ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ, ಆಶ್ರಯ ನೀಡಿ ಅವರ ಬದುಕಿಗೆ ಬೆಳಕಾಗಿ ತ್ರಿವಿಧದಾಸೋಹಿ ಎಂದು ವಿಶ್ವವಿಖ್ಯಾತರಾಗಿರುವ ಡಾ.ಶಿವಕುಮಾರ ಸ್ವಾಮೀಜಿ ಹೆಸರುನ್ನು ಕೈಬಿಟ್ಟು ಈ ವೃತ್ತಕ್ಕೆ ತುಮಕೂರು ಸ್ಕ್ವೇರ್ ಎಂದು ನಾಮಕರಣ ಮಾಡಲಾಗುತ್ತದೆ ಎಂಬ ಗೊಂದಲ ನಾಗರೀಕರಲ್ಲಿದೆ. ಇಂತಹ ಪ್ರಯತ್ನ ಮಾಡಬಾರದು ಎಂದು ವಿವಿಧ ಮಠಾಧೀಶರು, ಹಲವು ಸಮಾಜಗಳ ಮುಖಂಡರು ಸಭೆ ಸೇರಿ ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ, ತುಮಕೂರು

ನಗರದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಎಲ್‌ಇಡಿ ಸ್ಕ್ರೀನ್ ಬೋರ್ಡ್ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲಿ ಇದರ ಉದ್ಘಾನೆಯಾಗಲಿದೆ. ಆದರೆ ಸ್ವಾಮೀಜಿಗಳ ಹೆಸರಿನ ಈ ವೃತ್ತಕ್ಕೆ ಹೆಸರು ಬದಲಾಗಬಹುದೆಂಬ ಗೊಂದಲ ಸ್ವಾಮೀಜಿಗಳ ಭಕ್ತರು ಹಾಗೂ ನಾಗರೀಕರಲ್ಲಿದೆ. ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಡಾ. ಶಿವಕುಮಾರ ಸ್ವಾಮೀಜಿಗಳ ಸ್ಕ್ವೇರ್ ಎಂಬ ಹೆಸರನ್ನು ಮುಂದುವರಿಸಿ ಗೊಂದಲ ನಿವಾರಣೆ ಮಾಡಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ, ಆಶ್ರಯ ನೀಡಿ ಅವರ ಬದುಕಿಗೆ ಬೆಳಕಾಗಿ ತ್ರಿವಿಧದಾಸೋಹಿ ಎಂದು ವಿಶ್ವವಿಖ್ಯಾತರಾಗಿರುವ ಡಾ.ಶಿವಕುಮಾರ ಸ್ವಾಮೀಜಿ ಹೆಸರುನ್ನು ಕೈಬಿಟ್ಟು ಈ ವೃತ್ತಕ್ಕೆ ತುಮಕೂರು ಸ್ಕ್ವೇರ್ ಎಂದು ನಾಮಕರಣ ಮಾಡಲಾಗುತ್ತದೆ ಎಂಬ ಗೊಂದಲ ನಾಗರೀಕರಲ್ಲಿದೆ. ಇಂತಹ ಪ್ರಯತ್ನ ಮಾಡಬಾರದು ಎಂದು ವಿವಿಧ ಮಠಾಧೀಶರು, ಹಲವು ಸಮಾಜಗಳ ಮುಖಂಡರು ಸಭೆ ಸೇರಿ ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ ಎಂದರು.

ಸ್ವಾಮೀಜಿ ಹೆಸರು ಬದಲಾವಣೆ ಮಾಡುವುದಿಲ್ಲ ಎಂದು ಆಯುಕ್ತರು ತಮಗೂ ಮಾಹಿತಿ ನೀಡಿದ್ದಾರೆ. ಈಗಾಗಲೇ ಹೇಳಿಕೆ ಕೂಡಾ ನೀಡಿದ್ದಾರೆ. ಆದರೂ ನಾಗರಿಕರಲ್ಲಿ ಗೊಂದಲ ಮುಂದುವರಿದಿದೆ. ಸ್ವಾಮೀಜಿಗಳ ಗೌರವಕ್ಕೆ ಧಕ್ಕೆಯಾಗದಂತೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸ್ಕ್ವೇರ್ ಎಂದು, ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಎಲ್‌ಇಡಿ ಡಿಸ್ ಪ್ಲೇ ಬೋರ್ಡಲ್ಲಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸ್ಕ್ವೇರ್ ಎಂಬುದನ್ನು ಮುಂದುವರೆಸಬೇಕು ಎಂದು ಶಾಸಕರು ಹೇಳಿದರು.

ಡಾ. ಶಿವಕುಮಾರ ಸ್ವಾಮೀಜಿ ಅನನ್ಯ ಸೇವೆ ಗುರುತಿಸಿ 25 ವರ್ಷಗಳ ಹಿಂದೆಯೇ ಸರ್ಕಾರದಿಂದ ಅಧಿಕೃತವಾಗಿ ನಾಮಕರಣಗೊಂಡಿರುವ ಡಾ. ಶಿವಕುಮಾರ ಸ್ವಾಮೀಜಿಗಳ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಎಲ್‌ಇಡಿ ಡಿಸ್ ಪ್ಲೇ ಬೋರ್ಡ್ಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸ್ಕ್ವೇರ್ ಎಂಬ ಹೆಸರನ್ನೇ ಮುಂದುವರೆಸಬೇಕೆಂಬುದು ಸಾರ್ವಜನಿಕರ ಆಶಯ. ಕಾನೂನು ರೀತಿ ನೀತಿಗಳನ್ನು ಅನುಸರಿಸಿ ಡಾ. ಶಿವಕುಮಾರ ಮಹಾಸ್ವಾಮೀಜಿ ಸ್ಕ್ವೇರ್ ಎಂಬ ಹೆಸರು ಮುಂದುವರೆಸಬೇಕು. ಸಾರ್ವಜನಿಕರು ಕೂಡಾ ಈ ವೃತ್ತವನ್ನು ಸ್ವಾಮೀಜಿ ವೃತ್ತ, ಎಸ್.ಎಸ್. ಸ್ಕ್ವೇರ್ ಎಂದು ಸಂಬೋಧಿಸಬೇಕು ಎಂದು ಜಿ.ಬಿ. ಜ್ಯೋತಿಗಣೇಶ್ ಮನವಿ ಮಾಡಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು, ಕಾರ್ಯದರ್ಶಿ ಕೆ. ವೇದಮೂರ್ತಿ, ನಗರಅಧ್ಯಕ್ಷಧನುಷ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.