ಇತ್ತೀಚಿನ ದಿನಗಳಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ಕಳ್ಳರು ಹೆಚ್ಚಾಗುತ್ತಿದ್ದಾರೆ. ಶಿರಸಿಯ ಸಹಾಯ ಟ್ರಸ್ಟ್ ವತಿಯಿಂದ 41 ಮಕ್ಕಳನ್ನು ಕಾನೂನುಬದ್ಧವಾಗಿ ಸ್ವದೇಶ, ವಿದೇಶಕ್ಕೆ ದತ್ತು ಕೊಡಲಾಗಿದೆ.
ಶಿರಸಿ: ಇಂದಿಗೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಅಸಾಂಸ್ಥಿಕ ರಕ್ಷಣಾ ಅಧಿಕಾರಿ ಸುನಿಲ್ ಗಾಂವ್ಕರ್ ಕಳವಳ ವ್ಯಕ್ತಪಡಿಸಿದರು.ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಹಾಯ ಟ್ರಸ್ಟ್, ವಿಶೇಷ ದತ್ತು ಮಕ್ಕಳ ಕೇಂದ್ರ ಮರಾಠಿಕೊಪ್ಪ, ಶಿರಸಿ ಇವರ ಸಹಯೋಗದಲ್ಲಿ ಎಂಇಎಸ್ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ಕಳ್ಳರು ಹೆಚ್ಚಾಗುತ್ತಿದ್ದಾರೆ. ಶಿರಸಿಯ ಸಹಾಯ ಟ್ರಸ್ಟ್ ವತಿಯಿಂದ 41 ಮಕ್ಕಳನ್ನು ಕಾನೂನುಬದ್ಧವಾಗಿ ಸ್ವದೇಶ, ವಿದೇಶಕ್ಕೆ ದತ್ತು ಕೊಡಲಾಗಿದೆ ಎಂದರು.ನಿಜವಾಗಲೂ ಸಹಾಯ ಟ್ರಸ್ಟ್ ಸ್ಥಾಪಕರಾದ ಸತೀಶ್ ರಾಮಾಶೆಟ್ಟಿ ಅವರು ತೋರುವ ಸಮಾಜ ಸೇವೆ ಮತ್ತು ಅನಾಥ ಮಕ್ಕಳ ಸೇವೆ ಮಾಡುವುದೆಂದರೆ ಅವರಿಗೆ ಅಚ್ಚುಮೆಚ್ಚು ಎಂದು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸತೀಶ್ ರಾಮಾ ಶೆಟ್ಟಿ ಅವರು, ನಿರಂತರವಾಗಿ ನಾನು 40 ವರ್ಷಗಳಿಂದ ಬಡವರು, ಶೋಷಿತರು ಮತ್ತು ಅನಾಥ ಮಕ್ಕಳ ಹಾಗೂ ಅನಾಥ ತಂದೆ- ತಾಯಿಗಳನ್ನು ರಕ್ಷಣೆ ಮಾಡುತ್ತ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದೇನೆ. ಇದರಿಂದ ನನಗೆ ನನ್ನ ಕುಟುಂಬಕ್ಕೆ ಸಂತಸವಿದೆ ಎಂದರು.ಎಂಇಎಸ್ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಶೋಕ್ ಎನ್ ಭಟ್ಕಳ ಅವರು ಮಾತನಾಡಿದರು. ಕಾನೂನು ಮಹಾವಿದ್ಯಾಲಯದ ಜಿ.ಎಸ್. ರುಶಾಲಿ ಸೆಂಡಿಗೆ, ವಿರಾಟ್ ನಾಗೇಕರ ಸೇರಿದಂತೆ ನೂರಾರು ಕಾನೂನು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರಿಯಾಂಕ ಹೆಗಡೆ ಪ್ರಾರ್ಥನೆ ಗೀತೆ ಹಾಡಿದರು. ಮಲ್ಲಿಕಾ ಸ್ವಾಗತಿಸಿದರು. ವಿದ್ಯಾ ಗೌಡ ನಿರೂಪಿಸಿ, ವಂದಿಸಿದರು.