ಸಾರಾಂಶ
ಭದ್ರಾವತಿ ನಗರದ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಪುನರ್ ಆರಂಭಿಸಿ, ಲಕ್ಷಾಂತರ ಜನರಿಗೆ ಭಕ್ತಿ-ಶಕ್ತಿ-ಮುಕ್ತಿ ನೀಡಬೇಕು. ಆ ಮೂಲಕ ಭದ್ರಾವತಿ ಉಳಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ತಾಲೂಕು ಶಾಮಿಯಾನ ಮಾಲೀಕರ ಸಂಘ ಅಧ್ಯಕ್ಷ ಸಂತೋಷ್ ನೇತೃತ್ವದಲ್ಲಿ ಸ್ಥಳೀಯರು ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ, ಭದ್ರಾವತಿ
ನಗರದ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಪುನರ್ ಆರಂಭಿಸಿ, ಲಕ್ಷಾಂತರ ಜನರಿಗೆ ಭಕ್ತಿ-ಶಕ್ತಿ-ಮುಕ್ತಿ ನೀಡಬೇಕು. ಆ ಮೂಲಕ ಭದ್ರಾವತಿ ಉಳಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ತಾಲೂಕು ಶಾಮಿಯಾನ ಮಾಲೀಕರ ಸಂಘ ಅಧ್ಯಕ್ಷ ಸಂತೋಷ್ ನೇತೃತ್ವದಲ್ಲಿ ಸ್ಥಳೀಯರು ಮನವಿ ಮಾಡಿದರು.ಮನವಿಗೆ ಸ್ಪಂದಿಸಿರುವ ಡಾ.ವೀರೇಂದ್ರ ಹೆಗ್ಗಡೆ ಅವರು ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳಲು ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವ ಭರವಸೆ ನೀಡಿದ್ದಾರೆ.
ಇದಕ್ಕೂ ಮೊದಲು ವೀರೇಂದ್ರ ಹೆಗ್ಗಡೆ ಅವರು ಸಂತೋಷ್ ಅವರ ಸಾಹಿತ್ಯ ರಚನೆ ಮತ್ತು ನಿರ್ಮಾಪಕತ್ವದಲ್ಲಿ, ವಸಂತ ಮಾಧವ ಅವರ ಸಂಗೀತ ಮತ್ತು ಗಾಯಕರಾದ ಪ್ರತಿಮ, ಶರಾವತಿ ಹಾಗೂ ವರ್ಷಾ ಅವರ ಗಾಯನದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ಕುರಿತ "ಭಕ್ತಿ-ಶಕ್ತಿ-ಮುಕ್ತಿ " ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆಗೊಳಿಸಿದರು.ವೃತ್ತಿ ಬದುಕಿನ ಒತ್ತಡದ ನಡುವೆಯೂ ಸಂತೋಷ್ ಅವರ ಧಾರ್ಮಿಕ, ಸಂಗೀತ, ಸಾಹಿತ್ಯ ಸೇವೆಯನ್ನು ಹೆಗ್ಗಡೆ ಅವರು ಪ್ರಶಂಸಿಸಿದರು. ಈ ಸಂದರ್ಭ ಸoತೋಷ್ ಅವರ ತಾಯಿ ಉಮಾ, ತಂದೆ ಅಂಗಡಿ ತಮ್ಮಣ್ಣ, ಪತ್ನಿ ನೇತ್ರಾವತಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
- - - -ಡಿ20-ಬಿಡಿವಿಟಿ1:ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಲಾಯಿತು.