ಸಾರಾಂಶ
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದಶಕದ ಆಡಳಿತದಲ್ಲಿ ಜನರ ಮೂಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಲ್ಲ. 50 ವರ್ಷಗಳ ಹಿಂದೆ ಇದ್ದ ನಿರುದ್ಯೋಗ ಪ್ರಮಾಣ ಇಂದು ಅತ್ಯಧಿಕವಾಗಿದೆ. ಅಚ್ಚೇ ದಿನ್, ಹೊಳೆಯುತ್ತಿರುವ ಭಾರತ ಎಂಬ ಬಿಜೆಪಿ ಘೋಷಣೆ ವಾಸ್ತವದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ.
ಮಸ್ಕಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದಶಕದ ಆಡಳಿತದಲ್ಲಿ ಜನರ ಮೂಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಲ್ಲ. 50 ವರ್ಷಗಳ ಹಿಂದೆ ಇದ್ದ ನಿರುದ್ಯೋಗ ಪ್ರಮಾಣ ಇಂದು ಅತ್ಯಧಿಕವಾಗಿದೆ. ಅಚ್ಚೇ ದಿನ್, ಹೊಳೆಯುತ್ತಿರುವ ಭಾರತ ಎಂಬ ಬಿಜೆಪಿ ಘೋಷಣೆ ವಾಸ್ತವದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ ಎಂದು ಕೆಆರ್‌ಎಸ್ ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರವಿರುವ ಡಾ.ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ರೈತರ ರಾಷ್ಟ್ರವ್ಯಾಪಿ ಮುಷ್ಕರ ಹಾಗೂ ಕೈಗಾರಿಕಾ ವಲಯ ಗ್ರಾಮೀಣ ಬಂದ್ ಆಗ್ರಹಿಸಿ ಶುಕ್ರವಾರ ಕರ್ನಾಟಕ ರೈತ ಸಂಘ ಹಾಗೂ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಪ್ರತಿಭಟನೆ ನಡೆಸಿ ಮಾತನಾಡಿದರು.ರೈತರ ಆದಾಯ ದ್ವಿಗುಣಗೊಳಿಸುವುದು. ಬೆಳೆಗಳಿಗೆ ಕನಿಷ್ಠ ದರ (ಎಂಎಸ್ಪಿ) ನಿಗದಿ ಮಾಡಬೇಕು. ಬೀಜದ ಮೇಲಿನ ಸಬ್ಸಿಡಿ ಶೇ.50 ರಷ್ಟು ಹೆಚ್ಚಳ ಮಾಡಬೇಕು. 4 ಕಾರ್ಮಿಕ ಸಂಹಿತೆ ವಾಪಸ್ ಪಡೆಯಬೇಕು. ನರೇಗಾ ಯೋಜನೆಯಡಿ ಕಾರ್ಮಿಕರಿಗೆ 500 ರು. ಕೂಲಿ ನಿಗದಿ ಮಾಡಿ ವರ್ಷಪೂರ್ತಿ ಕೆಲಸ ನೀಡಬೇಕು ಹಾಗೂ ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ವೆಂಕಟೇಶ್ ನಾಯಕ್ ಚಿಲಕರಾಗಿ, ಅಂಬರೀಶ್ ಕಾಮನಕಲ್ಲೂರು, ತಿರುಪತಿ ಮಸ್ಕಿ ಇದ್ದರು.