ದೇಶದ ಐಕ್ಯತೆ ಸಾರ್ವಭೌಮತ್ವವನ್ನು ಗೌರವಿಸುವ ಮೂಲಕ ರಾಜ್ಯದ ಸಂಸ್ಕೃತಿ ರಕ್ಷಣೆ ಸಾಧ್ಯ ವೆಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಹೇಳಿದರು.

ಸುಂಟಿಕೊಪ್ಪ: ದೇಶದ ಐಕ್ಯತೆ ಸಾರ್ವಭೌಮತ್ವವನ್ನು ಗೌರವಿಸುವ ಮೂಲಕ ರಾಜ್ಯದ ಸಂಸ್ಕೃತಿ ರಕ್ಷಣೆ ಸಾಧ್ಯ ವೆಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಹೇಳಿದರು.

ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ವೃತ್ತದಲ್ಲಿ ಅಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ನೇರವೇರಿಸಿ ಮಾತನಾಡಿದರು. ರಾಜ್ಯೋತ್ಸವವು ಇತರೆ ಹಬ್ಬಗಳ ಆಚರಣೆಕ್ಕಿಂತಲ್ಲೂ ದೊಡ್ಡ ಹಬ್ಬ ಎಂದರು. ಕಳೆದ 40 ವಷಗಳಿಂದ ವಿವಿಧ ಸಂಘ ಸಂಸ್ಥೆಗಳು ಮತ್ತು ಕನ್ನಡ ಸಾಹಿತ್ಯ ಈ ಕನ್ನಡ ವೃತ್ತದಲ್ಲಿ ಆಚರಿಸಿಕೊಂಡು ಬರುತ್ತಿರುವ ಈ ರಾಜ್ಯೋತ್ಸವಕ್ಕೆ ಗ್ರಾಮ ಪಂಚಾಯಿತಿ ಕೈ ಜೋಡಿಸಿದರೆ ಈ ರಾಜ್ಯೋತ್ಸವಕ್ಕೆ ಇನ್ನಷ್ಟು ಮೆರಗು ಸಿಗಲಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಕಸಾಪ ದೊಂದಿಗೆ ಒಗ್ಗೂಡಿ ಆಚರಿಸಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಭಾಷಣಕಾರರಾಗಿ ಆಗಮಿಸಿದ ವಿದ್ಯಾರ್ಥಿನಿ ಶ್ರೀಶಾ ಮಾತನಾಡಿದ ಅವರು 70 ವಷಗಳ ಹಿಂದೆ ಹರಿದು ಹಂಚಿಹೋಗಿದ್ದ ಕನ್ನಡ ರಾಜ್ಯವು ಹಿರಿಯರು ವಿವಿಧ ಪ್ರಾಂತ್ಯಗಳಿಂದ ಒಗ್ಗೂಡಿಸಲಾಗಿದ್ದರೂ ಕೂಡ ಕನ್ನಡ ಕಂಪನ್ನು ಎಷ್ಟರ ಮಟ್ಟಿಗೆ ಉಳಿಸಿ ಬೆಳಸಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ನ್ಯಾಯಾಲಯ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಆದೇಶಗಳು ವಿವಿಧ ಮಾಹಿತಿ ಪತ್ರಗಳು ಆಂಗ್ಲ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದ್ದರಿಂದ ಕನ್ನಡ ಭಾಷೆಯು ಮಹತ್ವವವನ್ನು ಕಳೆದುಕೊಳ್ಳುತ್ತಿದೆ ಎಂದರು. ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಉದ್ಯಮಿ ಎಸ್.ಜಿ.ಶ್ರೀನಿವಾಸ್ ಅವರು ಕನ್ನಡ ಸಾಹಿತಿಗಳು ರಚಿಸಿದ ಗ್ರಂಥ ಹಾಗೂ ಶಿಲ್ಪ ಕಲೆಗಳು ಇಂದಿನ ಯುವಪೀಳಿಗೆಗೆ ಕನ್ನಡ ನಾಡು ನುಡಿ ಸಂಸ್ಕೃತಿಯ ಅಡಿಪಾಯಕ್ಕೆ ಮೈಲಿಗಲ್ಲು ಎಂದರು. ಸಾಧಕರಿಗೆ ಸನ್ಮಾನ: ಇದೇ ವೇಳೆ ಲಯನ್ಸ್ ಸಂಸ್ಥೆಯ ವತಿಯಿಂದ ಹತ್ತನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕಗಳಿಸಿದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರೋಜ ಹಾಗೂ ಸಂತಮೇರಿ ಆಂಗ್ಲ ಮಾದ್ಯಮ ಶಾಲೆಯ ಹ್ಯಾರನ್ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಿದರಲ್ಲದೆ 5 ಬಡ ಕುಟುಂಬಗಳಿಗೆ ಆಹಾರದ ಕಿಟ್ ಅನ್ನು ವಿತರಿಸಿದರು. ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸಬಾಸ್ಸಿನ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಲೀಲಾ ಮೇದಪ್ಪ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಯಶೋಧರ ಪೂಜಾರಿ, ಚುಟುಕು ಸಾಹಿತಿ ಮಾಜಿ ಅಧ್ಯಕ್ಷ ವಹೀದ್ ಜಾನ್, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಗ್ಲೇನ್ ಮೇನೆಜೇಸ್, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ವಿಜಯಕುಮಾರ್,ನಿಕೇಶ್,ಶಶಾಂಕ್, ಸರ್ಕಾರಿ ಪ್ರಾಥಮಿಕ ಶಾಲೆಯ ಮೂಖ್ಯೋಪಧ್ಯಾಯರಾದ ಕುಮಾರ್, ಕಾಸಾಪ ಹಿರಿಯ ಸದಸ್ಯರಾದ ಕೆ.ಪಿ.ಜಗನ್ನಾಥ್ , ಡಿ.ನರಸಿಂಹ, ಬಿ.ಎಸ್.ಸದಾಶಿವ ರೈ, ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸ್ಪೇಕ್ಟರ್ ಮಧು, ಕಸಾಪ ಕಾರ್ಯದರ್ಶಿ, ಕೆ.ಎಸ್.ಅನಿಲ್ ಕಮಾರ್, ಖಜಾಂಚಿ ಸತೀಶ್ ಶೇಟ್ ಮತ್ತಿತರರು ಇದ್ದರು. ಮೊದಲಿಗೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಹಕೀಂ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.