ಸಾರಾಂಶ
ತುರುವೇಕೆರೆ: ನಿವೃತ್ತ ಅಪರ ಜಿಲ್ಲಾಧಿಕಾರಿ ಆರ್.ಅಲ್ಲಪ್ಪ ಲೋಕಮ್ಮನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತುರುವೇಕೆರೆ: ನಿವೃತ್ತ ಅಪರ ಜಿಲ್ಲಾಧಿಕಾರಿ ಆರ್.ಅಲ್ಲಪ್ಪ ಲೋಕಮ್ಮನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಲೋಕಮ್ಮನಹಳ್ಳಿಯ ಈ ಹಿಂದಿನ ಅಧ್ಯಕ್ಷರಾಗಿದ್ದ ಟಿ.ಆರ್.ಕೆಂಪೇಗೌಡ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಆರ್.ಅಲ್ಲಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 17 ಸದಸ್ಯರ ಬಲ ಹೊಂದಿರುವ ಗ್ರಾಪಂಯ ಚುನಾವಣೆಯಲ್ಲಿ 9 ಸದಸ್ಯರು ಭಾಗವಹಿಸಿದ್ದರು.ಅಧ್ಯಕ್ಷ ಆರ್.ಅಲ್ಲಪ್ಪ ಮಾತನಾಡಿ, ನಮ್ಮ ಅಧಿಕಾರದ ಅವಧಿಯಲ್ಲಿ ಗ್ರಾಪಂಯಲ್ಲಿ ಇರುವ ಸಣ್ಣಪುಟ್ಟ ಲೋಪ ದೋಷಗಳನ್ನು ಸರಿಪಡಿಸಲಾಗುವುದು. ಉತ್ತಮ ಆಡಳಿತ ನೀಡುವುದರ ಜೊತೆಗೆ ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಉತ್ತಮ ಕಾರ್ಯಕ್ರಮಗಳನ್ನು ಕೈಗೊಳ್ಳಲಿದ್ದು ಸಾರ್ವಜನಿಕರು ಸಹಕರಿಸಬೇಕು. ಸರ್ಕಾರದ ಸವಲತ್ತುಗಳು ಎಲ್ಲರಿಗೂ ತಲುಪುವಂತೆ ಭ್ರಷ್ಟಾಚಾರ ರಹಿತ, ಸ್ವಚ್ಛವಾದ ಆಡಳಿತವನ್ನು ನೀಡುವುದಾಗಿ ಭರವಸೆ ನೀಡಿದರು.ಆರ್. ಅಲ್ಲಪ್ಪ ಸುಮಾರು ವರ್ಷಗಳ ಕಾಲ ಕಂದಾಯ ಇಲಾಖೆಯ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿ, ಐದಾರು ವರ್ಷಗಳ ಕಾಲ ಅಪರ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ನಿವೃತ್ತರಾದ ನಂತರ ತಾಲೂಕಿನ ನೀರಗುಂದ ಗ್ರಾಪಂ ಸದಸ್ಯರಾಗಿ ಸದ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷೆ ವನಮಾಲ, ಸಹ ಸದಸ್ಯರಾದ ಗಂಗಾಧರಯ್ಯ, ಕೃಷ್ಣಪ್ಪ, ಎಂ.ಬಿ.ರೇಣುಕಪ್ಪ, ಪುಟ್ಟಲಕ್ಷ್ಮಮ್ಮ, ಕೋಮಲಾ, ಮಂಜುಳ, ಕೆಂಪೇಗೌಡ ಪಿಡಿಓ ಸುರೇಶ್ ಮುಖಂಡರಾದ ಶಶಿಧರ್, ಕಾಂತರಾಜು ಅಭಿನಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))