ಜಾತಿ ಗಣತಿ ಹಿನ್ನೆಲೆ ಬಲಗೈ ಸಮುದಾಯ ಮುಖಂಡರ ಸಭೆ

| Published : Sep 22 2025, 01:00 AM IST

ಸಾರಾಂಶ

ಜನಗಣತಿ ವೇಳೆ ಜಾತಿ ಕಾಲಂ ನಲ್ಲಿ ಪರಿಶಿಷ್ಟ ಜಾತಿ, ಉಪಜಾತಿ ಕಾಲಂನಲ್ಲಿ ಹೊಲಯ, ಧರ್ಮದ ಕಾಲದಲ್ಲಿ ಬೌದ್ಧರು ಎಂದು ತಾಲೂಕಿನ ಬಲಗೈ ಸಮುದಾಯದವರು ಬರೆಸಬೇಕು ಹಾಗೂ ಜ್ಞಾನಪ್ರಕಾಶ್ ಸ್ವಾಮೀಜಿ ಅವರ ನೇತೃತ್ವದ ತಂಡದ ಆದೇಶವನ್ನು ಪಾಲಿಸುವಂತೆ ಕರೆ ನೀಡಲು ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸೋಮವಾರದಿಂದ ಆರಂಭವಾಗಲಿರುವ ಜಾತಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಗಣತಿ ಕಾರ್ಯ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಬಲಗೈ ಸಮುದಾಯದ ಮುಖಂಡರು ಸಭೆ ನಡೆಸಿದರು.

ಸಭೆಯಲ್ಲಿ ಭಾಗಿಯಾಗಿದ್ದ ಹಲವು ಮುಖಂಡರು ಇತ್ತೀಚಿಗೆ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಆಯೋಜಿಸಿದ ಸಭೆಯಲ್ಲಿ ನಾಗಮೋಹನ್ ದಾಸ್ ವರದಿಯಲ್ಲಿನ ಅಂಶಗಳ ಕುರಿತು ಚರ್ಚೆ ನಡೆಸಿ ತೆಗೆದುಕೊಂಡ ನಿರ್ಣಯದಂತೆ ಜಾತಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿ ಗತಿ ಗಣತಿ ಕಾರ್ಯದ ಬಗ್ಗೆ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಹಾಗೂ ಹಲವು ಸಂಘಟನೆಗಳ ಮುಖಂಡರು ಸಭೆ ನಡೆಸಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಮುಂಬರುವ ದಿನಗಳಲ್ಲಿ ಸಮುದಾಯದ ಮೇಲೆ ಆಗುವಂತಹ ಪರಿಣಾಮಗಳ ಬಗ್ಗೆ ಚರ್ಚಿಸಿದರು.

ಜನಗಣತಿ ವೇಳೆ ಜಾತಿ ಕಾಲಂ ನಲ್ಲಿ ಪರಿಶಿಷ್ಟ ಜಾತಿ, ಉಪಜಾತಿ ಕಾಲಂನಲ್ಲಿ ಹೊಲಯ, ಧರ್ಮದ ಕಾಲದಲ್ಲಿ ಬೌದ್ಧರು ಎಂದು ತಾಲೂಕಿನ ಬಲಗೈ ಸಮುದಾಯದವರು ಬರೆಸಬೇಕು ಹಾಗೂ ಜ್ಞಾನಪ್ರಕಾಶ್ ಸ್ವಾಮೀಜಿ ಅವರ ನೇತೃತ್ವದ ತಂಡದ ಆದೇಶವನ್ನು ಪಾಲಿಸುವಂತೆ ಕರೆ ನೀಡಲು ತೀರ್ಮಾನಿಸಲಾಯಿತು. ಬಲಗೈ ಸಮುದಾಯದ ಪ್ರತಿ ಗ್ರಾಮಗಳಲ್ಲೂ ಯುವಕರು, ಹಿರಿಯರು ತಿಳಿವಳಿಕೆ ಹೇಳುವಂತೆ ಕರೆ ನೀಡಲಾಯಿತು.

ಜಿಪಂ ಮಾಜಿ ಸದಸ್ಯ ಎಂ.ಎನ್.ಜಯರಾಜು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಬುದ್ಧ ಭಾರತ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ, ಅವರ ಕನಸನ್ನು ನನಸು ಮಾಡುವಲ್ಲಿ ಪ್ರತಿಯೊಬ್ಬರೂ ಅವರ ಪರಿಶ್ರಮ ಹಾಗೂ ತ್ಯಾಗದಿಂದ ಪಡೆದ ಮೀಸಲಾತಿ ಸೌಲಭ್ಯದಿಂದ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿರುವ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ಪುರಸಭೆ ಸದಸ್ಯ ಸಿದ್ದರಾಜು, ಕಸಾಪ ಎಲ್.ಚೇತನ್ ಕುಮಾರ್‌, ಮುಖಂಡರಾದ‌ ಕಿರಣ್‌ ಶಂಕರ್‌, ಸುರೇಶ್‌, ಎಚ್. ಮಲ್ಲಿಕಾರ್ಜುನಯ್ಯ, ಬೋರಯ್ಯ, ಮಕಾಮಿ, ಚಿಕ್ಕಣ್ಣ, ಸಂದೇಶ್‌, ಸುರೇಶ್, ಶಂಕರ್, ಬಿ.ಎಸ್.ಮಹದೇವಯ್ಯ, ಶ್ರೀಧರ್, ಮಹದೇವಪ್ಪ, ಪುಟ್ಟಸ್ವಾಮಿ, ಎಂ.ಆರ್.ಪ್ರಸಾದ್, ಚುಂಚಣ್ಣ, ಶಿವಣ್ಣ, ರಾಜು, ಶಿವಕುಮಾರ್, ಬಲರಾಮ್‌, ಕೃಷ್ಣಮೂರ್ತಿ, ಲೋಕೇಶ್, ಸಿದ್ದರಾಜು ಪಾಲ್ಗೊಂಡಿದ್ದರು.