ದುರಾಡಳಿತ ನಿಗ್ರಹಿಸಿ ಜನಸಾಮಾನ್ಯರಿಗೆ ಸ್ಪಂದಿಸಿ

| Published : Mar 04 2025, 12:34 AM IST

ಸಾರಾಂಶ

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ದುರಾಡಳಿತ ಹೆಚ್ಚಿದ್ದು, ಅಧಿಕಾರಿಗಳು ಕೇವಲ ಪ್ರಭಾವಿ ವ್ಯಕ್ತಿಗಳಿಗಷ್ಟೇ ನಿಷ್ಠರಾಗಿದ್ದು, ಜನಸಾಮಾನ್ಯರ ಅಳಲು ಕೇಳುವವರಿಲ್ಲದಂತಾಗಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೂ ಅಧಿಕಾರ ವರ್ಗದಲ್ಲಿರುವುದು ಖಂಡನೀಯ ಎಂದು ಜನಧ್ವನಿ ವೇದಿಕೆ ಆರೋಪಿಸಿದೆ.

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ದುರಾಡಳಿತ ಹೆಚ್ಚಿದ್ದು, ಅಧಿಕಾರಿಗಳು ಕೇವಲ ಪ್ರಭಾವಿ ವ್ಯಕ್ತಿಗಳಿಗಷ್ಟೇ ನಿಷ್ಠರಾಗಿದ್ದು, ಜನಸಾಮಾನ್ಯರ ಅಳಲು ಕೇಳುವವರಿಲ್ಲದಂತಾಗಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೂ ಅಧಿಕಾರ ವರ್ಗದಲ್ಲಿರುವುದು ಖಂಡನೀಯ ಎಂದು ಜನಧ್ವನಿ ವೇದಿಕೆ ಆರೋಪಿಸಿದೆ.

ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಜನಧ್ವನಿ ವೇದಿಕೆಯ ತಾಲೂಕು ಅಧ್ಯಕ್ಷ ಗಿರೀಶ್, ಕ್ರಿಮಿನಲ್‌ ಹಿನ್ನಲೆಯುಳ್ಳ ವ್ಯಕ್ತಿಗಳೂ ಪಟ್ಟಣ ಪಂಚಾಯಿತಿ ಆಡಳಿತ ವರ್ಗದಲ್ಲಿದ್ದು, ಅವರಿಗೆ ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅರ್ಹತೆ ಕಾನೂನಿನ್ವಯ ಮಾನ್ಯತೆ ಇರುವುದಿಲ್ಲ. ಅಂತಹ ವ್ಯಕ್ತಿಗಳನ್ನು ಸಮರ್ಥಿಸಿಕೊಂಡು ಕ್ರಿಮಿನಲ್ ಆರೋಪಿಗಳಿಗೆ ಉದ್ಯೋಗ ನೀಡುವುದು ಕಾನೂನು ಬಾಹಿರ. ಗ್ರಾಪಂ ಅವಧಿಯಲ್ಲಿ ಭೂಮಿ-ವಸತಿ ಹಂಚಿಕೆಗಾಗಿ 1700 ಅರ್ಜಿಗಳನ್ನು ಅರ್ಹ ಫಲಾನುಭವಿಗಳು ಸಲ್ಲಿಸಿರುತ್ತಾರೆ. ಆದರೆ ಇಲ್ಲಿಯವರೆಗೆ ಅವರಿಗೆ ನ್ಯಾಯ ಸಿಕ್ಕಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಪಟ್ಟಣ ಪಂಚಾಯಿತಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸರಿಯಾದ ಸಮಯಕ್ಕೆ ಕಚೇರಿಗೆ ಮುಖ್ಯಾಧಿಕಾರಿ ಒಳಗೊಂಡಂತೆ ಕೆಲವು ಅಧಿಕಾರಿಗಳು ಹಾಜರಾಗದೆ ತಮಗೆ ಇಷ್ಟ ಬಂದಾಗ ಬರುವುದು ಮತ್ತು ಅದನ್ನು ಪ್ರಸ್ನಿಸಿದ ಸಾರ್ವಜನಿಕರನ್ನು ನಿಂದಿಸಿರುವುದು ಖಂಡನೀಯ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಸರ್ಕಾರದ ಆದೇಶದಂತೆ ಅನಧಿಕೃತ ಬಡಾವಣೆ ಬಿ-ಖಾತಾ ಆಂದೋಲನವೂ ಮನೆಯ ಬಳಿ ಬಂದು ಮಾಡಿಕೊಡಬೇಕು. ಜೊತೆಗೆ ಬಂಡವಾಳಶಾಹಿಗಳಿಗೆ ಮಾತ್ರ ಸ್ಪಂದಿಸುತ್ತಿದ್ದು, ಸಾಮಾನ್ಯ ರೈತರು ಕೃಷಿ ಜಮೀನಿನಲ್ಲಿ ವಾಸದ ಮನೆ ನಿರ್ಮಿಸಿಕೊಂಡು ಇರುವ ಕಟ್ಟಡಗಳನ್ನು ಬಿ-ಖಾತೆ ವ್ಯಾಪ್ತಿಗೆ ತರದೇ ಇರುವುದು ರೈತರಿಗೆ ಮಾಡುವ ದೊಡ್ಡ ಮೋಸವಾಗಿದೆ. ಈ ಕೂಡಲೇ ಇವುಗಳನ್ನು ಬಿ-ಖಾತಾ ಆಂದೋಲನ ವ್ಯಾಪ್ತಿಗೆ ತರಬೇಕು. ಯಾವುದೇ ಬಡಾವಣೆಗಳ ಸಿ, ಎ ಜಾಗಗಳನ್ನು ಸಕ್ರಮ ಮಾಡಬಾರದು. ಸರ್ಕಾರಿ ಜಾಗಗಳನ್ನು ಸಂರಕ್ಷಿಸಬೇಕು ಎಂದರು.

