ಸಾರಾಂಶ
ಹಾಸ್ಯಗಾರ್ತಿ ಡಾ.ಸುಧಾ ಬರಗೂರು ಸಲಹೆ । ವಿವೇಕಾನಂದ ಸಂಸ್ಥೆಯ 27 ನೇ ವರ್ಷದ ಶಾಲಾ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ಹನೂರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಬಗ್ಗೆ ಗೌರವ ಇರಲಿ ಹಾಸ್ಯಗಾರ್ತಿ ಡಾ.ಸುಧಾ ಬರಗೂರು ಸಲಹೆ ನೀಡಿದರು. ಪಟ್ಟಣದ ಆರ್ ಎಸ್ ದೊಡ್ಡಿಯಲ್ಲಿರುವ ಶ್ರೀ ವಿವೇಕಾನಂದ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ 161 ನೇ ಜಯಂತಿ ಮತ್ತು 27 ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಅವರು ಮಾತನಾಡಿ,ಸುಂದರ ವಾತಾವರಣ ತುಂಬಿರುವ ಶ್ರೀ ಮಲೈ ಮಹದೇಶ್ವರರು ನೆಲೆಸಿರುವ ಪ್ರಸಿದ್ಧ ಕ್ಷೆತ್ರದಲ್ಲಿ ಶಿಕ್ಷಣ ಕಲಿಯುತ್ತಿರುವ ಮಕ್ಕಳು ನೀವೆಲ್ಲ ಪುಣ್ಯವಂತರು ಮಾದಪ್ಪನ ಆಶೀರ್ವಾದ ಸದಾ ನಿಮ್ಮ ಮೇಲೆ ಇದೆ ಎಂದರು. ಪೋಷಕರುಗಳು ನಿಮ್ಮ ಮಕ್ಕಳ ಎದುರಿಗೆ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರುಗಳ ಬಗ್ಗೆ ನಿಂದಿಸಿ ಮಾತಾಡುವುದನ್ನು ಮೊದಲು ನಿಲ್ಲಿಸಿ, ಶಿಕ್ಷಣ ವ್ಯವಸ್ಥೆಯನ್ನು ಗೌರವಿಸುವುದನ್ನು ಕಲಿಯಬೇಕು. ಒಬ್ಬ ವೈದ್ಯ ಕೆಟ್ಟವನಾದರೆ ಅವನು ಸರಿಯಿಲ್ಲದಿದ್ದರೆ ಒಬ್ಬ ವ್ಯಕ್ತಿಯ ಜೀವ ಹೋಗುತ್ತದೆ. ಶಿಕ್ಷಕರು ಕೆಟ್ಟವರಾದರೆ ನೂರಾರು ಮಕ್ಕಳ ಭವಿಷ್ಯ ಹಾಳಾಗುತ್ತದೆ. ಆಗಾಗಿ ಶಿಕ್ಷಕರು ಮತ್ತು ಶಾಲೆಗಳಿಗೆ ನಮ್ಮದೇ ಆದ ಗೌರವ ನೀಡಬೇಕೆಂದು ಹೇಳಿದರು. ಶಿಕ್ಷಕರುಗಳು ಬಹಳ ಅಮೂಲ್ಯವಾದ ರತ್ನಗಳು ನಮ್ಮ ಮಕ್ಕಳ ಭವಿಷ್ಯ ನುಡಿಯುವವರು ಮಕ್ಕಳ ಸಾಧನೆ ಹಿಂದೆ ಗುರುಗಳ ಶ್ರಮದ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಪ್ರತಿ ವರ್ಷ ಮಕ್ಕಳ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸುವ ಕಾರ್ಯಕ್ರಮ ಇದಾಗಿದೆ. ನಮ್ಮ ಹನೂರು ತಾಲೂಕಿನಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನ ಶಿಕ್ಷಣ ಸಂಸ್ಥೆ ಇರುವುದು ಹೆಮ್ಮೆಯ ವಿಷಯ. ಈ ಶಾಲೆಯೂ ಶೈಕ್ಷಣಿಕ ಮಟ್ಟದಲ್ಲಿ ತಾಲೂಕಿನಲ್ಲಿ ಅಗ್ರ ಸ್ಥಾನ ಪಡೆದು ಸಾಧನೆಗೈದು ಕೀರ್ತಿ ಪಡೆಯಲಿ ಎಂದು ತಿಳಿಸಿ ಜೊತೆಗೆ ಕ್ಷೆತ್ರದಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಜೊತೆಗೂಡಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಭರವಸೆ ತುಂಬುವ ಕಾರ್ಯಕ್ರಮಗಳನ್ನು ಮಾಡುತ್ತೇವೆ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಲು ನನ್ನ ಪ್ರೋತ್ಸಾಹ ಸದಾ ಇರುತ್ತದೆ ಎಂದು ಮಾತನಾಡಿದರು.ಎಲ್ಲರನ್ನು ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ: ನರ್ಸರಿ ಮಕ್ಕಳಿಂದ ದ್ವಿತೀಯ ಪಿಯುಸಿ ಮಕ್ಕಳ ತನಕ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಪೋಷಕರು ಮತ್ತು ಸಾರ್ವಜನಿಕರನ್ನು ಎಲ್ಲಾ ಮಕ್ಕಳು ರಂಜಿಸಿದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ವೇದಿಕೆ ಮೇಲಿದ್ದ ಗಣ್ಯರುಗಳಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು. 2022-2023 ಸಾಲಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು 600ಕ್ಕೆ 586 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದ ಕೌದಳ್ಳಿ ಗ್ರಾಮದ ಸಾಜಿದ ಮತ್ತು ಅವರ ತಾಯಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮ ಮೈಸೂರು ಜಯಾನಂದ ಮಹಾರಾಜ್, ಬಿಇಓ ಶಿವರಾಜ್, ಸಂಸ್ಥೆ ಅಧ್ಯಕ್ಷರು ಉಮಾರಾಜೇಂದ್ರನ್, ಸುರೇಶ್ ನಾಯ್ಡು, ರಾಜೇಂದ್ರನ್, ಪ್ರಾಂಶುಪಾಲ ಮಧುಸೂದನ್, ಮುಖ್ಯ ಶಿಕ್ಷಕಿ, ಸತ್ಯ ಪ್ರಿಯ, ನಾಗೇಂದ್ರ, ಪದ್ಮಕ್ಸಿ, ರಾಣಿ, ಗಂಗಾಧರ್ ನಾಯ್ಡು, ಆಶೋಕ್, ಪಟ್ಟಣ ಪಂಚಾಯತ್ ಸದಸ್ಯರು ಮಹೇಶ್, ಗಿರೀಶ್, ಹಾಗೂ ಪೋಷಕರು ಸಾರ್ವಜನಿಕರು ಹಾಜರಿದ್ದರು.
------------------------------10ಸಿಎಚ್‌ಎನ್17ಹನೂರು ಪಟ್ಟಣದ ಶ್ರೀ ವಿವೇಕಾನಂದ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು. ಸುಧಾ ಬರಗೂರು ಮತ್ತಿತರರು ಇದ್ದರು.10ಸಿಎಚ್‌ಎನ್18 ಮತ್ತು19
ಹನೂರು ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಗಣ್ಯರು.