ಗದಗ ಸಮೀಪದ ಮುಳಗುಂದ ಪಟ್ಟಣದ ಎಸ್.ಜೆ.ಜೆ.ಎಂ. ಪಪೂ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ, ರಿವಾರ್ಡ್ ಯೋಜನೆಯ ಕಾಮಗಾರಿಗಳ ಲೋಕಾರ್ಪಣೆ ಮತ್ತು ಫಲಾನುಭವಿ ಆಧಾರಿತ ಸವಲತ್ತು ವಿತರಣಾ ಕಾರ್ಯಕ್ರಮ ನಡೆಯಿತು.

ಮುಳಗುಂದ: ₹15.61 ಕೋಟಿಯ ರಿವಾರ್ಡ್ ಯೋಜನೆ ರೈತರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಗೆ ದಾರಿಯಾಗಿದೆ. ರಿವಾರ್ಡ್ ಯೋಜನೆ ಅಡಿ ಗದಗ ತಾಲೂಕಿನ ಈ ಭಾಗದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಲಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶನಿವಾರ ಸಂಜೆ ಪಟ್ಟಣದ ಎಸ್.ಜೆ.ಜೆ.ಎಂ. ಪಪೂ ಮಹಾವಿದ್ಯಾಲಯದ ಆವರಣದಲ್ಲಿ, ಜಿಲ್ಲಾಡಳಿತ ಜಿಪಂ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಸಂಸ್ಥೆಯಿಂದ ನಡೆದ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ, ರಿವಾರ್ಡ್ ಯೋಜನೆಯ ಕಾಮಗಾರಿಗಳ ಲೋಕಾರ್ಪಣೆ ಮತ್ತು ಫಲಾನುಭವಿ ಆಧಾರಿತ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೀಲಗುಂದ ಉಪಜಲಾನಯನ ವ್ಯಾಪ್ತಿಯಲ್ಲಿ 14 ಕಿರು ಜಲಾನಯನ ಪ್ರದೇಶದ ಒಟ್ಟು 5,769 ಹೆಕ್ಟೇ‌ರ್ (ಸುಮಾರು 14,422 ಎಕರೆ) ಭೂಮಿಯಲ್ಲಿ 4,508 ರೈತ ಕುಟುಂಬಗಳು ಮತ್ತು 815 ಮಹಿಳಾ ಸದಸ್ಯರನ್ನು ಒಳಗೊಂಡು, ಕೃಷಿ ಭೂಮಿಯ ರಕ್ಷಣೆಗೆ 14,422 ಎಕರೆ ಬದು ನಿರ್ಮಾಣ, 110 ಕೃಷಿ ಹೊಂಡಗಳು, 27 ಚೆಕ್ ಡ್ಯಾಂಗಳ ಹಾಗೂ 3,777 ಕಲ್ಲಿನ ಕೋಡಿಗಳನ್ನು ನಿರ್ಮಿಸಲಾಗಿದೆ.

ಅದೇ ರೀತಿ 50 ಸಾವಿರದಂತೆ 70 ಸ್ವಸಹಾಯ ಗುಂಪಗಳಿಗೆ ಸಹಾಯಧನ ನೀಡಲಾಗಿದೆ. ಈ ರಿವಾರ್ಡ್ ಯೋಜನೆ ಹಮ್ಮಿಕೊಂಡ ಗುರಿಯಂತೆ ಎಲ್ಲ ಕೆಲಸಗಳು ಪೂರ್ಣವಾಗಿವೆ. ಒಟ್ಟು ₹10.15 ಕೋಟಿ ಖರ್ಚಾಗಿದೆ. ಯೋಜನೆಯ ಇನ್ನ ₹5 ಕೋಟಿ ಉಳಿಕೆಯಾಗಿದ್ದು, ಅದನ್ನು ರೈತರಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಲಾಗುವುದು. ಉಳಿದ ಅನುದಾನದಲ್ಲಿ ಆಕಳು, ಎಮ್ಮೆಗಳನ್ನು ಈ ಭಾಗದ ರೈತರಿಗೆ ಕೊಡುವ ಮಾಡುವ ಉದ್ದೇಶ ಮಾಡಿದರೆ ಗ್ರಾಮೀಣ ಭಾಗದಲ್ಲಿ ಹೈನೋದ್ಯಮದಲ್ಲಿ ಭಾರಿ ಬದಲಾವಣೆಯಾಗುತ್ತದೆ. ಈ ಯೋಜನೆಯಲ್ಲಿ ಪ್ರಾಮಾಣಿಕ ಕೆಲಸವಾಗಿದೆ. ಇದಕ್ಕೆ ಶ್ರಮಿಸಿದ ಎಲ್ಲ ಕೃಷಿ ಅಧಿಕಾರಿ, ಸಿಬ್ಬಂದಿ ವರ್ಗ ಈ ಭಾಗದಲ್ಲಿ ಬಹುದೊಡ್ಡ ಸೇವೆ ಸಲ್ಲಿಸಿದ್ದಾರೆ ಎಂದರು. ರೈತ ಸಮುದಾಯ ಕಲ್ಯಾಣವಾಗಬೇಕಾದರೆ ರೈತ ಬೆಳೆದ ಬೆಳೆಗಳಿಗೆ ರೈತನೇ ಬೆಲೆ ನಿಗದಿ ಮಾಡುವ ದಿನಗಳು ಬರಬೇಕು. ಈ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆ ಇದ್ದು, ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಎಚ್.