ಸ್ವಾತಂತ್ರ್ಯಕ್ಕೆ ಪ್ರಾಣವನ್ನೇ ಬಲಿಕೊಟ್ಟ ಕ್ರಾಂತಿಕಾರರು: ಕೆ.ಪಿ.ಸುರೇಶ್ ಕುಮಾರ್

| Published : Aug 17 2025, 01:43 AM IST

ಸ್ವಾತಂತ್ರ್ಯಕ್ಕೆ ಪ್ರಾಣವನ್ನೇ ಬಲಿಕೊಟ್ಟ ಕ್ರಾಂತಿಕಾರರು: ಕೆ.ಪಿ.ಸುರೇಶ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಅನೇಕ ಕ್ರಾಂತಿಕಾರರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಹೇಳಿದರು.

- ವಿಶ್ವ ಹಿಂದೂ ಪರಿಷತ್ ನಿಂದ ಅಖಂಡ ಭಾರತ ಸಂಕಲ್ಪ ದಿವಸ್ । ಪಂಜಿನ ಮೆರವಣಿಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಅನೇಕ ಕ್ರಾಂತಿಕಾರರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಹೇಳಿದರು.

ಶುಕ್ರವಾರ ರಾತ್ರಿ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಅಖಂಡ ಭಾರತ್ ಸಂಕಲ್ಪ ದಿವಸ್ ಅಂಗವಾಗಿ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿ, 1947, ಆ.14 ರ ಮಧ್ಯ ರಾತ್ರಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಆದರೆ, ದೇಶ ಪಾಕಿಸ್ಥಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಎಂದು 3 ತುಂಡಾಗಿ ಹೋಯಿತು. ಆ.15ರ ಮಧ್ಯ ರಾತ್ರಿ ಹಿಂದೂಗಳ ಹತ್ಯೆ ಮಾಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಮಾತಿಗೆ ಬೆಲೆ ಕೊಡದೆ ದೇಶವನ್ನು ಜಾತ್ಯಾತೀತ ದೇಶವನ್ನಾಗಿ ಮಾಡಲಾಗಿದೆ. ಸ್ವಾತಂತ್ರಕ್ಕಾಗಿ ಅನೇಕ ಹಿಂದೂ ಕ್ರಾಂತಿಕಾರರು ನೇಣಿಗೆ ತಮ್ಮ ಕೊರಳೊಡ್ಡಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ದೇಶ ವಿಭಜನೆಯ ಕರಾಳತೆ ಬಗ್ಗೆ ತಿಳಿಸಬೇಕು. ಇಂದಿಗೂ ದೇಶದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳು, ಹಿಂದೂಗಳ ಆಚರಣೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.ಇದಕ್ಕೂ ಮೊದಲು ವಿಶ್ವ ಹಿಂದೂಪರಿಷತ್ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ಮುಖ್ಯರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ನಂತರ ಅಂಬೇಡ್ಕರ್ ವೃತ್ತದಲ್ಲಿ ಸಭೆ ನಡೆಸಿದರು. ಕಾರ್ಯಕರ್ತರು ದೇಶದ ಪರವಾಗಿ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಮುಖಂಡರಾದ ಅರುಣಕುಮಾರ್, ಕೋಣಿಕೆರೆ ಸತ್ಯನಾರಾಯಣ, ವಿ.ನೀಲೇಶ್, ಎನ್.ಎಂ. ಕಾಂತರಾಜ್,ಅಶ್ವನ್, ಹಂಚಿನಮನೆ ರಾಘವೇಂದ್ರ, ಜೆ.ಜಿ.ನಾಗರಾಜ್, ಬಿ.ಎಸ್.ಆಶೀಶ್‌ಕುಮಾರ್, ಎನ್.ಎಂ.ನಾಗೇಶ್, ಎನ್.ಡಿ.ಪ್ರಸಾದ್, ಮುರುಳಿ, ಅರುಣ್‌ಕುಮಾರ್‌ಜೈನ್,ಎಂ.ಟಿ.ಪ್ರವೀಣ, ಕೆಸುವೆಮಂಜುನಾಥ್, ಪ್ರೀತಮ್, ಮದನ್‌ಗೌಡ, ಮನೋಜ್‌ಗೌಡ,ದರ್ಶನ್, ಪುರುಷೋತ್ತ,ಮ್, ಎಚ್.ಡಿ.ಲೋಕೇಶ್, ದರ್ಶನ್,ಗಡಿಗೇಶ್ವರಅಭಿ ಮತ್ತಿತರರು ಇದ್ದರು.