ಸಾರಾಂಶ
ಜೋಯಿಡಾ: ವಿದ್ಯಾರ್ಥಿಗಳು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು. ಶೈಕ್ಷಣಿಕ ಹಂತದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಪಾಲಕರ ಪ್ರಾರ್ಥನೆ ಮತ್ತು ಶಿಕ್ಷಕರ ಶ್ರಮಕ್ಕೆ ಅಮೂಲ್ಯ ಪ್ರತಿಫಲ ನೀಡಬೇಕು. ಜತೆಗೆ ಪರಿಶುದ್ಧ ಜೀವನ ನಡೆಸಬೇಕು ಎಂದು ಕುಂಭಾರವಾಡ ವನ್ಯಜೀವಿ ವಲಯ ಅರಣ್ಯಾಧಿಕಾರಿ ಎಸ್.ಎಸ್. ಬೈಲಾ ತಿಳಿಸಿದರು.
ಶನಿವಾರ ತಾಲೂಕಿನ ಕುಂಭಾರವಾಡ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಿರಂತರ ಪ್ರಯತ್ನವಿದ್ದರೆ ಮಾತ್ರ ಸಾಧನೆ ಸಾಧ್ಯ. ಸಾಧನೆ ಮಾಡಿದ ನಂತರ ತಂದೆ- ತಾಯಿ ಮತ್ತು ಗುರುಗಳು ಜತೆಗೆ ಸ್ನೇಹಿತರನ್ನು ಮರೆಯಬಾರದು. ಇಂದು ಶಿಕ್ಷಣವೇ ಆಸ್ತಿಯಾಗಿದೆ ಎಂದರು.ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ, ತಾಲೂಕಿನಲ್ಲಿ ಮೂಲ ಸೌಕರ್ಯಗಳ ಕೊರತೆ ಜತೆಗೆ ಹಲವಾರು ಸಮಸ್ಯೆಗಳಿಗೆ, ಶಿಕ್ಷಣ, ಆರೋಗ್ಯ ಇನ್ನೂ ಜ್ವಲಂತ ಸಮಸ್ಯೆಗಳು, ಜನರು ತಮಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಡುತ್ತಿಲ್ಲ. ಇದು ಬೇಸರದ ಸಂಗತಿ. ವಿದ್ಯಾರ್ಥಿಗಳು ಅನ್ಯಾಯಗಳ ವಿರುದ್ಧ ಹೋರಾಡುವ ಮತ್ತು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ವಿ.ಆರ್. ಶೇಟ್ ಮಾತನಾಡಿದರು. 2024- 25ನೇ ಸಾಲಿನಲ್ಲಿ ಸಾಂಸ್ಕೃತಿಕ, ಕ್ರೀಡೆ ಮತ್ತು ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಮತ್ತು ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸೇವಾ ನಿವೃತ್ತಿ ಹೊಂದುತ್ತಿರುವ ಕಾಲೇಜಿನ ಪ್ರಾಚಾರ್ಯ ವಿ.ಆರ್. ಶೇಟ್ ಅವರನ್ನು ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಉಪನ್ಯಾಸಕರಾದ ಸುನಿಲ್ ಶೇಟಕರ ನಿರೂಪಿಸಿದರು. ಜ್ಞಾನೇಶ್ವರ ದೇಸಾಯಿ ಸ್ವಾಗತಿಸಿದರು. ಸುದರ್ಶನ ಗಾವಡಾ ವಂದಿಸಿದರು. ಸುನಿತಾ ಕುಣಬಿ ವರದಿ ವಾಚಿಸಿದರು. ರಾಘವೇಂದ್ರ ದೇಸಾಯಿ ಬಹುಮಾನಗಳನ್ನು ವಿತರಿಸಿದರು.ಇಂದು ಆಸ್ತಿಕ ಬ್ರಾಹ್ಮಣರ ಸೀಮಾ ಸಮಾವೇಶಹೊನ್ನಾವರ: ತಾಲೂಕಿನ ಕೊಳಗದ್ದೆ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ೯ರಿಂದ ಧರ್ಮಜಾಗೃತಿಗಾಗಿ ಶ್ರೀಮನ್ನೆಲಮಾವು ಮಠದ ಶಿಷ್ಯರ ಮತ್ತು ಆಸ್ತಿಕ ಬ್ರಾಹ್ಮಣರ ಸೀಮಾ ಸಮಾವೇಶ ಏರ್ಪಡಿಸಲಾಗಿದೆ.ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮಿಗಳು ಉದ್ಘಾಟನೆಯನ್ನು ಮಾಡುವರು. ಸಿದ್ದಾಪುರ ಶಿರಳಿಗಿಯ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.ಶ್ವೇತಾ ಹೆಗಡೆ ಮತ್ತು ಡಾ. ಕೆ.ಎಸ್. ಭಟ್, ಹಡಿನಬಾಳ ಅತಿಥಿಗಳಾಗಿ ಪಾಲ್ಗೊಳ್ಳುವರು. ನಂತರ ಪ್ರವಚನ ನಡೆಯಲಿದೆ. ಅಲ್ಲದೆ ಹವ್ಯಕ ಸಮಾಜ ಬಂಧುಗಳ ಸಮಸ್ಯೆ ಚರ್ಚೆ, ಸಾಮಾಜಿಕ ಆಚರಣೆಗಳ ಕುರಿತು ಉಪನ್ಯಾಸ ನಡೆಯಲಿದೆ.ವಿದ್ವಾನ್ ಅನಂತಮೂರ್ತಿ ಭಟ್ ಯಲಗಾರು, ಶಂಭುಹೆಗಡೆ ಹಳೆಮನೆ ಉಪನ್ಯಾಸ ನೀಡಲಿದ್ದಾರೆ. ಸಮಾರೋಪ ಸಮಾರಂಭ ಇಬ್ಬರು ಯತಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಗಣಪತಿ ಹೆಗಡೆ, ಕೃಷ್ಣ ಹೆಗಡೆ, ಕೃಷ್ಣಮೂರ್ತಿ ಭಟ್ ಮೊದಲಾದವರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.