ಸಾರ್ವಜನಿಕ ಕೆಲಸಗಳನ್ನು ಸಂಬಂಧಿಸಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ಕೆಲಸ ಮಾಡಿ ಕೊಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸಾರ್ವಜನಿಕ ಕೆಲಸಗಳನ್ನು ಸಂಬಂಧಿಸಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ಕೆಲಸ ಮಾಡಿ ಕೊಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು.

ತಾಲೂಕಿನ ತಡವಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ತಡವಲಗಾ ಗ್ರಾಮದ ಗ್ರಾಮ ಚಾವಡಿ ಮುಂಭಾಗದ ಅಗಸಿಯ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲನದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಸೇವೆ ಆಂದೋಲನ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದ ಅರ್ಜಿಗಳನ್ನು 21 ದಿನಗಳೊಳಗಾಗಿ ಅವರ ಸಮಸ್ಯೆಗಳಿಗೆ ತಕ್ಷಣ ಪರಿಹರಿಸಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ತಿಳಿಸಿದರು.

ಪ್ರಜಾಸೇವೆ ಆಂದೋಲನ ಜನಸ್ಪಂದನ ಎಂಬುವುದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಆಡಳಿತಾತ್ಮಕವಾಗಿ ಅವುಗಳಿಗೆ ತ್ವರಿತ ಪರಿಹಾರ ಒದಗಿಸಲು ಸರ್ಕಾರದ ಉದ್ದೇಶವಾಗಿದೆ. ಇದು ಜನಪರ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ತಮ್ಮ ಪಡಿತರ ಚೀಟಿ, ಪಿಂಚಣಿ, ಕಂದಾಯ ಇಲಾಖೆಯ ದಾಖಲೆಗಳು, ಮೂಲಸೌಕರ್ಯ (ರಸ್ತೆ, ದೀಪ, ನೀರು) ಸೇರಿದಂತೆ ಹಾಗೂ ಇತರ ದೂರುಗಳನ್ನು ನೇರವಾಗಿ ಶಾಸಕರ ಗಮನಕ್ಕೆ ತಂದರು. ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸಾಧ್ಯವಿದ್ದಷ್ಟು ದೂರುಗಳಿಗೆ ಸ್ಥಳದಲ್ಲೇ ಆಡಳಿತಾತ್ಮಕವಾಗಿ ತ್ವರಿತ ಪರಿಹಾರ ಒದಗಿಸಿದರು. ಈ ಸಂದರ್ಭದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿಲ್ಲಿ ಅಂಗವಿಕಲರ ಯೋಜನೆಯ ಅಡಿಯಲ್ಲಿ ಹಾಗೂ ವಿಧಾನ ವೇತನ ಸೇರಿದಂತೆ ಫಲಾನುಭವಿಗಳಿಗೆ ಮಂಜೂರಾತಿ ಆದೇಶಗಳನ್ನು ನೀಡಿದರು. ಪ್ರಧಾನಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಪಾಸ್‌ಬುಕ್‌ಗಳನ್ನು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಎಸಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್‌ ನಾಗೇಂದ್ರ ಕೊಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರ ಕುಂದು-ಕೊರತೆಗಳಿಗೆ ಹಾಗೂ ಅಗತ್ಯಗಳಿಗೆ ಧ್ವನಿಯಾಗುವುದು ಸಾರ್ವಜನಿಕರನ್ನು ಪರಿಣಾಮಕಾರಿಯಾಗಿ ಸ್ಪಂದಿಸಿ ಅವರ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಆದೇಶ ನೀಡಲಾಯಿತು. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ವೈಯಕ್ತಿಕವಾಗಿ ₹2 ಲಕ್ಷ ಹಣ ನೀಡಿದರು.ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಇಂಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ, ಭೂ ಸ್ವಾಧೀನ ಅಧಿಕಾರಿ ಜಿ.ಎಸ್.ಹೀರೆಮಠ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಸಾಹುಕಾರ, ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಪ್ಪ ಚನಗೊಂಡ, ಬಸವರಾಜ ಇಂಡಿ, ಆನಂದಪ್ಪ ದೇಸಾಯಿ, ಎಂ.ಆರ್.ಪಾಟೀಲ, ತಮ್ಮಣ್ಣ ಪೂಜಾರಿ, ಗುರುನಗೌಡ ಪಾಟೀಲ, ಉಪತಹಸೀಲ್ದಾರ್ ಎಚ್.ಎಚ್.ಗುನ್ನಾಪೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ರಾವೂರ, ಎಸ್.ಎಚ್.ಮುಜಗೊಂಡ, ಬಳ್ಳೊಳ್ಳಿ ಕಂದಾಯ ನಿರೀಕ್ಷಕ ಪಿ.ಜೆ.ಕೊಡಹೊನ್ನ, ಸಂತೋಷ ಹೋಟಗಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಶಿಕ್ಷಕ ಬಸವರಾಜ ಗೋರನಾಳ ನಿರೂಪಿಸಿ, ವಂದಿಸಿದರು.