ನುಜ್ಜಿ ಗ್ರಾಮದಿಂದ ಬಾಡಪೋಲಿ ತನಕ ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ(34) ರಸ್ತೆಯಲ್ಲಿ 6 ಕಿಮೀ ಸಂಪೂರ್ಣ ಹೊಂಡಮಯವಾಗಿದೆ.
ಜೋಯಿಡಾ: ತಾಲೂಕಿನ ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ 34 ಜೋಯಿಡಾದ ನುಜ್ಜಿಯಿಂದ ಬಾಡಪೋಲಿ ತನಕ ಸಂಪೂರ್ಣ ಹಾಳಾಗಿದೆ. ಸರಿಪಡಿಸುವಂತೆ ಒತ್ತಾಯಿಸಿ ನ. 20ರಂದು ಅಣಶಿಯಲ್ಲಿ ರಸ್ತೆತಡೆ ಮಾಡುವುದಾಗಿ ತಾಲೂಕು ಕುಣಬಿ ಸಮಾಜದ ಮುಖಂಡರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.ತಾಲೂಕಿನ ನುಜ್ಜಿಗ್ರಾಮ ದಿಂದ ಬಾಡಪೋಲಿ ತನಕ ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ(34) ರಸ್ತೆಯಲ್ಲಿ 6 ಕಿಮೀ ಸಂಪೂರ್ಣ ಹೊಂಡಮಯವಾಗಿದೆ. ಜಿಲ್ಲಾ ಕೇಂದ್ರ ಕಾರವಾರಕ್ಕೆ ಸಂಪರ್ಕ ಸಾಧಿಸುವ ಪ್ರಮುಖ ರಸ್ತೆಯಾಗಿದೆ. ಶಾಲಾ ವಿದ್ಯಾರ್ಥಿಗಳು, ಗರ್ಭಿಣಿಯರು, ಬಾಣಂತಿಯರು, ವಯಸ್ಸಾದವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆ ಸರಿಪಡಿಸುವಂತೆ ಅನೇಕ ಸಲ ಇಲಾಖೆಗೆ ಕೇಳಿಕೊಳ್ಳಲಾಗಿದೆ. ಆದರೆ ಲೋಕೋಪಯೋಗಿ ಇಲಾಖೆ ಕಾಲಹರಣ ಮಾಡುತ್ತಿದೆ. ನ. 20ರಂದು ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ(34) ಅಣಶಿಯಲ್ಲಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಕುಣಬಿ ಸಮಾಜದ ತಾಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ್, ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ, ಉಪಾಧ್ಯಕ್ಷ ಕೃಷ್ಣ ಮಿರಾಶಿ, ಕಾರ್ಯದರ್ಶಿ ದಯಾನಂದ ಕುಮಗಾಳಕ, ಖಜಾಂಚಿ ದಿವಾಕರ ಕುಂಡಲಕರ, ಅಜಿತ್ ಮಿರಾಶಿ, ರಾಜೇಶ್ ಗಾವಡಾ ಮುಂತಾದವರು ಇದ್ದರು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಸಭೆಯಲ್ಲಾಪುರ: ತಾಲೂಕು ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಸಭೆ ಮಂಗಳವಾರ ನಡೆಯಿತು.ಸಮಿತಿ ಅಧ್ಯಕ್ಷ ದೇವಿದಾಸ ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಧನವಾಡಕರ್, ಸಮಿತಿಯ ಸದಸ್ಯ ಕಾರ್ಯದರ್ಶಿ, ಸಮಿತಿ ಸದಸ್ಯರಾದ ಟಿ.ಸಿ. ಗಾಂವ್ಕರ್, ಅನಿಲ್ ಮರಾಠೆ, ಶಿವಾನಂದ ನಾಯ್ಕ್, ಅನಂತ ಕೋಟೆಮನೆ, ನರ್ಮದಾ ನಾಯ್ಕ್, ಮುಷರತ್ ಖಾನ್, ಸಿಡಿಪಿಒ, ಆಹಾರ ಇಲಾಖೆ, ಸಾರಿಗೆ ಇಲಾಖೆ, ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಇದ್ದರು.ಅಧಿಕಾರಿಗಳು ತಮ್ಮ ತಮ್ಮ ಇಲಾಖಾ ಪ್ರಗತಿ ವರದಿ ನೀಡಿದರು. ಬಸ್ ವೇಳಾಪಟ್ಟಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಚರ್ಚಿಸಲಾಯಿತು. ವಿಮಲಪ್ಪ ಸ್ವಾಗತಿಸಿದರು. ಅನಿಲ್ ಮರಾಠೆ ವಂದಿಸಿದರು.