ಸಾರಾಂಶ
ವಿದ್ಯಾಕಾಂತರಾಜ್ಕನ್ನಡಪ್ರಭ ವಾರ್ತೆ ಸಕಲೇಶಪುರ ಜೆಜೆಎಂ ಕುಡಿಯುವ ನೀರಿನ ಕಾಮಗಾರಿಯಿಂದಾಗಿ ತಾಲೂಕಿನ ರಸ್ತೆಗಳು ಬಾರಿ ಪ್ರಮಾಣದಲ್ಲಿ ದುಸ್ತಿತಿಗಿಡಾಗುತ್ತಿದ್ದರೆ ಮತ್ತೊಂದೆಡೆ ವಿವಿಧ ಇಲಾಖೆ ಅಧಿಕಾರಿಗಳ ನಡುವಿನ ಸೌಹಾರ್ಧತೆಯನ್ನು ಈ ಯೋಜನೆ ಹಾಳಾಗುತ್ತಿದೆ. ಕಳೆದ ನಾಲ್ಕುವರ್ಷದಿಂದ ಜೆಜೆಎಂ ಯೋಜನೆಯಡಿ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭವಾಗಿದ್ದು, ತಾಲೂಕಿನ ಒಟ್ಟು 244 ಗ್ರಾಮಗಳಲ್ಲಿ ಈ ಕಾಮಗಾರಿ ನಡೆಯಬೇಕಿದೆ. ಆದರೆ, ಇದುವರಗೆ ಮೊದಲ ಹಂತದಲ್ಲಿ 40 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಎರಡನೇ ಹಂತದಲ್ಲಿ 27 ಕಾಮಗಾರಿಗಳು ಪ್ರಸಕ್ತ ವರ್ಷ ಉಳಿದೆಲ್ಲ ಕಾಮಗಾರಿಗಳಿಗೂ ಟೆಂಡರ್ ಪ್ರಕ್ರಿಯೆ ಮುಗಿದಿದೆ.ಯೋಜನೆ ಜಾರಿಯಾಗಿ 4 ವರ್ಷವಾದರೂ 30 ಗ್ರಾಮಗಳಿಗೆ ಮಾತ್ರ ನೀರು ಸರಬರಾಜಾಗಿದೆ ಎಂಬುದು ಅಧಿಕಾರಿಗಳು ಮಾತು. ಕಾಮಗಾರಿ ಮುಕ್ತಾಯಗೊಂಡಿದೆ ಎನ್ನಲಾಗುವ ಗ್ರಾಮಗಳಲ್ಲಿ ಸಮರ್ಪಕ ನೀರು ದೊರಕುತ್ತಿಲ್ಲ. ಈ ಯೋಜನೆಗಾಗಿ ರಸ್ತೆಗಳ ಇಕ್ಕೆಲಗಳನ್ನು ಬಗೆಯಲಾಗಿದ್ದು, ಹಲವೆಡೆ ರಸ್ತೆಗಳನ್ನು ತುಂಡರಿಸಲಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಡಕಾಗಿದ್ದು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಒಂದೆಡೆ ಜೆಜೆಎಂ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿದ್ದರೆ ಮತ್ತೊಂದಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹ ಭರದಿಂದ ಸಾಗಿದೆ.
ಈಗಾಗಲೇ ಜೆಜೆಎಂ ಕಾಮಗಾರಿ ನಡೆದಿರುವ ಪ್ರದೇಶದಲ್ಲಿ ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಯುತ್ತಿದೆ. ಜೆಜೆಎಂ ಯೋಜನೆಯಲ್ಲಿ ಹಾಕಿದ್ದ ಪೈಪ್ ಕಿತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಹಾಕಲಾಗುತ್ತಿದೆ. ಇದರಿಂದಾಗಿ ಬಾರಿ ಪ್ರಮಾಣದಲ್ಲಿ ರಸ್ತೆಗಳು ದುಸ್ತಿತಿಗೀಡಾಗುತ್ತಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಈ ಯೋಜನೆ ಗೂರೂರು ಡ್ಯಾಮ್‌ನಿಂದ ತಾಲೂಕಿಗೆ ಕುಡಿಯುವ ನೀರಿನ ಒದಗಿಸುತ್ತದೆ. ₹೯೨ ಕೋಟಿ ವೆಚ್ಚದಲ್ಲಿ ತಾಲೂಕಿನ ೨೬ ಗ್ರಾಪಂ ಪೈಕಿ ಹೆಗದ್ದೆ ಹಾಗೂ ಹೊಂಗಡಹಳ್ಳ ಗ್ರಾಪಂ ಹೊರತುಪಡಿಸಿ ೨೪ ಗ್ರಾಪಂಗಳ ೪೮೫ ಗ್ರಾಮಗಳಿಗೆ ಈ ಯೋಜನೆಯಿಂದ ಶುದ್ದ ಕುಡಿಯುವ ನೀರು ದೊರೆಯಲಿದೆ ಎಂಬುದು ಅಧಿಕಾರಿಗಳ ಮಾತು. ಈ ಯೋಜನೆಯಡಿ ಒಟ್ಟು ೩೪ ಪ್ರದೇಶಗಳಲ್ಲಿ ಜೋನಲ್ ಬ್ಯಾಲೇನ್ಸಿಂಗ್ ಟ್ಯಾಂಕ್ ನಿರ್ಮಾಣ ಮಾಡುವ ಮೂಲಕ ವಿವಿಧ ಗ್ರಾಮಗಳಿಗೆ ನೀರು ನೀಡಲು ಉದ್ದೇಶಿಸಿದ್ದು ೨ ಇಂಚಿನಿಂದ ೧.