ಕಾರ್ಖಾನೆಗಳು ಕೆಮಿಕಲ್ ಮಿಶ್ರಿತ ಕಲುಷಿತ ನೀರನ್ನು ಯಾರಿಗೂ ತಿಳಿಯದಂತೆ ಡ್ರೈನೇಜ್ ಮೂಲಕ ವೀರಾಪುರ, ದೊಡ್ಡತುಮಕೂರು ಕೆರೆಗೆ ಹರಿದು ಬಿಡುತ್ತಿವುದರ ವಿರುದ್ದ ಕ್ರಮ ಕೈಗೊಳ್ಳುವುದು ಮತ್ತು ಪರವಾನಗಿ ರದ್ದು ಪಡಿಸುವುದು ಅಗತ್ಯ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಮತ್ತು ಅಂತ್ಯ ಸಂಸ್ಕಾರದ ಮೊತ್ತ ಹೆಚ್ಚಿಸಬೇಕು. ಅರಹಳ್ಳಿ-ಗುಡದ್ದಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ವಾಸವಿರುವ ನಿರಾಶ್ರಿತರ ದಲಿತ ಕುಟುಂಬದವರಿಗೆ ಮೂಲ ಸೌಕರ್ಯ ಒದಗಿಸಬೇಕು.

ಜನಧ್ವನಿ ವೇದಿಕೆಯ ಮುಖಂಡರಾದ ಕೃಷ್ಣಮೂರ್ತಿ, ಸದಾನಂದ, ಸುದರ್ಶನ, ಮಹಾದೇವ್, ಅಕ್ಷಯ್, ಮಂಜುನಾಥ, ಬಿಸವನಹಳ್ಳಿ ನಾರಾಯಣಸ್ವಾಮಿ, ಕಸುವನಹಳ್ಳಿ ರವಿಕುಮಾರ್, ರವಿಚಂದ್ರ, ಹನುಮಂತರಾಜು, ವರದನಹಳ್ಳಿ ಉದಯ್ ವೆಂಕಟೇಶ್, ಎಳ್ಳುಪುರ ಮಹೇಶ್, ಅರಹಳ್ಳಿ ಗುಡದಹಳ್ಳಿ ವೆಂಕಟೇಶ್, ವೆಂಕಟೇಶ್ ರೆಡ್ಡಿ, ನಾಗದೇನಹಳ್ಳಿ ಚಂದ್ರಪ್ಪ, ಮಹೇಶ್, ಓಬದೇನಹಳ್ಳಿ ರಾಜೇಂದ್ರ, ರಘನಾಥಪುರ ವಿನೋದ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್‌......

ವಾರ್ಡ್ ಅವೈಜ್ಞಾನಿಕ ವಿಂಗಡಣೆ ರದ್ದುಗೊಳಿಸಿ:ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗಾಗಿ ತಯಾರಿಸಲಾಗಿರುವ ನೂತನ ವಾರ್ಡುಗಳ ಪಟ್ಟಿ ದೋಷಪೂರಿತವಾಗಿದ್ದು, ಅವೈಜ್ಞಾನಿಕ ವಾರ್ಡುಗಳ ವಿಂಗಡಣೆ ಮತ್ತು ಅವೈಜ್ಞಾನಿಕ ಮೀಸಲಾತಿಯನ್ನು ರದ್ದುಪಡಿಸಿ ನ್ಯಾಯಾಲಯದ ಆದೇಶ ಬರುವತನಕ ಚುನಾವಣೆ ಮುಂದೂಡಬೇಕು ಎಂದು ಜನಧ್ವನಿ ವೇದಿಕೆಯ ತಾಲೂಕು ಅಧ್ಯಕ್ಷ ಗಿರೀಶ್‌ ಆಗ್ರಹಿಸಿದರು. ಪಟ್ಟಣ ಪಂಚಾಯಿತಿಯ ಶುದ್ಧ ನೀರಿನ ಘಟಕಗಳನ್ನು ಖಾಸಗಿ ಒಡತನಕ್ಕೆ ನೀಡಿರುವುದನ್ನು ಸರಿಯಲ್ಲ. ಸಾರ್ವಜನಿಕರಿಂದ ಬಂದಿರುವ ದೂರು ಅರ್ಜಿಗಳ ಶೀಘ್ರ ವಿಲೇವಾರಿ ಆಗಬೇಕು ಎಂಬ ಬೇಡಿಕೆಗಳನ್ನು 7 ದಿನಗಳ ಒಳಗೆ ಪೂರೈಸಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಫೋಟೋ-

3ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಜನಧ್ವನಿ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.