ಚಕ್ರಬಾವಿಯಲ್ಲಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

| Published : Dec 05 2024, 01:32 AM IST

ಸಾರಾಂಶ

ಮಾಗಡಿ: ಚಕ್ರಬಾವಿ ಗ್ರಾಮದಲ್ಲಿ 1.30 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಚಾಲನೆ ನೀಡಿದರು.

ಮಾಗಡಿ: ಚಕ್ರಬಾವಿ ಗ್ರಾಮದಲ್ಲಿ 1.30 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಚಾಲನೆ ನೀಡಿದರು.

ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಾಸಕರ ಸ್ವಗ್ರಾಮ ಚಕ್ರಬಾವಿಯಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ಈಗ ಬಾಕಿ ಇರುವ ರಸ್ತೆ, ಚರಂಡಿ ಕಾಮಗಾರಿಯನ್ನು ವಿಶ್ವೇಶ್ವರಯ್ಯ ಜಲ ನಿಗಮದಿಂದ ಬಾಕಿ ಉಳಿದಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು. ಚಕ್ರಬಾವಿ ಗ್ರಾಮದಲ್ಲಿ 4 ಕೋಟಿ ರು. ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಶತಮಾನ ಕಳೆದಿರುವ ಚಕ್ರಬಾವಿ ಪ್ರಾಥಮಿಕ ಸರ್ಕಾರಿ ಶಾಲಾ ಕಟ್ಟಡಕ್ಕೂ ಶೀಘ್ರದಲ್ಲೇ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಎ.ಮಂಜುನಾಥ್ ಅವರನ್ನು ನೋಡಿ ಬಹಳ ದಿನಗಳಾಗಿದ್ದು, ರಾಜಕೀಯವಾಗಿ ನಾವು ವಿರೋಧಿಗಳಾದರೂ ವೈಯಕ್ತಿಕವಾಗಿ ಇಬ್ಬರು ಪರಸ್ಪರ ಗೌರವಿಸುತ್ತೇವೆ. ಕಳೆದ ಒಂದೂವರೆ ವರ್ಷಗಳಿಂದ ಎ. ಮಂಜುನಾಥ್ ಅವರು ತಾಲೂಕಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಬಾಲಕೃಷ್ಣ ಸಂಕ್ಷಿಪ್ತವಾಗಿ ಉತ್ತರ ಕೊಡುತ್ತಾರೆ. ತಾಲೂಕು ಕಚೇರಿಗೆ ಎ.ಮಂಜುನಾಥ್‌ ಬರಲಿ, ನಾನು ಬರುತ್ತೇನೆ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡೋಣ. ಕೆಶಿಪ್ ರಸ್ತೆ ಕಾಮಗಾರಿ ಯಾವುದೇ ಅಡೆ-ತಡೆ ಇಲ್ಲದ ಜಾಗದಲ್ಲಿ ಸುದೀರ್ಘವಾಗಿ ಕಾಮಗಾರಿ ಮುಂದುವರಿದಿದೆ. ಈಗ ಕಾಮಗಾರಿಗೆ ಕ್ಲಿಷ್ಟಕರ ಸ್ಥಳಗಳಿರುವುದರಿಂದ ಕಾಮಗಾರಿ ಸ್ವಲ್ಪ ನಿಧಾನವಾಗಿದೆಯೇ ಹೊರತು ಕಾಮಗಾರಿ ನಿಂತಿಲ್ಲ. ತಾವು ಮಾತ್ರ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೀರಾ ಉಳಿದವರು ಮಾಡಿಲ್ಲ ಎಂಬ ಆರೋಪ ಮಾಡುವುದು ಬೇಡ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿಕೆಗೆ ಎಚ್.ಎನ್.ಅಶೋಕ್ ಉತ್ತರಿಸಿದರು.

ಈ ವೇಳೆ ಜೊಟ್ಟನಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಜೆ.ಪಿ. ಚಂದ್ರೇಗೌಡ, ತಾಪಂ ಮಾಜಿ ಅಧ್ಯಕ್ಷರಾದ ಕಾಂತಾರಾಜು, ಸೀಗೇಕುಪ್ಪೆ ಶಿವಣ್ಣ, ಮಾರೇಗೌಡ, ಕೋರಮಂಗಲ ಶಿವಣ್ಣ, ಸಿ.ಎನ್.ದೀಪಕ್, ಸೀಗೇಕುಪ್ಪೆ ಗ್ರಾಪಂಅಧ್ಯಕ್ಷೆ ಶಶಿಕಲಾ ಸ್ವಾಮಿ, ಸದಸ್ಯರಾದ ಹನುಮೇಗೌಡ, ಶಿವಕುಮಾರ್, ರಂಗನಾಥ್, ವಿಎಸ್ ಎಸ್ ಎನ್‌ ಇಒ ಬೈರೇಶ್, ಗುತ್ತಿಗೆದಾರ ಶ್ರೀಧರ್, ಜಗದೀಶ್, ಚಂದ್ರ, ಸುರೇಶ್, ದೇವರಾಜು, ಸೋಮಶೇಖರ್, ರಾಜಣ್ಣ ಇತರರು ಭಾಗವಹಿಸಿದ್ದರು.

4ಮಾಗಡಿ1 :

ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಭೂಮಿಪೂಜೆ ನೆರವೇರಿಸಿದರು.