ವಿದ್ವತ್ ನೈತಿಕತೆ ಇದ್ದಲ್ಲಿ ಗೌರವ: ಪ್ರಭುಸ್ವಾಮೀಜಿ

| Published : May 18 2024, 12:30 AM IST

ವಿದ್ವತ್ ನೈತಿಕತೆ ಇದ್ದಲ್ಲಿ ಗೌರವ: ಪ್ರಭುಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಜಂಗಮರು ಏನೇ ಕಲಿಕಲಿ ಅದನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದಲ್ಲಿ, ಆರ್ಥಿಕವಾಗಿ ಸಬಲರಾಗಲು ಸಾಧ್ಯ.

ಸಂಡೂರು: ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಮಕ್ಕಳಿಗಾಗಿ ಸಂಸ್ಕಾರ ಶಿಬಿರವನ್ನು ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿದ್ವತ್ ಹಾಗೂ ನೈತಿಕತೆ ಇದ್ದಲ್ಲಿ ಗೌರವ ದೊರೆಯುತ್ತದೆ ಎಂದು ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜೋಳಿಗೆ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ೧೬ ದಿನಗಳ ಸಂಸ್ಕಾರ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಜಂಗಮರು ಆರ್ಥಿಕವಾಗಿ ಬಡವರಾಗಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತರಿದ್ದಾರೆ. ಜಂಗಮರು ಭಿಕ್ಷೆಗಾಗಿ ಮನೆಮನೆಗೆ ತೆರಳಿದಾಗ, ಅವರ ಮನೆಯಲ್ಲಿ ಯಾರಾದರು ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾಗ ಅಂತಹ ಸಂದರ್ಭದಲ್ಲಿ ಮುಳ್ಳಾವಿಗೆ ಮುಂತಾದ ಕಾರ್ಯಕಗಳ ಮೂಲಕ ಸಮಾಜವನ್ನು ತಿದ್ದುವ ಕಾಯಕವನ್ನು ಮಾಡುತ್ತಿದ್ದರು ಎಂದರು.

ಸ್ವಾಮಿಗಳಿಗೆ ಧಾರ್ಮಿಕ ಕ್ರಿಯೆಗಳ ಬಗ್ಗೆ ಸಷ್ಟವಾದ ಜ್ಞಾನವಿರಬೇಕು. ಜಂಗಮರು ಏನೇ ಕಲಿಕಲಿ ಅದನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದಲ್ಲಿ, ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಸಂಸ್ಕೃತ ಕಲಿಸುವ ಸಲುವಾಗಿ ಬಳ್ಳಾರಿ ಹಾಗೂ ಕಂಪ್ಲಿಯಲ್ಲಿ ಸಂಸ್ಕೃತ ಪಾಠ ಶಾಲೆಗಳು ಆರಂಭಿಸಲಾಯಿತು. ಶಿಬಿರಾರ್ಥಿಗಳು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು. ಕಲಿತ ವಿದ್ಯೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

ವೀರಶೈವ ಲಿಂಗಾಯತ ಸಂಘದ ಗೌರವಾಧ್ಯಕ್ಷ ಮೇಲುಸೀಮೆ ಶಂಕ್ರಪ್ಪ, ಕಾರ್ಯದರ್ಶಿ ಜಿ.ವೀರೇಶ್, ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ನಾಗರಾಜ ಗುಡೆಕೋಟೆ ಹಾಗೂ ಅಧ್ಯಕ್ಷತೆ ವಹಿಸಿದ್ದ ಬೇಡ ಜಂಗಮ ಸಮಾಜದ ಮುಖಂಡರಾದ ಎಚ್.ಎಂ. ಬಕ್ಕಪ್ಪಯ್ಯ ಇಂತಹ ಶಿಬಿರಗಳು ಹೆಚ್ಚೆಚ್ಚು ಮತ್ತು ನಿರಂತರವಾಗಿ ನಡೆದಾಗ, ಯುವ ಜನತೆ ಸಂಸ್ಕಾರ ಪಡೆದು, ಸುಸಂಸ್ಕೃತರಾಗಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ವಿ.ಎಂ. ಶರಣಯ್ಯ ಹಾಗೂ ಶಿಬಿರಾರ್ಥಿ ಜೆ.ಎಂ. ಹರ್ಷ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಎಂ. ಚರಂತಯ್ಯನವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎ.ಎಂ. ಸಂತೋಷ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಶಿಬಿರಾರ್ಥಿಗಳಿಗೆ ೧೬ ದಿನ ಇಷ್ಟಲಿಂಗ ಪೂಜೆ, ಇನ್ನಿತರೆ ಪೂಜಾ ವಿಧಿ ವಿಧಾನಗಳು, ಮಂತ್ರಗಳು, ವಚನ ಹಾಗೂ ಭಕ್ತಿಗೀತೆಗಳನ್ನು ಬೋಧಿಸಿದ ಮರಿಸ್ವಾಮಿ ಹಿರೇಮಠ, ರವಿಕುಮಾರ ಶಾಸ್ತ್ರಿ ಹಿರೇಮಠ, ಜೆ.ಎಂ. ಶರಣಬಸವ ಶಾಸ್ತಿ, ಬಿ.ಎಂ. ಕುಮಾರಸ್ವಾಮಿ, ಹೆಚ್.ಎಂ. ಶರಣಯ್ಯಸ್ವಾಮಿ, ಮುಖಂಡರಾದ ಕೆ.ಎಂ. ವಿನಾಯಕ, ವಿ.ಎಂ. ನಾಗರಾಜ, ಜೆ.ಎಂ. ಪರಮೇಶ್ವರ, ಎಂ. ನಾಗರಾಜ, ಹೆಚ್.ಎಂ. ಗುರುಬಸವರಾಜ, ಎ.ಎಂ.ಪಿ ಕೊಟ್ರೇಶ್, ಎ.ಎಂ. ಗುರುಬಸವರಾಜ, ಅಕ್ಕನ ಬಳಗದ ಸದಸ್ಯರು, ಶಿಬಿರಾರ್ಥಿಗಳ ಪಾಲಕರು ಉಪಸ್ಥಿತರಿದ್ದರು. ಹೆಚ್.ಎಂ. ವಿನಾಯಕ ಅವರು ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಿದ್ದರು.