ಬಂಕಾಪುರ ಪಟ್ಟಣದ ಬಸ್ ಸ್ಟ್ಯಾಂಡ್ ಹತ್ತಿರದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಗೆ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಬಳಿಗಾರ ಧರ್ಮ ಧ್ವಜಾರೋಹಣ ನೆರವೇರಿಸುವ ಮುಖಾಂತರ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದರು.
ಬಂಕಾಪುರ: ಪಟ್ಟಣದ ಬಸ್ ಸ್ಟ್ಯಾಂಡ್ ಹತ್ತಿರದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಗೆ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಬಳಿಗಾರ ಧರ್ಮ ಧ್ವಜಾರೋಹಣ ನೆರವೇರಿಸುವ ಮುಖಾಂತರ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಬಾರಿಯೂ ಕೂಡ ಸೆಪ್ಟೆಂಬರ್ 14ಕ್ಕೆ ಶ್ರೀ ಹಿಂದೂ ಮಹಾ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. 21 ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಗಣೇಶನ ಮಹಾ ಮಂಟಪದಲ್ಲಿ ಭಕ್ತಿಗೀತೆಗಳ ಗಾಯನ, ರುದ್ರಪಠಣ, ಭಜನೆ, ಡೊಳ್ಳು ಕುಣಿತ, ಕೀರ್ತನೆ ಮುಂತಾದ ಕಾರ್ಯಕ್ರಮಗಳ ಮುಕ್ತ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ದಿನನಿತ್ಯದ ಪೂಜೆಯ ನಂತರ ಭಕ್ತರಿಗೆ ಪ್ರಾತಃಕಾಲ ಹಾಗೂ ಸಂಜೆ ಪ್ರಸಾದ ವಿತರಣೆ ಮಾಡಲಾಗುವುದು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪ್ರತಿವರ್ಷದಂತೆ ಈ ಬಾರಿಯೂ ತಮ್ಮ ಭಕ್ತಿ ಸೇವೆ ಸಲ್ಲಿಸಲು ಭಕ್ತ ಸಮೂಹಕ್ಕೆ ತಿಳಿಸಿದರು.ಗದಿಗಯ್ಯ ಹುಣಸೀಕಟ್ಟಿಮಠ ಇವರು ಭೂಮಿಪೂಜೆ ಹಾಗೂ ಧ್ವಜಕಂಬಕ್ಕೆ ಪೂಜೆ ನೆರವೇರಿಸಿದರು. ಸೇವಾ ಸಮಿತಿ ಸದಸ್ಯರಾದ ಸೋಮಶೇಖರ ಗೌರಿಮಠ, ಮಹಾಬಳೇಶ ಹೊನಕೇರಿ, ಹೊನ್ನಪ್ಪ ಹೂಗಾರ, ಗಂಗಾಧರ ಮಾಮ್ಲೆಪಟ್ಟಣಶೆಟ್ಟರ , ಮೋಹನ ಮಿರಜಕರ, ಶಿವಾನಂದ ದೇವಸೂರ, ಸುರೇಶ ರಾಣೋಜಿ, ಮುತ್ತು ಕುರಿ, ಮಂಜುನಾಥ ಗುಡಗೇರಿ ಮತ್ತಿತರರು ಉಪಸ್ಥಿತರಿದ್ದರು.