ಹೆತ್ತವರನ್ನು ಗೌರವಿಸುವುದು ಉತ್ತಮ ಸಂಸ್ಕಾರ

| Published : Aug 09 2024, 12:34 AM IST

ಸಾರಾಂಶ

ಮಠ ಮಾನ್ಯಗಳು ಕೇವಲ ಧಾರ್ಮಿಕ ತಾಣಗಳಾಗಿರದೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿವೆ. ಆದರೆ ತಾಲೂಕಿನ ಬಡದಾಳ ಗ್ರಾಮದ ತೇರಿನ ಮಠದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸುತ್ತಿರುವುದು ನಿಜವಾಗಿಯೂ ಇತರರಿಗೆ ಮಾದರಿಯಾಗಿದೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಮಠ ಮಾನ್ಯಗಳು ಕೇವಲ ಧಾರ್ಮಿಕ ತಾಣಗಳಾಗಿರದೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿವೆ. ಆದರೆ ತಾಲೂಕಿನ ಬಡದಾಳ ಗ್ರಾಮದ ತೇರಿನ ಮಠದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸುತ್ತಿರುವುದು ನಿಜವಾಗಿಯೂ ಇತರರಿಗೆ ಮಾದರಿಯಾಗಿದೆ ಎಂದು ಕೆಪಿಸಿಸಿ ಸದ್ಯಸ ಅರುಣಕುಮಾರ ಎಂ.ವೈ. ಪಾಟೀಲ ಹೇಳಿದರು.

ಅವರು ತಾಲೂಕಿನ ಬಡದಾಳ ಗ್ರಾಮದ ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ 3ನೇ ವರ್ಷದ ಮಾತೃ ಪಿತೃ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರೂ ನಮಗೆ ಬಾಲ್ಯದಲ್ಲಿ ತಂದೆ ತಾಯಿಯರ ಪಾದ ಪೂಜೆ ಮಾಡಿ ಗೌರವಿಸುವ ಭಾಗ್ಯ ಅವಕಾಶ ಸಿಗಲಿಲ್ಲ. ಬಡದಾಳ ಮಠದ ಶಾಲೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ಸಿಗಬೇಕು ಎನ್ನುವ ಪೂಜ್ಯರ ಕಲ್ಪನೆಯಂತೆ ಪ್ರತಿ ವರ್ಷ ಮಾತೃ ಪಿತೃ ವಂದನಾ ಕಾರ್ಯಕ್ರಮ ಮಾಡುವ ಮೂಲಕ ತಂದೆ ತಾಯಿಯರನ್ನು ಪೂಜ್ಯ ಭಾವನೆಯಿಂದ ಕಾಣುವಂತೆ ಮಕ್ಕಳಲ್ಲಿ ಮನನ ಮಾಡಿಸುತ್ತಿರುವುದು ನೋಡಿದರೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದರು.

ಡಾ.ಅಭಿನವ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ, ನಾವು ಮಕ್ಕಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕಾಗಿದೆ.ಇಂದಿನ ಮಕ್ಕಳು ನಾಳಿನ ಜವಾಬ್ದಾರಿಯುತ ನಾಗರಿಕರಾಗಲಿದ್ದಾರೆ. ಅವರನ್ನು ಸಮರ್ಥವಾಗಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾದನ ಹಿಪ್ಪರಗಾ ವಿರಕ್ತ ಮಠದ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು ಗುರುಸ್ವಾಮಿ ಶರಣರು ಕುಳೇಕುಮಟಗಿ ಮಲ್ಲಿಕಾರ್ಜುನ ಗದ್ದುಗೇಶ್ವರ ಶಿವಾಚಾರ್ಯರು ಶಿಕ್ಷಣ ಇಲಾಖೆ ಅಧಿಕಾರಿ ಮಾರುತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ರತ್ನಶೀಲ ಸಿದ್ದಾರ್ಥ ಬಸರಿಗಿಡ ಶಿವಾನಂದ ಚಿಂಚೋಳಿ ಪಿಡಿಒ ಪ್ರಶಾಂತ ನಂದಿ ಕಾರ್ಯದರ್ಶಿ ಭೀಮರಾಯ ಜಮಾದಾರ ಇತರರಿದ್ದರು.