ಸಂಘದ ಉಳಿವಿಗೆ ಜವಾಬ್ದಾರಿಯುತ ಕೆಲಸ ಅಗತ್ಯ

| Published : Sep 22 2024, 01:46 AM IST

ಸಾರಾಂಶ

ಮಳವಳ್ಳಿ: ಗ್ರಾಮೀಣ ಭಾಗದ ಉಸಿರಾಗಿರುವ ಸಹಕಾರ ಸಂಘಗಳನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಅಧ್ಯಕ್ಷ ಎಚ್.ಬಿ.ಬಸವೇಶ್ ತಿಳಿಸಿದರು.

ಮಳವಳ್ಳಿ: ಗ್ರಾಮೀಣ ಭಾಗದ ಉಸಿರಾಗಿರುವ ಸಹಕಾರ ಸಂಘಗಳನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಅಧ್ಯಕ್ಷ ಎಚ್.ಬಿ.ಬಸವೇಶ್ ತಿಳಿಸಿದರು.

ತಾಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದ ಸಹಕಾರ ಸಂಘದ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಸಂಘ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಸಹಕಾರ ಸಂಘದಲ್ಲಿ ಸಾಲ ಪಡೆದ ಸದಸ್ಯರು ನಿಗದಿತ ಅವಧಿಯಲ್ಲಿ ಮರು ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅನೇಕ ಸೌಲಭ್ಯಗಳನ್ನು ನೀಡಿ ಸದಸ್ಯರ ಹಿತಕಾಯುವ ಕೆಲಸವನ್ನು ಸಂಘವು ಪ್ರಾಮಾಣಿವಾಗಿ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹೊನ್ನೇಗೌಡ ವಾರ್ಷಿಕ ವರದಿ ಮಂಡಿಸಿ 2023-24 ಸಾಲಿನಲ್ಲಿ 7.50 ಲಕ್ಷ ರು. ನಿವ್ವಳ ಲಾಭ ಗಳಿಸಿದೆ ಎಂದು ಸಭೆಗೆ ತಿಳಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಿ ಗೌರವಿಸಲಾಯಿತು.

ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಲಿಂಗಯ್ಯ, ನಿರ್ದೇಶಕರಾದ ಪ್ರಭುಸ್ವಾಮಿ, ಎಚ್.ಬಿ.ಮಂಚೇಗೌಡ, ಎಂ.ನಂಜಪ್ಪ, ಬಿ.ಕೆ.ರಮೇಶ್, ರಾಮದೊಡ್ಡಯ್ಯ, ಪೂರ್ಣಿಮಾ, ಸಿ.ಡಿ.ಅನಿತಾ, ಎ.ವಿ.ಮಹೇಶ್, ವೀರೇಗೌಡ ಇದ್ದರು.