ಕನ್ನಡಪ್ರಭ ವಾರ್ತೆ, ಬೀರೂರುಪಟ್ಟಣದಲ್ಲಿ ನಡೆಯುವ ಶನಿವಾರದ ಸಂತೆಯಲ್ಲಿ ಸುಂಕ ವಸೂಲಿಯ ವಾರ್ಷಿಕ ಹಕ್ಕಿನ ಹರಾಜಿಗೆ ಪುರಸಭೆ ನಿಗದಿಪಡಿಸಿದ್ದ ವಾರ್ಷಿಕ ಹಕ್ಕನ್ನು ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಪಡೆದ ಬಿಡ್ ದಾರರಿಗೆ ಅದನ್ನು ಸಂಗ್ರಹಿಸುವಲ್ಲಿ ನಷ್ಠವಾಗುತ್ತಿದೆ ಎಂದು ಬಿಡ್ ಕೂಗಿದ್ದ ಕೆ.ಎಸ್.ನಾಗರಾಜ್ ಪುರಸಭೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.ಪುರಸಭೆಯಲ್ಲಿ ನಡೆದ ವಿವಿಧ ವಾರ್ಷಿಕ ಬಾಬ್ತುಗಳ ಬಹಿರಂಗ ಹರಾಜಿನಲ್ಲಿ ಅವರು ಮಾತನಾಡಿ, ಈ ಹಿಂದೆ ವಾರದ ಸಂತೆ ವಾರ್ಷಿಕ ಸುಂಕ ವಸೂಲಿಗೆ ₹3.80 ಲಕ್ಷಕ್ಕೆ ಹರಾಜು ಪಡೆದಿದ್ದೆ, ಆದರೆ ರೈತರು ತಾವು ಬೆಳೆದ ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ನಾಗರಿಕರ ಮನೆ ಬಾಗಿಲಿಗೆ ತೆರಳಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಗ್ರಾಹಕರು ಸಂತೆಗೆ ಬರುವುದೇ ಕಡಿಮೆಯಾಗಿದೆ. ಉಳಿದ ರೈತರು ಸಂತೆಗೆ ಹಾಕದೆ ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವುದರಿಂದ ಸಂತೆ ಸುಂಕ ವಸೂಲಿ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ವಾರ್ಷಿಕ ಜಿಎಸ್ಟಿ ಸೇರಿ ಹಿಂದಿನ ಹರಾಜಿಗಿಂತ ಹೆಚ್ಚು ಬೆಲೆಗೆ ಕೂಗಿದರೆ ಮಾತ್ರ ಸುಂಕ ವಸೂಲಾತಿ ನೀಡುವುದಾಗಿ ತಿಳಿಸುತ್ತೀರಾ. ನಾವು ಠೇವಣಿ ಕಟ್ಟಿ ವರ್ತಕರ ಸಂಖ್ಯೆ ಕಡಿಮೆಯಾದರ ನಮಗೆ ನಷ್ಟ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ವಾರ್ಷಿಕ ಹರಾಜಿನ ಮೊತ್ತ ಕಡಿಮೆ ಮಾಡಿದರೆ ಮಾತ್ರ ನಾವು ಹರಾಜಿನಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಪುರಸಭೆಗೆ ಆದಾಯ ನೀಡುವ ತಮಗೆ ಅಭಿನಂದನೆ. ಈ ಹಿಂದೆ ಎಷ್ಟು ಮೊತ್ತಕ್ಕೆ ಸುಂಕ ವಸೂಲಾಗಿತ್ತೋ ಅದಕ್ಕಿಂತ ಜಾಸ್ತಿಗೆ ಹರಾಜು ನಡೆದರೆ ಮಾತ್ರ ತಮ್ಮನ್ನು ಪರಿಗಣಿಸಲಾಗುತ್ತದೆ. ಹರಾಜಿನಿಂದ ತಮಗೆ ನಷ್ಟವಾಗುತ್ತದೆ ಎಂದರೆ ಆ ಬಗ್ಗೆ ಪುರಸಭೆಗೆ ಅರ್ಜಿ ನೀಡಿ. ಸರ್ಕಾರಿ ಆದೇಶ ಮಾತ್ರ ನಾವು ಪಾಲಿಸುತ್ತೇವೆ. ಮುಂದಿನ ಹರಾಜು ಪ್ರಕ್ರಿಯೆ ದಿನಾಂಕ ತಿಳಿಸಿದಾಗ ನಮಗೆ ಪಾಲ್ಗೊಳ್ಳಲು ಇಷ್ಟವಾದಲ್ಲಿ ಭಾಗವಹಿಸಬಹುದು ಎಂದರು.ಪುರಸಭೆ ಮುಂಭಾಗ ವಾಣಿಜ್ಯ ಮಳಿಗೆಗಳ ಹರಾಜು ಪಡೆದಿದ್ದ ಪುನೀತ್ ಮಾತನಾಡಿ, ಕಳೆದ 7ತಿಂಗಳ ಹಿಂದೆ ಪುರಸಭೆ ಹರಾಜಿನಲ್ಲಿ ಮಾಸಿಕ ₹16ಸಾವಿರ ಕ್ಕೆ ಹರಾಜು ಪಡೆದು, ಮುಂಗಡ ಠೇವಣಿಗೆ ಪುರಸಭೆ ಅಧಿಕಾರಿಗಳು ಕಾಲಾವಕಾಶ ಕೊಡದೆ ₹2.5ಲಕ್ಷ ಕಟ್ಟಿದ್ದು ಜಿಲ್ಲಾಧಿಕಾರಿ ಬಳಿ ಸ್ಥಿರೀಕರಣ ಮಾಡಿದ ನಂತರ ಹಸ್ತಾಂತರಿಲಾಗುವುದು ಎಂದಿದ್ದರು, ಆದರೆ ಸ್ಥಿರಿಕರಣಕ್ಕೆ 7 ತಿಂಗಳು ಬೇಕಾ ಮಳಿಗೆ ಖಾಲಿ ಇದೆ. ಆವರೆಗೂ ಹಣ ಕಟ್ಟಿದ ನನಗೆ ನೀಡಿ ಎಂದು ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಪ್ರಕಾಶ್, ಹರಾಜಿನಲ್ಲಿ ಯಾರು ಹಣ ಕಟ್ಟಿ ಪಡೆದಿದ್ದಾರೋ ಅಂತವರ ದಾಖಲೆ ಸಂಪೂರ್ಣವಾಗಿ ಒದಗಿಸಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಲಾಗಿದೆ. ನಾವು ಯಾರನ್ನು ತಾತ್ಸಾರ ಮಾಡಿಲ್ಲ. ಶೀಘ್ರ ಸ್ಥಿರಿಕರಣವಾಗುತ್ತದೆ. ನಂತರ ಮಳಿಗೆ ಮಾಸಿಕ ಬಾಡಿಗೆ ಹಣ ಪಾವತಿಸಬಹುದು ಎಂದರು.ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಆಶ್ರಯ ಕಮಿಟಿ ಸದಸ್ಯ ಬಿ.ಟಿ.ಚಂದ್ರಶೇಖರ್, ಎನ್.ಮುಬಾರಕ್, ಪುರಸಭೆ ಅಧಿಕಾರಿ ಶಿಲ್ಪಾ, ಪ್ರದೀಪ್, ಗಿರಿರಾಜ್, ಲಿಂಗರಾಜ್, ಬಿಡ್ ದಾರರಾದ ಸರ್ಕಸ್ ಪ್ರಕಾಶ್, ಪ್ರವೀಣ್, ಭರತ್, ಆರೀಫ್ ಸೇರಿದಂತೆ ಮತ್ತಿತರಿದ್ದರು.4 ಬೀರೂರು 1ಬೀರುರು ಪುರಸಭೆ ಸಭಾಂಗಣದಲ್ಲಿ ಬುಧವಾರ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ವಿವಿಧ ವಾರ್ಷಿಕ ಬಾಬುಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.