಲಿ ಎಜುಕೇಷನ್ ಮತ್ತು ಡಿಸ್ಟ್ರಿಬೂಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜಿ.ಜಿ.ಕುಮಾರ್, ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಪ್ರೇಮ್‌ರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಇಆರ್‌ಪಿ ನಿರ್ದೇಶಕ ಕೀರ್ತಿ ಪ್ರಸಾದ್ ಮಾತನಾಡಿ, ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್, ಸಹ ಉಪ ಕುಲಪತಿಗಳಾದ ಡಾ. ಎಂ.ವೇಣುಗೋಪಾಲ ರಾವ್, ಕುಲಸಚಿವ ಡಾ. ಬಿ.ಎಸ್. ಸುನಿಲ್ ಕುಮಾರ್ ಉಪಸ್ಥಿತರಿರುವರು ಎಂದು ಹೇಳಿದರು.

ವಿವಿ ಸಂಶೋಧನೆ, ನಾವೀನ್ಯತೆ, ಕೌಶಲ್ಯಾಭಿವೃದ್ಧಿ ಹಾಗೂ ಕೈಗಾರಿಕಾ ಸಹಭಾಗಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉದ್ಯೋಗೋದ್ಯಮ ಕೌಶಲ್ಯಗಳ ತರಬೇತಿ ದೊರೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಕೆ.ಕೆ.ಪ್ರಕಾಶ್, ವಾಣಿಜ್ಯ ನಿರ್ವಹಣಾ ವಿಭಾಗದ ನಿರ್ದೇಶಕರಾದ ಡಾ. ಎಚ್.ಎಸ್. ಶ್ವೇತಾ, ಮಾರ್ಕೆಟಿಂಗ್ ಅಂಡ್ ಪ್ರಮೋಷನ್ ವಿಭಾಗದ ಡೀನ್ ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ, ವಸಂತಕುಮಾರ್ ಇದ್ದರು.


- - -

-3ಕೆಡಿವಿಜಿ32: ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ, ಕೌಶಲ್ಯಾಭಿವೃದ್ಧಿ ಕೇಂದ್ರಗಳ ಉದ್ಘಾಟನೆ ಸಮಾರಂಭ ಆಯೋಜಿಸಿರುವ ಕುರಿತು ಡಾ. ಕೆ.ಎನ್.ಭರತ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.