ಸಾರಾಂಶ
ಗದಗ ನಗರದ ಜಿಲ್ಲಾಡಳಿತ ಭವನದ ಹೊರಗಡೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನ. ೨೩ರಿಂದ ಪ್ರಾರಂಭವಾದ ಸೇವಾ ಕಾಯಂಗೊಳಿಸುವಂತೆ ಆಗ್ರಹಿಸಿ ನಡೆದ ೧೮ನೇ ದಿನಕ್ಕೆ ಪದಾರ್ಪಣೆ ಮಾಡಿದೆ.
ಅನಿರ್ದಿಷ್ಟ ಹೋರಾಟ 18ನೇ ದಿನಕ್ಕೆ ಪದಾರ್ಪಣೆ
ಗದಗ: ಹಲವು ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ ಸೇವೆ ಮಾಡುತ್ತಾ ಬಂದಿರುವ ನಮಗೆ ಕುಟುಂಬದ ಭವಿಷ್ಯ ಅಭದ್ರವಾಗಿದೆ. ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುವುದರ ಮೂಲಕ ಕಾಯಂಗೊಳಿಸಲು ಮುಂದಾಗಬೇಕೆಂದು ಅತಿಥಿ ಉಪನ್ಯಾಸಕ ಎಸ್.ಕೆ. ಆಲೂರ ಆಗ್ರಹಿಸಿದರು.ನಗರದ ಜಿಲ್ಲಾಡಳಿತ ಭವನದ ಹೊರಗಡೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನ. ೨೩ರಿಂದ ಪ್ರಾರಂಭವಾದ ಸೇವಾ ಕಾಯಂಗೊಳಿಸುವಂತೆ ಆಗ್ರಹಿಸಿ ನಡೆದ ೧೮ನೇ ದಿನದ ಅನಿರ್ದಿಷ್ಟಾವದಿ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಮತ್ತು ವಿದ್ಯಾರ್ಥಿಗಳ ಬದುಕು ಉತ್ತಮವಾಗಿಸುವುದಕ್ಕಾಗಿ ನಿರಂತರವಾಗಿ ರಾಜ್ಯಾದ್ಯಂತ ಶ್ರಮಿಸುತ್ತಾ ಬಂದಿರುವ ನಮಗೆ ಭದ್ರತೆ ಇಲ್ಲದೆ ನಾವು ಕಣ್ಣೀರಿನಲ್ಲಿ ಬದುಕು ನಡೆಸುವಂತಾಗಿದೆ. ಸಾಕಷ್ಟು ಅತಿಥಿ ಉಪನ್ಯಾಸಕರು ಉಪನ್ಯಾಸ ನೀಡುವಾಗಲೇ ಹೃದಯಾಘಾತ, ಕೋವಿಡ್ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಸಾವಿಗೀಡಾಗಿ ಇವತ್ತು ಕುಟುಂಬಗಳು ಅತ್ಯಂತ ದುಸ್ತರ ಬದುಕನ್ನು ನಡೆಸುವಂತಾಗಿದೆ. ಮಾನವೀಯತೆಯಡಿ ಸರ್ಕಾರ ನಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಂಡು ನಮ್ಮನ್ನು ಕಾಯಂಗೊಳಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಒತ್ತಾಯಿಸಿದರು.
ಈ ವೇಳೆ ಅತಿಥಿ ಉಪನ್ಯಾಸಕರಾದ ಜೆ.ಬಿ. ದೊಡ್ಡುರ, ಎಚ್. ಚಂದ್ರಪ್ಪ, ಪದ್ಮಾವತಿ ತಳಕಲ್ಲ, ವನಮಾಲಾ ಕಾನಗೌಡರ, ಮಾಂತೇಶ.ಬಿ.ಎಚ್., ಸತೀಶ ಸರವಿ, ಡಾ.ವಿ.ಡಿ. ಮುಳಗುಂದ, ಸಂತೋಷ ಲಮಾಣಿ, ಪಿ.ಡಿ. ಜಟ್ಟೇನ್ನವರ, ಶಿವಾನಂದ ಮೂಲಿಮನಿ, ಎ.ಎ. ಸೊಪ್ಪಿನಮಠ, ಭಗತ್ತಸಿಂಗ ನವಲೂರಕರ, ಶ್ರೀನಿವಾಸ ಬೇವಿನಕಟ್ಟಿ, ಆರ್.ಎಸ್. ಬೆಟ್ಟದೂರ, ಯಲ್ಲಪ್ಪ ಹಂಚನಾಳ, ನವೀನ ತಿರಲಾಪುರ, ಲೀಲಾ ಹರ್ಲಾಪುರ, ವಿ.ಎಂ. ದೇಸಾಯಿಗೌಡರ, ಅಸ್ಪಾಕ, ಎಂ.ಎ. ಅಂಗಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಲೇಜಿನ ಅತಿಥಿ ಉಪನ್ಯಾಸಕರು ಇದ್ದರು.