ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಜನಸಂಖ್ಯೆಗೆ ಆಧಾರವಾಗಿ ಸಮಾಜದ ಏಳಿಗೆಗಾಗಿ ಸರ್ಕಾರ ಜಾತಿಗಳಿಗನುಗುಣವಾಗಿ ಮೀಸಲಾತಿ, ಒಳ ಮೀಸಲಾತಿಗಳನ್ನು ನ್ಯಾಯ ಬದ್ಧವಾಗಿ ನೀಡಬೇಕು ಹಾಗೂ ಯೋಜನೆಗಳನ್ನು ಜಾರಿಗೆ ತರಬೇಕು. ಅದಕ್ಕೆ ನಾವೆಲ್ಲರೂ ಬದ್ಧವಾಗಿದ್ದೇವೆ ಎಂದು ಚಿತ್ರನಟ ಚೇತನ್ ಹೇಳಿದರು.ಅವರು ತಾಲೂಕಿನ ಯಂಜಲಗೆರೆ ಗ್ರಾಮದಲ್ಲಿ ಜೈ ಭೀಮ್ ಯುವಕರ ಸಂಘ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರ ೧೩೪ ನೇ ಜನ್ಮ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು. ನಾವು ನೀಲಿ ಬಣ್ಣದ ವಸ್ತ್ರವನ್ನು ಧರಿಸುವ ಉದ್ದೇಶವೆಂದರೆ ಆಕಾಶವೂ ನೀಲಿ, ನಾವು ಧರಿಸುವ ವಸ್ತ್ರವೂ ನೀಲಿ ನಾವೆಲ್ಲರೂ ಒಂದೇ ಎಂಬುವ ರೀತಿ ನೀತಿಯನ್ನು ನೀಲಿ ವಸ್ತ್ರದ ಸಂಖೇತವಾಗಿದೆ. ಯಾರೇ ಆಗಿರಲಿ, ಯಾವುದೇ ಸರಕಾರವಿರಲಿ ಸಂವಿಧಾನದ ಬಗ್ಗೆ ಮಾತನಾಡುವವುದಷ್ಟೇ ಅಲ್ಲ. ಜನ ಸಾಮಾನ್ಯರ ಸಮ ಸಮಾಜದ ಒಳಿತಿಗಾಗಿ ನ್ಯಾಯ ಎತ್ತಿ ಹಿಡಿಯುವ ಕೆಲಸವಾದಾಗ ಮಾತ್ರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಧ್ಯೇಯ, ಕನಸು ನನಸಾಗುತ್ತದೆ. ಸರ್ವರಿಗೂ ಸಮಾನತೆ ಕಲ್ಪಿಸುವ ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಎಂದರು. ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ ರಾಜ್ಯದಲ್ಲಿ ಜನಗಣತಿ ಪರಿಶೀಲನೆ ಸಂದರ್ಭದಲ್ಲಿ ದಲಿತರು ತಮ್ಮ ಜಾತಿ ಕಾಲಂ ನಲ್ಲಿ ಮಾದಿಗ ಎಂದು ನಮೂದಿಸಿ ಬೇಕು. ಇದರಿಂದ ಒಳ ಮೀಸಲಾತಿ ಪಡೆಯಲು ಸಹಕಾರಿ ಯಾಗುತ್ತದೆ. ಶಿಕ್ಷಣ ಮತ್ತು ಸಂಘಟನೆಯಿಂದ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ. ಅಂಬೇಡ್ಕರ್ ಅವರು ಹೇಳಿದಂತೆ ಸಂಘಟನೆ ಮತ್ತು ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ. ಅಧಿಕಾರ ಬರುತ್ತದೆ ಹೋಗುತ್ತದೆ ಆದರೆ ನಾವುಗಳು ಮಾಡುವ ಕೆಲಸವನ್ನು ಸಮುದಾಯ ನೆನಪಿಡಬೇಕು ಹಾಗೆ ಕೆಲಸ ಮಾಡಬೇಕು ಅದಕ್ಕೂ ಸಹ ಅಂಬೇಡ್ಕರ್ ಸ್ಪೂರ್ತಿಯಾಗಬೇಕು. ಅವರಿಗೆ ಅಧಿಕಾರ ಬಂದಾಗ ಸಮುದಾಯವನ್ನು ಮೇಲಕ್ಕೇತ್ತುವ ಕೆಲಸ ಮಾಡಿ ಇಂದಿನ ಸಹ ಪ್ರತಿಯೊಬ್ಬರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಅಂತವರ ಆದರ್ಶಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರು ಬಿ. ಗುಂಡಪ್ಪ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್, ನಿವೃತ್ತ ಉಪ ನಿರ್ದೇಶಕ ವೈ.ಕೆ.ಬಾಲಕೃಷ್ಣ, ಪ್ರೊ. ಬಗ್ಗನಡು ನಾಗಭೂಷಣ್, ಡಾ.ಓ.ನಾಗರಾಜ್, ನಟರಾಜ್, ಜಿ.ಪಂ. ಮಾಜಿ ಸದಸ್ಯ ಕೆಂಚಮಾರಯ್ಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಯಂಜಲಗೆರೆ ಮೂರ್ತಿ, ಮುಖಂಡರಾದ ನರಸೀಯಪ್ಪ, ಮದಲೂರು ಮೂರ್ತಿ ಮಾಸ್ಟರ್, ರಾಕೇಶ್ ಬಾಬು, ಶ್ರೀನಾಥ್, ವೈ.ಕೆ. ತಿಪ್ಪೇಸ್ವಾಮಿ, ದಲಿತ ಸಂಘರ್ಷ ಸಮಿತಿಯ ಟೈರ್ ರಂಗನಾಥ್, ತಿಪ್ಪೇಸ್ವಾಮಿ, ನವೀನ್, ಕಾಂತರಾಜು, ತಿಮ್ಮರಾಜು, ಗೋವಿಂದರಾಜು, ಸುಧಾಕರ್, ಡಾ.ಅರುಂಧತಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಈರಸಿದ್ದಮ್ಮ, ದ್ವಾರನಕುಂಟೆ ಲಕ್ಷ್ಮಣ, ನರಸಿಂಹ ಮೂರ್ತಿ ಸೇರಿದಂತೆ ಜೈ ಭೀಮ್ ಯುವಕ ಸಂಘದವರು ಗ್ರಾಮಸ್ಥರು ಹಾಜರಿದ್ದರು.