ಕೆ.ಪಾಟೀಲ್‌ ಹೇಳಿದರು.ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ರೈತರೇ ಬೆಲೆ ನಿಗದಿ ಮಾಡುವ ವ್ಯವಸ್ಥೆ ಇನ್ನೂ ಆಗದಿರುವುದು ನಾಚೀಕೆಗೇಡಿನ ಸಂಗತಿ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ರೈತರು ಲಾಭದಾಯಕ ಕೃಷಿ ಮಾಡಬೇಕಾದರೆ, ಕೃಷಿಗೆ ಬೇಕಾದ ಬೀಜ, ಗೊಬ್ಬರ ಉತ್ಪಾದನೆಯನ್ನು ರೈತರೇ ಮಾಡಬೇಕು. ಮಾರುಕಟ್ಟೆಯಿಂದ ಖರೀದಿಸುವ ಪದ್ಧತಿ ನಿಯಂತ್ರಣ ಮಾಡಬೇಕು. ಹೂಡಿಕೆ ಕಡಿಮೆಯಾದರೆ ಕೃಷಿ ಲಾಭದಾಯಕವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ರೈತರೇ ಬೆಲೆ ನಿಗದಿ ಮಾಡುವಂತಾಗಬೇಕು. ಈ ವರೆಗೂ ಆಗಿಲ್ಲ, ರೈತರು ಕೃಷಿಯನ್ನು ಲಾಭದಾಯಕ ಕೃಷಿ ಮಾಡಬೇಕಾದರೆ, ಕೃಷಿಗೆ ಬೇಕಾದ ಬೀಜ, ಗೊಬ್ಬರ ಉತ್ಪಾದನೆಯನ್ನು ರೈತರೇ ಮಾಡಬೇಕು, ಮಾರುಕಟ್ಟೆಯಿಂದ ಖರೀದಿಸುವ ಪದ್ಧತಿ ನಿಯಂತ್ರಣ ಮಾಡಬೇಕು. ಹೂಡಿಕೆ ಕಡಿಮೆಯಾದರೆ ಕೃಷಿ ಲಾಭದಾಯಕವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲತಜ್ಞ ರಾಜೇಂದ್ರಸಿಂಗ್ ಮಣ್ಣು ಮತ್ತು ಜಲಸಂರಕ್ಷಣೆ ಕುರಿತು ಸುದೀರ್ಘವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ವಿವಿಧ ಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸ್ವ ಸಹಾಯ ಸಂಘಗಳಿಗೆ ಚೆಕ್ ವಿತರಿಸಲಾಯಿತು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ವೀರೇಂದ್ರಗೌಡ ಪಾಟೀಲ, ಶಿವಪ್ಪ ಅರಹುಣಸಿ, ಶಶಿಕಲಾ ಪೂಜಾರ, ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ಷಣ್ಮುಖ ಬಡ್ನಿ, ಆರ್.ಎನ್. ದೇಶಪಾಂಡೆ, ಕೆ.ಎಲ್. ಕರಿಗೌಡರ, ಸಿದ್ದು ಪಾಟೀಲ, ರಾಮಣ್ಣ ಕಮಾಜಿ, ದೇವರಾಜ ಸಂಗನಪೇಟಿ, ಹೊನ್ನಪ್ಪ ನೀಲಗುಂದ, ಅಶೋಕ ಸೊನಗೋಜಿ, ಡಾ. ವಿ.ಬಿ. ಕುಳಿಗೋಡ, ಸುಧಾ ಮಂಕಣಿ, ಶಿವರಡ್ಡಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪುರ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಮಲ್ಲಯ್ಯ ಕೆ. ಇದ್ದರು.