ವಿಜಯಪುರ: ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿದರೆ ರಾಷ್ಟ್ರದ ಭವಿಷ್ಯ ಉಜ್ವಲವಾಗುತ್ತದೆ. ಕಿರಿಯರು ಹಿರಿಯರಿಗೆ ಗೌರವ ಕೊಡುವುದೇ ನಿಜವಾದ ಸಂಸ್ಕಾರ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಿ.ರುದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ಸೇವಾ ಟ್ರಸ್ಟ್, ವೀರೇಶ್ವರ ಚಾರಿಟಬಲ್ ಟ್ರಸ್ಟ್ ಹಾಗೂ ದೇವನಹಳ್ಳಿಯ ಶ್ರೀ ಸಾಕ್ಷಿ ಮುರುಗ ಸೇವಾ ಟ್ರಸ್ಟ್‌ಗಳ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ೩೭೩ನೆಯ ಮಾಸಿಕ ಶಿವಾನುಭವಗೋಷ್ಠಿ, ಡಾ.ಶ್ರೀ ಜಚನಿ ಸಂಸ್ಮರಣೆ, ''''''''ವೀರೇಶಶ್ರೀ'''''''' ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಆರ್ಥಿಕ ನೆರವು ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರದ ನಿಡುಮಾಮಿಡಿ ಶಾಖಾ ಮಠದ ಆಡಳಿತ ಅಧಿಕಾರಿ ಡಾ. ಶಿವಜ್ಯೋತಿ ಅಕ್ಕನವರು ಮಾತನಾಡಿ, ಪ್ರತಿಯೊಂದು ಕುಟುಂಬದಲ್ಲಿಯೂ ಪ್ರೀತಿ, ಸಹಬಾಳ್ವೆ ಮತ್ತು ಭ್ರಾತೃತ್ವದ ಭಾವನೆ ಬೆಳೆಯಬೇಕು ಎಂದು ತಿಳಿಸಿದರು.

ಇದೇ ಸುಸಂದರ್ಭದಲ್ಲಿ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಸಹಾಯ ಹಾಗೂ ಸಮಾಜದ ಬಡ ಅಶಕ್ತರಿಗೆ ಆರ್ಥಿಕ ನೆರವನ್ನು ದೇವನಹಳ್ಳಿಯ ಸಾಕ್ಷಿ ಮುರುಗ ಸೇವಾ ಟ್ರಸ್ಟ್ ಅಧ್ಯಕ್ಷ ವಸುಂದರಮ್ಮ ವಿತರಿಸಿದರು.

ಇದೇ ವೇಳೆ ಜಚನಿ ಸಾಹಿತ್ಯ ಹಾಗೂ ಶರಣ ಸಾಹಿತ್ಯ ಚಿಂತಕರಾದ ಬೆಂಗಳೂರಿನ ಆರ್.ಸುಮತಿ ದೇವಿ ಅವರಿಗೆ ೨೦೨೬ನೇ ಸಾಲಿನ ಪ್ರತಿಷ್ಠಿತ ''''''''ವೀರೇಶಶ್ರೀ'''''''' ಪ್ರಶಸ್ತಿ, ಚಾರ್ಟೆಡ್ ಅಕೌಂಟೆಂಟ್ ಪದವಿ ಸಾಧನೆ ಮಾಡಿದ ಯುವ ಪ್ರತಿಭೆ ಬಿ.ಚೇತನ್ ಅವರಿಗೆ ''''''''ವಿಶೇಷ ಪ್ರತಿಭಾ ಪುರಸ್ಕಾರ'''''''' ನೀಡಿ ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ವೀರೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿ.ಅನಿಲ್ ಕುಮಾರ್, ಕಾರ್ಯದರ್ಶಿ ವಿಮಲಾಂಬ, ಗೋಷ್ಠಿ ಬಳಗದ ಕಾರ್ಯದರ್ಶಿ ಮ.ಸುರೇಶ್ ಬಾಬು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಡಪದ, ಹಿರಿಯ ಸಾಹಿತಿ ಬೇ.ಕಾ.ಮೂರ್ತೀಶ್ವರಯ್ಯ ಇತರರು ಉಪಸ್ಥಿತರಿದ್ದರು.

(ಫೋಟೊ ಕ್ಯಾಪ್ಞನ್‌)

ವಿಜಯಪುರದಲ್ಲಿ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ಸೇವಾ ಟ್ರಸ್ಟ್,ವೀರೇಶ್ವರ ಚಾರಿಟಬಲ್ ಟ್ರಸ್ಟ್, ಸಾಕ್ಷಿ ಮುರುಗ ಸೇವಾ ಟ್ರಸ್ಟ್ ಸಹಯೋಗದಲ್ಲಿ ಮಾಸಿಕ ಶಿವಾನುಭವ ಗೋಷ್ಠಿ, ಜಚನಿ ಸಂಸ್ಮರಣೆ, ''''ವೀರೇಶಶ್ರೀ'''' ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ಆರ್ಥಿಕ ನೆರವು ವಿತರಿಸಲಾಯಿತು.

(ಫೋಟೋ ಕ್ಯಾಫ್ಞನ್‌)

ವಿಜಯಪುರದಲ್ಲಿ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ಸೇವಾ ಟ್ರಸ್ಟ್,ವೀರೇಶ್ವರ ಚಾರಿಟಬಲ್ ಟ್ರಸ್ಟ್, ಸಾಕ್ಷಿ ಮುರುಗ ಸೇವಾ ಟ್ರಸ್ಟ್ ಸಹಯೋಗದಲ್ಲಿ ಮಾಸಿಕ ಶಿವಾನುಭವ ಗೋಷ್ಠಿ, ಜಚನಿ ಸಂಸ್ಮರಣೆ, ''''ವೀರೇಶಶ್ರೀ'''' ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ಸಮಾಜದ ಅಶಕ್ತರಿಗೆ ಆರ್ಥಿಕ ನೆರವು ನೀಡಲಾಯಿತು.