ಸಾರಾಂಶ
ಅರಸೀಕೆರೆ: ಬಾಣಾವರದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿದ್ದ ಗುಂಡಿಯನ್ನು ಸಿಮೆಂಟ್ ಮತ್ತು ಜಲ್ಲಿ ಹಾಕಿ ಮುಚ್ಚುವ ಕಾರ್ಯವನ್ನು ಸ್ಥಳೀಯ ಯುವ ಕಾಂಗ್ರೆಸ್ ಮುಖಂಡ ಇಮ್ರಾನ್ ಮತ್ತು ಅವರ ಸ್ನೇಹಿತರು ಕೈಗೊಂಡಿದ್ದಾರೆ. ಈ ಕಾರ್ಯದಿಂದ ಪ್ರತಿನಿತ್ಯ ಸಂಚಾರಿಸುವ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಣಾವರ ಸರ್ಕಾರಿ ಆಸ್ಪತ್ರೆ, ಮಕ್ಕಳ ಮನೆ ಶಾಲೆ ಹಾಗೂ ಉಪ-ನೋಂದಣಾಧಿಕಾರಿ ಕಚೇರಿಗೆ ಸಂಪರ್ಕಿಸುವ ಮುಖ್ಯರಸ್ತೆಯಾಗಿ ಈ ರಸ್ತೆಯು ಬಳಕೆಯಾಗುತ್ತಿದ್ದು, ಪ್ರತಿದಿನ ನೂರಾರು ವಾಹನಗಳು ಹಾಗೂ ಪಾದಚಾರಿ ಸಾರ್ವಜನಿಕರು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ರಸ್ತೆ ಮಧ್ಯೆ ಬಿದ್ದಿದ್ದ ದೊಡ್ಡ ಗುಂಡಿ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು, ಇಮ್ರಾನ್ ಮತ್ತು ಅವರ ಸ್ನೇಹಿತರು ಯಾವುದೇ ಸರ್ಕಾರಿ ನೆರವಿಲ್ಲದೆ, ತಮ್ಮ ಹೊರತೊಂದರೆಯಿಂದ ಗುಂಡಿಯನ್ನು ಮುಚ್ಚಿದ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಸ್ಥಳೀಯರು ಮಾತನಾಡುತ್ತಾ, ಇಂತಹ ಕಾರ್ಯಗಳು ಇತರ ಯುವಕರಿಗೂ ಪ್ರೇರಣೆಯಾಗಲಿ ಎಂದು ಇಮ್ರಾನ್ ಮತ್ತು ತಂಡದ ಕಾರ್ಯವನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ಕೆ.ಟಿ.ಡಿಇ ಅಧ್ಯಕ್ಷ ಜಮೀರ್, ಸತ್ತಾರ್, ತಬ್ಬು,ಅಯಾನ್, ಗೌಸ್, ರಿಯಾನ್, ಸಮೀರ್, ಅಪನಾನ್, ಮೋಹಿನ್, ಚೋಟು, ಮೌಲಾ ಅಲಿ,ಆಟೋ ಮುಸ್ತಫಾ ಮತ್ತು ಇತರ ಸ್ಥಳೀಯ ಯುವಕರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))