ದೊಡ್ಡಬಳ್ಳಾಪುರ: ಇಲ್ಲಿನ ಕೆಮ್ಮಣ್ಣುಗುಂಡಿ ಸ್ಮಶಾನ ರಸ್ತೆಯನ್ನು ಪ್ರಭಾವಿಯೊಬ್ಬರು ಅತಿಕ್ರಮಿಸಿದ್ದು, ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನ ಹೋರಾಟ ಸಮಿತಿ ತಾಲೂಕು ಆಡಳಿತಕ್ಕೆ ನೀಡಿದ ದೂರಿನನ್ವಯ ವರ್ಷಗಳು ಕಳೆದರೂ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಹೋರಾಟ ಸಮಿತಿ ನ.25ರಂದು ನಿರಶನ ನಡೆಸಲು ತೀರ್ಮಾನಿಸಿದೆ

ದೊಡ್ಡಬಳ್ಳಾಪುರ: ಇಲ್ಲಿನ ಕೆಮ್ಮಣ್ಣುಗುಂಡಿ ಸ್ಮಶಾನ ರಸ್ತೆಯನ್ನು ಪ್ರಭಾವಿಯೊಬ್ಬರು ಅತಿಕ್ರಮಿಸಿದ್ದು, ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನ ಹೋರಾಟ ಸಮಿತಿ ತಾಲೂಕು ಆಡಳಿತಕ್ಕೆ ನೀಡಿದ ದೂರಿನನ್ವಯ ವರ್ಷಗಳು ಕಳೆದರೂ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಹೋರಾಟ ಸಮಿತಿ ನ.25ರಂದು ನಿರಶನ ನಡೆಸಲು ತೀರ್ಮಾನಿಸಿದೆ.

ನಗರದ ಕನಕ ಭವನದಲ್ಲಿ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನ ಹೋರಾಟ ಸಮಿತಿ ಸಭೆಯಲ್ಲಿ ಅನಿರ್ದಿಷ್ಟಾವಧಿ ನಿರಶನ ನಿರ್ಧಾರ ಕುರಿತು ಸಮಿತಿ ಮುಖಂಡ ಸಂಜೀವ್ ನಾಯಕ್, ಸು. ನರಸಿಂಹ ಮೂರ್ತಿ, ಡಿ. ಪಿ. ಆಂಜನೇಯ, ರವಿಕುಮಾರ್ ಮತ್ತಿತರರು ಮಾತನಾಡಿ, ಕೆಲವು ವರ್ಷಗಳಿಂದ ಒತ್ತುವರಿ ಆಗಿರುವ ಸ್ಮಶಾನದ ದಾರಿಯನ್ನು ತೆರವು ಗೊಳಿಸುವಂತೆ ಕೋರಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದು ಜೊತೆಗೆ ಪ್ರತಿಭಟನೆಗಳು ನಡೆದಿಸಿದ್ದೆವು. ಸ್ಥಳೀಯ ಆಡಳಿತ ಸ್ಮಶಾನ ಜಾಗದ ರಸ್ತೆ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಈ ವಿಚಾರದಲ್ಲಿ ಅಧಿಕಾರಿಗಳು ಒತ್ತುವರಿದಾರರ ಜೊತೆ ಶಾಮಿಲಾಗಿರುವ ಅನುಮಾನವಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು ಸೇರಿದಂತೆ ಎಲ್ಲಾ ಪ್ರಮುಖರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ಖಂಡಿಸಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ನ.25ರಂದು ಅನಿರ್ದಿಷ್ಟಾವದಿ ನಿರಶನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಹೋರಾಟ ಸಮಿತಿ ಮುಖಂಡರಾದ ಅರುಣ್ ಕುಮಾರ್, ನವೀನ್ ಕುಮಾರ್, ಮುದ್ದುಕೃಷ್ಣ, ಶ್ರೀನಿವಾಸ್ ಇತರರು ಭಾಗವಹಿಸಿದ್ದರು.

22ಕೆಡಿಬಿಪಿ3-

ದೊಡ್ಡಬಳ್ಳಾಪುರದ ಕೆಮ್ಮಣ್ಣುಗುಂಡಿ ಸ್ಮಶಾನ ರಸ್ತೆ ಒತ್ತುವರಿ ಸಂಬಂಧ ಕ್ರಮಕ್ಕೆ ಆಗ್ರಹಿಸಿ ಹೋರಾಟ ಸಮಿತಿ ಸಭೆ ನಡೆಯಿತು.