ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಚಿವರ ನಡೆ ಗ್ರಾಮ ಪಂಚಾಯ್ತಿ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವ ಬೆನ್ನಲ್ಲೆ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಅವರು ತಾಲೂಕಿನ ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ಕೊಟ್ಟು ಕಂದಾಯ ಇಲಾಖೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನಿರ್ದೇಶನದ ಮೇರೆಗೆ ತಾಲೂಕಿನ ದೇವಲಾಪುರ ಹೋಬಳಿಯ ಹದಮಗೆರೆ, ದೊಡ್ಡಹುಪ್ಪಳ, ಸುನಗಹಳ್ಳಿ, ಶೆಟ್ಟಹಳ್ಳಿ ಮತ್ತು ಕುಡುಗಬಾಳು ಗ್ರಾಮಗಳಿಗೆ ಬುಧವಾರ ಭೇಟಿ ಕೊಟ್ಟ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರು ರೈತರು ಪೌತಿ ಖಾತೆ ಮತ್ತು ಆರ್‌ಟಿಸಿ ತಿದ್ದುಪಡಿ ಮಾಡಿಸಿಕೊಳ್ಳಲು ಮುಂದಾಗಬೇಕು. ಪಡಿತರ ಕಾರ್ಡ್‌ಗಳಲ್ಲಿ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದರು.
ಜನಸಾಮಾನ್ಯರಿಗೆ ಜನಸ್ನೇಹಿ ಆಡಳಿತ ನೀಡಲು ಕಂದಾಯ ಇಲಾಖೆ ಬದ್ಧವಾಗಿದೆ. ಕಂದಾಯ ಇಲಾಖೆಯಲ್ಲಿ ಆಗಬೇಕಿರುವ ತಮ್ಮ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳನ್ನು ಆಶ್ರಯಿಸಿದೆ ನೇರವಾಗಿ ಕಚೇರಿಗೆ ಭೇಟಿ ಕೊಟ್ಟು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿದರೆ ತಮ್ಮ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಒದಗಿಸಲಾಗುವುದು. ಹಾಗಾಗಿ ಕಂದಾಯ ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.ಈ ವೇಳೆ ಉಪ ತಹಸೀಲ್ದಾರ್ ರವಿಶಂಕರ್, ರಾಜಸ್ವ ನಿರೀಕ್ಷಕ ಮಾದೇಶ್, ಗ್ರಾಮ ಆಡಳಿತಾಧಿಕಾರಿ ಬಸವರಾಜು ಕೊಂಡಜ್ಜಿ ಇದ್ದರು. ನಿವೃತ್ತ ಯೋಧ ಎಂ.ಶ್ರೀನಿವಾಸ್ ನಿಧನ: ತ್ವಿವರ್ಣ ಧ್ವಜ ಹೊದಿಸಿ ಗೌರವ
ಪಾಂಡವಪುರಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್)ನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪಟ್ಟಣದ ಹಿರೋಡೆ ಬೀದಿ ನಿವಾಸಿ ಎಂ.ಶ್ರೀನಿವಾಸ್ (53) ಬುಧವಾರ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಶಿಷ್ಟಾಚಾರದಂತೆ ಸಿಆರ್‌ಪಿಎಫ್ ಡಿಜಿ ತ್ರಿವರ್ಣ ಧ್ವಜ ಹೊದಿಸಿ ಗೌರವ ಸಲ್ಲಿಸಿದರು.
ಬೆಂಗಳೂರು ಕೇಂದ್ರ ಕಚೇರಿಯಿಂದ ಆಗಮಿಸಿದ ಸಿಆರ್‌ಪಿಎಫ್ ಡೈರೆಕ್ಟರ್ ಆಫ್ ಜನರಲ್ ಅವರು ಆಗಮಿಸಿ ಶಿಷ್ಟಾಚಾರದಂತೆ ತ್ರಿವರ್ಣ ಧ್ವಜದ ಹೊದಿಸಿ ಗೌರವ ಸಮರ್ಪಿಸಿದರು. ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದು ಸರ್ಕಾರಿ ಗೌರವ ಸಲ್ಲಿಸಿದರು.ಮೃತರಿಗೆ ಪತ್ನಿ ಸುಮಿತ್ರ, ಮಗಳು ಸಹನಾ ಹಾಗೂ ಪುತ್ರ ದರ್ಶನ್ ಇದ್ದಾರೆ.