೫ ಅಡಿ ವ್ಯಾಸದ ಪೈಪ್ ಹಾಕುತ್ತಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಅಧಿಕಾರಿಗಳ ನಡುವೆ ಮುನಿಸು: ಲೋಕೋಪಯೋಗಿ ಸೇರಿದ ರಸ್ತೆಗಳ ಸಮೀಪದಲ್ಲಿ ಕಾಮಗಾರಿ ಕೈಗೊಳ್ಳಬೇಕಾದರೆ ಇಲಾಖೆಯ ಅನುಮತಿ ಪಡೆಯಬೇಕು. ಅನುಮತಿ ಪಡೆಯದೆ ಕಾಮಗಾರಿ ನಡೆಸಲಾಗುತ್ತಿದೆ. ಬಾರಿ ಪ್ರಮಾಣದ ಹೊಂಡ ತೊಡುವುದಿರಂದ ಅಪಘಾತಕ್ಕೆ ಕಾರಣವಾಗುತ್ತಿದೆ. ತಾಲೂಕಿನ ಹಲವು ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದೆರ್ಜೆಗೆ ಏರಿದ್ದು ರಸ್ತೆ ವಿಸ್ತರಣೆಗೆ ಅನುದಾನ ಬಿಡುಗಡೆಯಾಗಿದೆ. ಆದರೆ, ರಸ್ತೆ ಬದಿ ಪೈಪ್ ಆಳವಡಿಸುವುದರಿಂದ ರಸ್ತೆ ಅಗಲೀಕರಣ ಅಸಾಧ್ಯವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಲವೆಡೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಗುತ್ತಿಗೆದಾರರ ಮೇಲೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯ ವ್ಯಾಪ್ತಿಯನ್ನು ನಿರ್ಧಾರಿಸಿಲ್ಲ. ದೂರವಾಣಿ ಸಂಪರ್ಕ ಕೇಬಲ್, ಗ್ರಾಪಂ ಕುಡಿಯುವ ನೀರಿನ ಪೈಪ್ ಹಾಕಲಾಗಿದೆ. ಕುಡಿಯುವ ನೀರಿನ ಕಾಮಗಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಪ್ರತಿ ಕೆ.ಡಿ.ಪಿ ಸಭೆಯಲ್ಲೂ ಕೇಳಿ ಬರುತ್ತಿದೆ.ಜೆಜೆಎಂ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಲೋಕೋಪಯೋಗಿ ಇಲಾಖೆ ರಸ್ತೆಗಳು ಬಾರಿ ಪ್ರಮಾಣದಲ್ಲಿ ದುಸ್ತಿತಿಗೀಡಾಗಿವೆ. ಈ ಬಗ್ಗೆ ಎರಡು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ಹಲವೆಡೆ ಕಾಮಗಾರಿ ಸ್ಥಗಿತಗೊಳಿಸಿ ಠಾಣೆಗೆ ದೂರು ನೀಡಿದ್ದೇವೆ.
ಮುರುಗೇಶ್ ಸಹಾಯಕ ಕಾರ್ಯಪಾಲಕ ಅಭಿಯಂತರ ಸಕಲೇಶಪುರಕಾಮಗಾರಿಗೆ ಒಪ್ಪಿಗೆ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಇದರ ಆಧಾರದ ಮೇಲೆ ಪರಿಶೀಲಿಸಿ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ನಾಲ್ಕು ಕೋಟಿ ರಸ್ತೆಗಳು ಹದಗೆಟ್ಟಿದ್ದು ಅನುದಾನದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳುಗೆ ವರದಿ ನೀಡಿದ್ದಾರೆ. ಇದನ್ನು ತುಂಬಲು ನಮ್ಮ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಆದರೂ ವಿನಃಕಾರಣ ಕೆಲಸಕ್ಕೆ ಅಡ್ಡಿಪಡಿಸಲಾಗುತ್ತಿದೆ.
ಹರೀಶ್ ಸಹಾಯಕ ಕಾರ್ಯಪಾಲಕ ಅಭಿಯಂತರ